ದೆಹಲಿಯಲ್ಲಿ ಧಾರಾಕಾರ ಮಳೆ; ಜಲಾವೃತಗೊಂಡ ರಸ್ತೆಗಳಲ್ಲಿ ಈಜಾಡಿದ ಮಕ್ಕಳು

Updated on: Aug 24, 2026 | 9:32 PM

ದೆಹಲಿ, ನೋಯ್ಡಾ, ಗುರುಗ್ರಾಮ ಮತ್ತು ಘಾಜಿಯಾಬಾದ್‌ನ ಹಲವು ಮುಖ್ಯ ರಸ್ತೆಗಳಲ್ಲಿ 2ರಿಂದ 3 ಅಡಿಗಳಷ್ಟು ನೀರು ನಿಂತಿದ್ದರಿಂದ ನೂರಾರು ಕಾರುಗಳು, ದ್ವಿಚಕ್ರ ವಾಹನಗಳು ಹಾಗೂ ಬಸ್‌ಗಳು ನೀರಿನ ನಡುವೆಯೇ ಕೆಟ್ಟು ನಿಂತವು. ವಾಹನ ಸವಾರರು ಕಾರುಗಳನ್ನು ತಳ್ಳಿಕೊಂಡು ಸಾಗುವ ದೃಶ್ಯಗಳು ಕಂಡುಬಂದವು. ಜಲಾವೃತಗೊಂಡ ರಸ್ತೆಗಳು ಮತ್ತು ಅಂಡರ್‌ಪಾಸ್‌ಗಳು ಕೆರೆಯಂತಾಗಿದ್ದರಿಂದ, ಮಕ್ಕಳು ಆ ನೀರನ್ನೇ ಈಜುಕೊಳದಂತೆ ಬಳಸಿಕೊಂಡು ಈಜಾಡುತ್ತಾ, ಜಿಗಿಯುತ್ತಾ ಸಂಭ್ರಮಿಸಿದರು. ಭಾರಿ ನೀರು ನಿಂತಿದ್ದರಿಂದಾಗಿ ಹಲವು ಕಿಲೋಮೀಟರ್‌ಗಳವರೆಗೆ ಸುದೀರ್ಘ ಸಂಚಾರ ದಟ್ಟಣೆ ಉಂಟಾಯಿತು.

ನವದೆಹಲಿ, ಆಗಸ್ಟ್ 24: ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಇಂದು ಸುರಿದ ಭಾರಿ ಮಳೆಯಿಂದಾಗಿ (Delhi Rains) ಇಡೀ ನಗರವೇ ಜಲಾವೃತಗೊಂಡಿದೆ. ಕೇವಲ ಕೆಲವೇ ಗಂಟೆಗಳ ಕಾಲ ಸುರಿದ ಧಾರಾಕಾರ ಮಳೆಗೆ ಪ್ರಮುಖ ರಸ್ತೆಗಳು, ಅಂಡರ್‌ಪಾಸ್‌ಗಳು ಮತ್ತು ವಸತಿ ಪ್ರದೇಶಗಳು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿಹೋಗಿದ್ದು, ದೈನಂದಿನ ಜನಜೀವನ ಅಸ್ತವ್ಯಸ್ತಗೊಂಡಿದೆ. ದೆಹಲಿ, ನೋಯ್ಡಾ, ಗುರುಗ್ರಾಮ ಮತ್ತು ಘಾಜಿಯಾಬಾದ್‌ನ ಹಲವು ಮುಖ್ಯ ರಸ್ತೆಗಳಲ್ಲಿ 2ರಿಂದ 3 ಅಡಿಗಳಷ್ಟು ನೀರು ನಿಂತಿದ್ದರಿಂದ ನೂರಾರು ಕಾರುಗಳು, ದ್ವಿಚಕ್ರ ವಾಹನಗಳು ಹಾಗೂ ಬಸ್‌ಗಳು ನೀರಿನ ನಡುವೆಯೇ ಕೆಟ್ಟು ನಿಂತವು. ವಾಹನ ಸವಾರರು ಕಾರುಗಳನ್ನು ತಳ್ಳಿಕೊಂಡು ಸಾಗುವ ದೃಶ್ಯಗಳು ಕಂಡುಬಂದವು.

ಜಲಾವೃತಗೊಂಡ ರಸ್ತೆಗಳು ಮತ್ತು ಅಂಡರ್‌ಪಾಸ್‌ಗಳು ಕೆರೆಯಂತಾಗಿದ್ದರಿಂದ, ಮಕ್ಕಳು ಆ ನೀರನ್ನೇ ಈಜುಕೊಳದಂತೆ ಬಳಸಿಕೊಂಡು ಈಜಾಡುತ್ತಾ, ಜಿಗಿಯುತ್ತಾ ಸಂಭ್ರಮಿಸಿದರು. ಭಾರಿ ನೀರು ನಿಂತಿದ್ದರಿಂದಾಗಿ ಹಲವು ಕಿಲೋಮೀಟರ್‌ಗಳವರೆಗೆ ಸುದೀರ್ಘ ಸಂಚಾರ ದಟ್ಟಣೆ ಉಂಟಾಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More