Heavy downpour in Coffeeland: ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಎಡಬಿಡದೆ ಮಳೆ, ತುಂಬಿ ಹರಿಯುತ್ತಿರುವ ತುಂಗೆ ಮತ್ತು ಹೇಮಾವತಿ ನದಿಗಳು

Heavy downpour in Coffeeland: ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಎಡಬಿಡದೆ ಮಳೆ, ತುಂಬಿ ಹರಿಯುತ್ತಿರುವ ತುಂಗೆ ಮತ್ತು ಹೇಮಾವತಿ ನದಿಗಳು

ಅರುಣ್​ ಕುಮಾರ್​ ಬೆಳ್ಳಿ
|

Updated on:Jul 06, 2023 | 10:56 AM

ನದಿಗಳಲ್ಲಿ ಒಳಹರಿವು ಹೆಚ್ಚಾಗಿರುವುದರಿಂದ ಮಳೆ ಇನ್ನೆರಡು ಹೀಗೆಯೇ ಮುಂದುವರಿದರೆ ಅವು ಉಕ್ಕವುದು ನಿಶ್ಚಿತ ಎಂದು ಹೇಳಲಾಗುತ್ತಿದೆ.

ಚಿಕ್ಕಮಗಳೂರು: ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕೆಲ ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆ ಚಿಕ್ಕಮಗಳೂರು (Chikmagalur) ಜಿಲ್ಲೆಗೂ ಹಬ್ಬಿದೆ. ಇಲ್ಲೂ ಎರಡು ದಿನಗಳಿಂದ ಧೋ ಅಂತ ಮಳೆ ಸುರಿಯುತ್ತಿದ್ದು ಪಶ್ಚಿಮ ಘಟ್ಟ (Western Ghats) ಸಾಲಿನ ನದಿಗಳು-ತುಂಗೆ, ಹೇಮಾವತಿ ನದಿಗಳು ತುಂಬಿ ಹರಿಯುತ್ತಿವೆ. ನದಿಗಳಲ್ಲಿ ಒಳಹರಿವು ಹೆಚ್ಚಾಗಿರುವುದರಿಂದ ಮಳೆ ಇನ್ನೆರಡು ಹೀಗೆಯೇ ಮುಂದುವರಿದರೆ ಅವು ಉಕ್ಕವುದು ನಿಶ್ಚಿತ ಎಂದು ಹೇಳಲಾಗುತ್ತಿದೆ. ಟಿವಿ9 ಕನ್ನಡ ವಾಹಿನಿ ಚಿಕ್ಕಮಗಳೂರರು ವರದಿಗಾರ ಒದಗಿಸಿರುವ ಮಾಹಿತಿ ಪ್ರಕಾರ ಕಳಸ, ಕುದುರೆಮುಖ, ಕೊಪ್ಪ, ಎನ್ ಆರ್ ಪುರ, ಮೂಡಿಗೆರೆ, ಬಣಕಲ್, ಕೊಟ್ಟಿಗೆಹಾರ ಮೊದಲಾದ ಸ್ಥಳಗಳಲ್ಲಿ ಎಡೆಬಿಡದೆ ಮಳೆಯಾಗುತ್ತಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jul 06, 2023 10:40 AM