Anna Bhagya Scheme; ಬ್ಯಾಂಕಲ್ಲಿ ಖಾತೆ ಹೊಂದಿರದವರು ಬೇಗ ಓಪನ್ ಮಾಡಿಸಿಕೊಳ್ಳಬೇಕು: ಕೆಹೆಚ್ ಮುನಿಯಪ್ಪ

Anna Bhagya Scheme; ಬ್ಯಾಂಕಲ್ಲಿ ಖಾತೆ ಹೊಂದಿರದವರು ಬೇಗ ಓಪನ್ ಮಾಡಿಸಿಕೊಳ್ಳಬೇಕು: ಕೆಹೆಚ್ ಮುನಿಯಪ್ಪ

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 30, 2023 | 2:21 PM

ಹಣದ ಬದಲು ಜನ ರಾಗಿ ಅಥವಾ ಜೋಳ ಕೇಳಿದರೆ, ಅವುಗಳನ್ನು ಎರಡೆರಡು ಕೆಜಿಯಂತೆ ಒದಗಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಸಚಿವರು ಹೇಳಿದರು.

ಬೆಂಗಳೂರು: ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ ಹೆಚ್ ಮುನಿಯಪ್ಪ (KH Muniyappa) ಇಂದು ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಟಿಯೊಂದನ್ನು ನಡೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಭರವಸೆ ನೀಡುರುವ ಹಾಗೆ ನಾಳೆಯಿಂದ ಅನ್ನಭಾಗ್ಯ ಯೋಜನೆ (Anna Bhagya scheme) ಜಾರಿಗೊಳ್ಳಲಿದೆ ಎಂದು ಹೇಳಿದರು. ಅಕ್ಕಿ ಬದಲು ಬಿಪಿಎಲ್ ಕಾರ್ಡುದಾರರಿಗೆ ಹಣ ನೀಡುವ ವಿಚಾರ ಮಾತಾಡಿದ ಸಚಿವರು, ಬ್ಯಾಂಕ್ ಖಾತೆ ಹೊಂದಿರುವವರಿಗೆಲ್ಲ ಹಣ ವರ್ಗಾಯಿಸಲಾಗುವುದು ಎಂದರು. ಕುಟುಂಬವೊಂದರಲ್ಲಿ 5 ಜನ ಇದ್ದರೆ ಅವರಿಗೆ ವಿತರಿಸಬೇಕಿದ್ದ 25 ಕೆಜಿ ಅಕ್ಕಿ ಬದಲು ಕೆಜಿಗೆ ರೂ. 34 ರಂತೆ ರೂ. 850 ಅನ್ನು ವರ್ಗಾಯಿಸಲಾಗಗುವುದು ಎಂದು ಸಚಿವರು ಹೇಳಿದರು. ಬ್ಯಾಂಕ್ ನಲ್ಲಿ ಖಾತೆ ಹೊಂದಿರದವರು ಆದಷ್ಟು ಬೇಗ ಖಾತೆ ಮಾಡಿಸಿಕೊಳ್ಳಬೇಕು ಎಂದು ಹೇಳಿದ ಅವರು, ಹಣದ ಬದಲು ಜನ ರಾಗಿ ಅಥವಾ ಜೋಳ ಕೇಳಿದರೆ, ಅವುಗಳನ್ನು ಎರಡೆರಡು ಕೆಜಿಯಂತೆ ಒದಗಿಸುವ ವ್ಯವಸ್ಥೆ ಮಾಡಲಾಗುವುದು ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ