Pastors meet CM: ಐವಾನ್ ಡಿಸೋಜಾರನ್ನು ಎಮ್ಮೆಲ್ಸಿ ಮಾಡುವಂತೆ ಸಿದ್ದರಾಮಯ್ಯರನ್ನು ಒತ್ತಾಯಿಸಿದ ಕ್ರೈಸ್ತ ಪಾದ್ರಿಗಳು

|

Updated on: Jul 06, 2023 | 12:44 PM

ತಮ್ಮ ಬೇಡಿಕೆಗೆ ಮುಖ್ಯಮಂತ್ರಿಯಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದೆ ಎಂದು ಫಾದರ್​ಗಳು ಹೇಳಿದರು.

ಬೆಂಗಳೂರು: ನಗರದಲ್ಲಿರುವ ಬೇರೆ ಬೇರೆ ಡಿನಾಮಿನೇಷನ್ ಚರ್ಚ್​ಗಳ ಪಾಸ್ಟರ್ (pastors), ಫಾದರ್, ಪ್ರೆಸ್​ಬೈಟರ್ ಇನ್-ಚಾರ್ಜ್ ಮತ್ತು ಮುಖಂಡರು ಇಂದು ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು (Siddaramaiah) ಅವರ ಅಧಿಕೃತ ನಿವಾಸದ ಬಳಿ ಭೇಟಿಯಾಗಿ ಕೆಲ ಮನವಿ ಪತ್ರಗಳನ್ನು ಸಲ್ಲಿಸಿದರು. ವಿಧಾನ ಸಭೆಯಲ್ಲಿ ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲಿ (Budget Session) ಭಾಗವಹಿಸಲು ವಿಧಾನ ಸೌಧಕ್ಕೆ ತಲುಪುವ ತರಾತುರಿಯಲ್ಲಿದ್ದ ಮುಖ್ಯಮಂತ್ರಿ ಪತ್ರಗಳನ್ನು ಸ್ವೀಕರಿಸಿದರು. ಕೆಲ ಪಾಸ್ಟರ್ ಗಳು ಮಾತಾಡುವ ಪ್ರಯತ್ನ ಮಾಡಿದಾಗ, ಮನವಿ ಪತ್ರದಲ್ಲಿ ಎಲ್ಲ ಹೇಳಿದ್ದಿರಲ್ಲ ಅಂತ ಸಿದ್ದರಾಮಯ್ಯ ಸಿಡುಕಿದರು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಕ್ರೈಸ್ತರು ತಮ್ಮ ಪ್ರಮುಖ ಬೇಡಿಕೆ ಏನೆಂದು ತಿಳಿಸಿದರು. ಕಾಂಗ್ರೆಸ್ ಮುಖಂಡ ಮತ್ತು ಮಾಜಿ ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜಾ (Ivan’ Souza) ಅವರನ್ನು ಮತ್ತೊಮ್ಮೆ ಪರಿಷತ್ ಸದಸ್ಯರಾಗಿ (MLC) ನೇಮಕ ಮಾಡಿಕೊಳ್ಳಬೇಕು ಎಂದು ಅವರು ಸಿಎಂಗೆ ಮನವಿ ಮಾಡಿಕೊಂಡಿದ್ದಾರೆ. ಮುಖ್ಯಮಂತ್ರಿಯಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದೆ ಎಂದು ಫಾದರ್ ಗಳು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ