Video: ದೆಹಲಿ ಸ್ಫೋಟಕ್ಕೂ ಮುನ್ನ ಉಗ್ರರು ಎಲ್ಲೆಲ್ಲಿ ಓಡಾಡಿದ್ರು ಗೊತ್ತೇ?

Updated on: Nov 12, 2025 | 9:46 AM

ದೆಹಲಿಯ ಕೆಂಪುಕೋಟೆ ಬಳಿ ಸಂಭವಿಸಿದ ಕಾರ್ ಸ್ಫೋಟ ಪ್ರಕರಣವನ್ನು ಎನ್​ಐಎ ತಂಡ ತನಿಖೆ ನಡೆಸುತ್ತಿದೆ. ಸ್ಫೋಟಕ್ಕೂ ಮುನ್ನ ಶಂಕಿತರು ಓಡಾಡಿದ ಪ್ರದೇಶಗಳನ್ನು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಐ20 ಕಾರಿನ ಮಾಲೀಕತ್ವದ ಜಾಡು ಹಿಡಿದು ಡಾ. ಉಮರ್ ಮೊಹಮ್ಮದ್ ನಬಿ ಎಂಬಾತನನ್ನು ಪ್ರಮುಖ ಶಂಕಿತನನ್ನಾಗಿ ಗುರುತಿಸಲಾಗಿದೆ. ಘಟನೆಯ ಹಿಂದಿನ ರಹಸ್ಯ ಬಯಲು ಮಾಡಲು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.

ನವದೆಹಲಿ, ನವೆಂಬರ್ 12: ದೆಹಲಿಯ ಕೆಂಪುಕೋಟೆ ಬಳಿ ಸಂಭವಿಸಿದ ಕಾರು  ಸ್ಫೋಟ ಪ್ರಕರಣವನ್ನು ಎನ್​ಐಎ ತಂಡ ತನಿಖೆ ನಡೆಸುತ್ತಿದೆ. ಸ್ಫೋಟಕ್ಕೂ ಮುನ್ನ ಶಂಕಿತರು ಓಡಾಡಿದ ಪ್ರದೇಶಗಳನ್ನು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಐ20 ಕಾರಿನ ಮಾಲೀಕತ್ವದ ಜಾಡು ಹಿಡಿದು ಡಾ. ಉಮರ್ ಮೊಹಮ್ಮದ್ ನಬಿ ಎಂಬಾತನನ್ನು ಪ್ರಮುಖ ಶಂಕಿತನನ್ನಾಗಿ ಗುರುತಿಸಲಾಗಿದೆ. ಘಟನೆಯ ಹಿಂದಿನ ರಹಸ್ಯ ಬಯಲು ಮಾಡಲು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.

. ಘಟನೆ ನಡೆದ ಸ್ಥಳದಲ್ಲಿ ಕಾರಿನ ಬಿಡಿಭಾಗಗಳು, ಕಾರಿನಲ್ಲಿದ್ದ ವಸ್ತುಗಳು, ಅಮೋನಿಯಂ ನೈಟ್ರೇಟ್ ಸೇರಿದಂತೆ ಹಲವು ಮಹತ್ವದ ಅವಶೇಷಗಳನ್ನು ಎನ್​ಐಎ ಅಧಿಕಾರಿಗಳು ಸಂಗ್ರಹಿಸಿದ್ದಾರೆ. ಈ ಶೋಧ ಕಾರ್ಯಾಚರಣೆಯಲ್ಲಿ ತನಿಖಾ ತಂಡಕ್ಕೆ ದೊರೆತ ಪ್ರಮುಖ ಸಾಕ್ಷ್ಯವೆಂದರೆ ಸ್ಫೋಟಕ್ಕೆ ಒಳಗಾದ ಐ20 ಕಾರಿನ ನಂಬರ್ ಪ್ಲೇಟ್. ಈ ನಂಬರ್ ಪ್ಲೇಟ್ ಆಧಾರದ ಮೇಲೆ ತನಿಖೆ ಮುಂದುವರಿಸಿದಾಗ, ಕಾರಿನ ಮೂಲ ಮಾಲೀಕ ಸಲ್ಮಾನ್ ಎಂಬುವವರನ್ನು ಪತ್ತೆಹಚ್ಚಲಾಗಿದೆ.

ಕಾರಿನ ಮೂಲ ಮತ್ತು ದೆಹಲಿಗೆ ಬಂದ ಬಗ್ಗೆ ಮಾಹಿತಿ ಕಲೆಹಾಕಲು ತನಿಖಾಧಿಕಾರಿಗಳು ಸುಮಾರು 1000 ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಒಂದು ತಿಂಗಳ ಅವಧಿಯ ಸಿಸಿಟಿವಿ ದೃಶ್ಯಗಳನ್ನು ಶೋಧಿಸಿದಾಗ, ಕಾರು ಅಕ್ಟೋಬರ್ 29 ರಂದು ದೆಹಲಿಗೆ ಪ್ರವೇಶಿಸಿದ್ದು, ಅಂದೇ ಎಮಿಷನ್ ಟೆಸ್ಟ್ ಮಾಡಿಸಿಕೊಂಡಿರುವುದು ಪತ್ತೆಯಾಗಿದೆ. ಇದು ಪೂರ್ವ ನಿಯೋಜಿತ ದಾಳಿಯೆಂಬುದಕ್ಕೆ ಸಾಕ್ಷಿ ಒದಗಿಸಿದೆ.

ಸ್ಫೋಟದ ದಿನದಂದು ಡಾ. ಉಮರ್‌ನ ಕಾರಿನ ಚಲನವಲನ ಹೀಗಿದೆ: ಬೆಳಗ್ಗೆ 7.30ಕ್ಕೆ ಫರಿದಾಬಾದ್‌ನಿಂದ ಹೊರಟಿದ್ದ ಕಾರು, ಏಷ್ಯನ್ ಆಸ್ಪತ್ರೆ ಬಳಿ ಪತ್ತೆಯಾಗಿದೆ. 8 ಗಂಟೆ 13 ನಿಮಿಷಕ್ಕೆ ಬದಲ್ಪುರ ಟೋಲ್‌ನಲ್ಲಿ ಹಾದುಹೋಗಿದೆ. 8.20ಕ್ಕೆ ಓಕ್ಲಾ ಪೆಟ್ರೋಲ್ ಬಂಕ್‌ಗೆ ತಲುಪಿದೆ. ಮಧ್ಯಾಹ್ನ 3.19ಕ್ಕೆ ಕೆಂಪುಕೋಟೆ ಬಳಿ ಪ್ರವೇಶಿಸಿ, ಹತ್ತಿರದ ಸುನೇಹ್ರಿ ಮಸೀದಿ ಬಳಿಯ ಪಾರ್ಕಿಂಗ್ ಏರಿಯಾದಲ್ಲಿ ಮೂರು ಗಂಟೆಗಳ ಕಾಲ ನಿಂತಿತ್ತು. ಸಂಜೆ 6.22ಕ್ಕೆ ಪಾರ್ಕಿಂಗ್‌ನಿಂದ ಹೊರಟ ಕಾರು, 6.52ಕ್ಕೆ ಕೆಂಪುಕೋಟೆ ಬಳಿ ಬಂದಾಗ ಸ್ಫೋಟಗೊಂಡಿದೆ. ಡಾ. ಉಮರ್‌ನ ಕುರಿತು ಹೆಚ್ಚಿನ ಮಾಹಿತಿಗಳನ್ನು ಎನ್​ಐಎ ಅಧಿಕಾರಿಗಳು ಕಲೆಹಾಕುತ್ತಿದ್ದು, ತನಿಖೆ ಮುಂದುವರೆದಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ