Video: ನಿಂಬೆ ಹಣ್ಣಿನ ಮೇಲೆ ಥಾರ್ ಹತ್ತಿಸಲು ಹೋಗಿ ಶೋ ರೂಮ್ನಿಂದ ಕಾರು ಸಮೇತ ಕೆಳಗೆ ಹಾರಿದ ಮಹಿಳೆ
ಸಾಮಾನ್ಯವಾಗಿ ಹೊಸ ವಾಹನ ಖರೀದಿಸಿದರೆ, ಗಾಡಿಗೆ ಯಾವುದೇ ದೃಷ್ಟಿಯಾಗದಿರಲಿ, ತನ್ನನ್ನು ಸದಾ ಸುರಕ್ಷಿತವಾಗಿಟ್ಟಿರಲಿ ಎಂದು ಪೂಜೆ ಮಾಡಿಸುವುದು ಸಹಜ. ಹಾಗೆಯೇ ಮಹಿಳೆಯೊಬ್ಬರು ಮಹಿಂದ್ರಾ ಅವರ ಥಾರ್ ಗಾಡಿಯನ್ನು ಖರೀದಿಸಿದ್ದರು. ಶೋ ರೂಮ್ನ ಮೊದಲ ಮಹಡಿಯಲ್ಲಿ ನಿಂಬೆ ಹಣ್ಣಿನ ಮೇಲೆ ಗಾಡಿಯನ್ನು ಹತ್ತಿಸಲು ಹೋಗಿ, ಮೊದಲ ಮಹಡಿಯಿಂದ ಗಾಜು ಒಡೆದು ಗಾಡಿ ಸಮೇತ ಕೆಳಗೆ ಹಾರಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
ನವದೆಹಲಿ, ಸೆಪ್ಟೆಂಬರ್ 10: ಸಾಮಾನ್ಯವಾಗಿ ಹೊಸ ವಾಹನ ಖರೀದಿಸಿದರೆ, ಗಾಡಿಗೆ ಯಾವುದೇ ದೃಷ್ಟಿಯಾಗದಿರಲಿ, ತನ್ನನ್ನು ಸದಾ ಸುರಕ್ಷಿತವಾಗಿಟ್ಟಿರಲಿ ಎಂದು ಪೂಜೆ ಮಾಡಿಸುವುದು ಸಹಜ. ಹಾಗೆಯೇ ಮಹಿಳೆಯೊಬ್ಬರು ಮಹಿಂದ್ರಾ ಅವರ ಥಾರ್ ಗಾಡಿಯನ್ನು ಖರೀದಿಸಿದ್ದರು. ಶೋ ರೂಮ್ನ ಮೊದಲ ಮಹಡಿಯಲ್ಲಿ ನಿಂಬೆ ಹಣ್ಣಿನ ಮೇಲೆ ಗಾಡಿಯನ್ನು ಹತ್ತಿಸಲು ಹೋಗಿ, ಮೊದಲ ಮಹಡಿಯಿಂದ ಗಾಜು ಒಡೆದು ಗಾಡಿ ಸಮೇತ ಕೆಳಗೆ ಹಾರಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
ಮಾನಿ ಪವಾರ್ ದೆಹಲಿಯ ನಿರ್ಮಾಣ್ ವಿಹಾರ್‌ನಲ್ಲಿರುವ ಮಹೀಂದ್ರಾ ಶೋರೂಮ್‌ಗೆ ಭೇಟಿ ನೀಡಿ, 27 ಲಕ್ಷ ರೂಪಾಯಿ ಮೌಲ್ಯದ ತಮ್ಮ ಹೊಸ ಥಾರ್ ಕಾರಿನ ಡೆಲಿವರಿ ಪಡೆದರು. ಶೋರೂಮ್‌ನಿಂದ ಕಾರನ್ನು ಹೊರಗೆ ಓಡಿಸುವ ಮೊದಲು ಪೂಜೆ ಮತ್ತು ಆಚರಣೆ ಮಾಡಲು ಪವಾರ್ ನಿರ್ಧರಿಸಿದರು. ಶೋರೂಮ್‌ನ ಮೊದಲ ಮಹಡಿಯಲ್ಲಿ ನಿಲ್ಲಿಸಲಾಗಿದ್ದ ಥಾರ್‌ನ ಚಕ್ರದ ಮುಂದೆ ನಿಂಬೆಹಣ್ಣನ್ನು ಇರಿಸಲಾಗಿತ್ತು.
ಅದರ ಮೇಲೆ ನಿಧಾನವಾಗಿ ಕಾರನ್ನು ಚಲಾಯಿಸುವ ಬದಲು ಆಕ್ಸಿಲರೇಟರ್ ಒತ್ತಿದ ಪರಿಣಾಮ ನೇರವಾಗಿ ಮೊದಲ ಮಹಡಿಯಿಂದ ಕಾರು ಕೆಳಗೆ ಬಿದ್ದಿದೆ. ಪವಾರ್ ಮತ್ತು ಒಳಗೆ ಕುಳಿತಿದ್ದ ವಿಕಾಸ್ ಕಾರಿನ ಕಿಡಕಿ ಒಡೆದು ಕೆಳಗೆ ಜಂಪ್ ಮಾಡಿದ್ದ ಕಾರಣ ಅಷ್ಟಾಗಿ ಗಾಯಗಳಾಗಿಲ್ಲ. ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ

