ದೆಹಲಿ ಸ್ಫೋಟಕ್ಕೆ ಕಾರಣನಾಗಿದ್ದ ಡಾ. ಉಮರ್ ನಬಿ ಮನೆ ರಾತ್ರೋರಾತ್ರಿ ನೆಲಸಮ

Updated on: Nov 14, 2025 | 8:10 AM

ದೆಹಲಿಯಲ್ಲಿ ನವೆಂಬರ್ 10ರಂದು ನಿಗೂಢ ಸ್ಫೋಟವೊಂದು ಸಂಭವಿಸಿತ್ತು. ಘಟನೆಯಲ್ಲಿ 10ಕ್ಕೂ ಹೆಚ್ವು ಮಂದಿ ಪ್ರಾಣ ಕಳೆದುಕೊಂಡಿದ್ದರು. ಈ ದಾಳಿ ಹಿಂದಿದ್ದ ಡಾ. ಉಮರ್ ನಬಿ ಮನೆಯನ್ನು ರಾತ್ರೋರಾತ್ರಿ ನೆಲಸಮ ಮಾಡಲಾಗಿದೆ. ದಕ್ಷಿಣ ಕಾಶ್ಮೀರದ ಪುಲ್ವಾಮಾದಲ್ಲಿ ಆತನ ಮನೆ ಇತ್ತು. ಈ ಉಮರ್ ಮೊನ್ನೆ ತಾನಿದ್ದ ಕಾರನ್ನೇ ಸ್ಫೋಟಿಸಿಕೊಂಡಿದ್ದ, ಆ ಸ್ಫೋಟದಲ್ಲಿ ತಾನೂ ಸಾವನ್ನಪ್ಪಿದ್ದ. ಡಿಎನ್​ಎಯಿಂದ ಅದು ಆತನದಲ್ಲೇ ಮೃತದೇಹ ಎಂಬುದು ಕೂಡ ದೃಢಪಟ್ಟಿದೆ. ಹುಂಡೈ ಐ20 ಕಾರಿನಲ್ಲಿ ಪ್ರಬಲವಾದ ಸ್ಫೋಟ ಸಂಭವಿಸಿ 10ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದರು ಮತ್ತು ಹಲವಾರು ಜನರು ಗಾಯಗೊಂಡಿದ್ದರು.

ನವದೆಹಲಿ, ನವೆಂಬರ್ 14: ದೆಹಲಿಯಲ್ಲಿ ನವೆಂಬರ್ 10ರಂದು ನಿಗೂಢ ಸ್ಫೋಟವೊಂದು ಸಂಭವಿಸಿತ್ತು. ಘಟನೆಯಲ್ಲಿ 10ಕ್ಕೂ ಹೆಚ್ವು ಮಂದಿ ಪ್ರಾಣ ಕಳೆದುಕೊಂಡಿದ್ದರು. ಈ ದಾಳಿ ಹಿಂದಿದ್ದ ಡಾ. ಉಮರ್ ನಬಿ ಮನೆಯನ್ನು ರಾತ್ರೋರಾತ್ರಿ ನೆಲಸಮ ಮಾಡಲಾಗಿದೆ. ದಕ್ಷಿಣ ಕಾಶ್ಮೀರದ ಪುಲ್ವಾಮಾದಲ್ಲಿ ಆತನ ಮನೆ ಇತ್ತು. ಈ ಉಮರ್ ಮೊನ್ನೆ ತಾನಿದ್ದ ಕಾರನ್ನೇ ಸ್ಫೋಟಿಸಿಕೊಂಡಿದ್ದ, ಆ ಸ್ಫೋಟದಲ್ಲಿ ತಾನೂ ಸಾವನ್ನಪ್ಪಿದ್ದ. ಡಿಎನ್​ಎಯಿಂದ ಅದು ಆತನದಲ್ಲೇ ಮೃತದೇಹ ಎಂಬುದು ಕೂಡ ದೃಢಪಟ್ಟಿದೆ. ಹುಂಡೈ ಐ20 ಕಾರಿನಲ್ಲಿ ಪ್ರಬಲವಾದ ಸ್ಫೋಟ ಸಂಭವಿಸಿ 10ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದರು ಮತ್ತು ಹಲವಾರು ಜನರು ಗಾಯಗೊಂಡಿದ್ದರು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Nov 14, 2025 08:10 AM
Follow Us
Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More