Anna Bhagya Scheme; ಸರ್ಕಾರ ಕೆಜಿ ಅಕ್ಕಿಗೆ ರೂ. 34 ನೀಡಲು ತಯಾರಿದ್ದರೂ ಎಫ್ ಸಿಐ ಮುಕ್ತ ಮಾರುಕಟ್ಟೆಯಲ್ಲಿ ರೂ. 31ರಂತೆ ಮಾರುತ್ತಿದೆ: ಕೆಹೆಚ್ ಮುನಿಯಪ್ಪ
ಒಕ್ಕೂಟ ವ್ಯವಸ್ಥೆಯಲ್ಲಿ ಪ್ರತಿ ರಾಜ್ಯಕ್ಕೆ ಎಫ್ ಸಿ ಐನಿಂದ ಧಾನ್ಯಗಳನ್ನು ಕೊಳ್ಳುವ ಅಧಿಕಾರ ಇರುತ್ತದೆ. ಆದರೆ, ಆ ಅಧಿಕಾರವನ್ನೇ ಮೊಟಕುಗೊಳಿಸಲಾಗಿದೆ ಎಂದು ಸಚಿವ ಹೇಳಿದರು.
ದೆಹಲಿ: ಅನ್ನಭಾಗ್ಯ ಯೋಜನೆಯಡಿ (Anna Bhagya Scheme) ಬಿಪಿಎಲ್ ಕಾರ್ಡುದಾರರಿಗೆ ಚುನಾವಣೆಯಲ್ಲಿ ಭರವಸೆ ನೀಡಿದ ಹಾಗೆ ಅಕ್ಕಿ ಒದಗಿಸಲು ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಕೆಹೆಚ್ ಮುನಿಯಪ್ಪ (KH Muniyappa) ಪಡಿಪಾಟಲು ಮುಂದುವರಿಸಿದ್ದಾರೆ. ದೆಹಲಿಯಲ್ಲಿ ಭಾರತೀಯ ಆಹಾರ ನಿಗಮ ಮತ್ತು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಹೆ ಸಭೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸಚಿವ, ಎಫ್ ಸಿಐ (FCI) ಬಳಿ 15 ಲಕ್ಷ ಮೆಟ್ರಿಕ್ ಟನ್ ಅಕ್ಕಿ ದಾಸ್ತಾನು ಇದೆ, ಆದರೆ ಕರ್ನಾಟಕ ಸರ್ಕಾಕ ಪ್ರತಿ ಕೆಜಿಗೆ ರೂ 34 ರಂತೆ ನೀಡಿ ಖರೀದಿಸುವುದಾಗಿ ಹೇಳಿದರೂ ನಿಗಮ ಅಕ್ಕಿ ನೀಡುತ್ತಿಲ್ಲ. ನಮಗೆ ನೀಡುವ ಬದಲು ಮುಕ್ತ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ ರೂ. 31ರಂತೆ ಅಕ್ಕಿ ಮಾರಲಾಗುತ್ತಿದೆ ಎಂದು ಮುನಿಯಪ್ಪ ದೂರಿದರು. ಒಕ್ಕೂಟ ವ್ಯವಸ್ಥೆಯಲ್ಲಿ ಪ್ರತಿ ರಾಜ್ಯಕ್ಕೆ ಎಫ್ ಸಿ ಐನಿಂದ ಧಾನ್ಯಗಳನ್ನು ಕೊಳ್ಳುವ ಅಧಿಕಾರ ಇರುತ್ತದೆ. ಆದರೆ, ಆ ಅಧಿಕಾರವನ್ನೇ ಮೊಟಕುಗೊಳಿಸಿ, ರಾಜ್ಯ ಸರ್ಕಾರಕ್ಕೆ ದಾಸ್ತಾನು ಹೆಚ್ಚಿಸಿಕೊಳ್ಳುವ ಸಲಹೆ ನೀಡಲಾಗುತ್ತಿದೆ, ನಾವು ಅದನ್ನು 4.5 ಲಕ್ಷ ಮೆಟ್ರಿಕ್ ಟನ್ ಗಳಿಂದ 6 ಲಕ್ಷ ಮೆಟ್ರಿಕ್ ಟನ್ ಗಳಿಗೆ ಹೆಚ್ಚಿಸಲು ಸಿದ್ಧರಿದ್ದೇವೆ ಎಂದು ಸಚಿವ ಮುನಿಯಪ್ಪ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ