B Sriramulu: ಚುನಾವಣೆಯಲ್ಲಿ ಸೋತ ಬಳಿಕ ಬಿಜೆಪಿ ಧುರೀಣ ಬಿ ಶ್ರೀರಾಮುಲು ಹತಾಷರಾಗಿದ್ದಾರೆ!

B Sriramulu: ಚುನಾವಣೆಯಲ್ಲಿ ಸೋತ ಬಳಿಕ ಬಿಜೆಪಿ ಧುರೀಣ ಬಿ ಶ್ರೀರಾಮುಲು ಹತಾಷರಾಗಿದ್ದಾರೆ!

ಅರುಣ್​ ಕುಮಾರ್​ ಬೆಳ್ಳಿ
|

Updated on: May 27, 2023 | 10:52 AM

ಹೊಸ ಸರ್ಕಾರ ಕುದುರಿಕೊಳ್ಳಲು ಸ್ವಲ್ಪ ಸಮಯ ನೀಡಬೇಕಾಗುತ್ತದೆ. 5 ಗ್ಯಾರಂಟಿಗಳ ಜಾರಿಗೆ ಆದೇಶ ಹೊರಡಿಸಲು ಸರ್ಕಾರ ಮೀನ ಮೇಷ ಎಣಿಸಿದರೆ ಟೀಕೆ ಆರಂಭಿಸಬಹುದು

ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಸೋತ ಕೆಲ ಬಿಜೆಪಿ ನಾಯಕರಿಗೆ ತಮಗೆ ಎದುರಾದ ಹಿನ್ನಡೆ ಅರಗಿಸಿಕೊಳ್ಳಲಾಗದೆ ಹತಾಷ ಸ್ಥಿತಿಯನ್ನು ತಲುಪಿದ್ದಾರೆ. ಫಲಿತಾಂಶಗಳ ಬಳಿಕ ಕೇವಲ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ಮಾತ್ರ ವಿವೇಕಯುಕ್ತ ಹೇಳಿಕೆ ನೀಡಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿದ್ದ ಬಿ ಶ್ರೀರಾಮುಲು (B Sriramulu) ದೇವನಹಳ್ಳಿಯಲ್ಲಿ ನೀಡಿರುವ ಹೇಳಿಕೆಯನ್ನು ಕೇಳಿಸಿಕೊಳ್ಳಿ. ಪೂರ್ಣಪ್ರಮಾಣದ ಸರ್ಕಾರ ಇನ್ನೂ ಅಸ್ತಿತ್ವಕ್ಕೆ ಬಂದಿಲ್ಲ, ಆಗಲೇ ಸರ್ಕಾರ ಸುಳ್ಳು ಆಶ್ವಾಸನೆಗಳನ್ನು ನೀಡಿ ಅಧಿಕಾಕರಕ್ಕೆ ಬಂದಿದೆ, ಜನ ಪಾಠ ಕಲಿಸಲಿದ್ದಾರೆ ಅಂತ ಶ್ರೀರಾಮುಲು ಹೇಳುತ್ತಾರೆ. ಹೊಸ ಸರ್ಕಾರ ಕುದುರಿಕೊಳ್ಳಲು (settle) ಸ್ವಲ್ಪ ಸಮಯ ನೀಡಬೇಕಾಗುತ್ತದೆ. 5 ಗ್ಯಾರಂಟಿಗಳ ಜಾರಿಗೆ ಆದೇಶ ಹೊರಡಿಸಲು ಸರ್ಕಾರ ಮೀನ ಮೇಷ ಎಣಿಸಿದರೆ ಟೀಕೆ ಆರಂಭಿಸಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ