Video: ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಹೋಗಿ ನೋಡ ನೋಡುತ್ತಿದ್ದಂತೆ ಹೋಯ್ತು ವ್ಯಕ್ತಿಯ ಪ್ರಾಣ
ಉತ್ತರ ಪ್ರದೇಶದ ಕಾನ್ಪುರ ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ಒಂದು ದುರಂತ ಸಂಭವಿಸಿದೆ. ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಹೋಗಿ ವ್ಯಕ್ತಿಯೊಬ್ಬ ರೈಲಿನಡಿ ಸಿಲುಕಿ ಪ್ರಾಣ ಬಿಟ್ಟಿರುವ ಹೃದಯವಿದ್ರಾವಕ ಘಟನೆ ನಡೆದಿದೆ.ರೈಲು ಚಲಿಸುತ್ತಿರುವಾಗಲೇ ಆ ವ್ಯಕ್ತಿ ಅದರಿಂದ ಇಳಿಯಲು ಪ್ರಯತ್ನಿಸಿದಾಗ ಈ ಘಟನೆ ಸಂಭವಿಸಿದೆ.ಸಮತೋಲನ ಕಳೆದುಕೊಂಡು ರೈಲು ಹಾಗೂ ಪ್ಲ್ಯಾಟ್ಫಾರಂ ನಡುವೆ ಇರುವ ಕಿರಿದಾದ ಜಾಗದಲ್ಲಿ ಬಿದ್ದಿದ್ದಾರೆ.
ಕಾನ್ಪುರ, ನವೆಂಬರ್ 12: ಉತ್ತರ ಪ್ರದೇಶದ ಕಾನ್ಪುರ ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ಒಂದು ದುರಂತ ಸಂಭವಿಸಿದೆ. ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಹೋಗಿ ವ್ಯಕ್ತಿಯೊಬ್ಬ ರೈಲಿನಡಿ ಸಿಲುಕಿ ಪ್ರಾಣ ಬಿಟ್ಟಿರುವ ಹೃದಯವಿದ್ರಾವಕ ಘಟನೆ ನಡೆದಿದೆ.ರೈಲು ಚಲಿಸುತ್ತಿರುವಾಗಲೇ ಆ ವ್ಯಕ್ತಿ ಅದರಿಂದ ಇಳಿಯಲು ಪ್ರಯತ್ನಿಸಿದಾಗ ಈ ಘಟನೆ ಸಂಭವಿಸಿದೆ.ಸಮತೋಲನ ಕಳೆದುಕೊಂಡು ರೈಲು ಹಾಗೂ ಪ್ಲ್ಯಾಟ್ಫಾರಂ ನಡುವೆ ಇರುವ ಕಿರಿದಾದ ಜಾಗದಲ್ಲಿ ಬಿದ್ದಿದ್ದಾರೆ.
ಅಪಘಾತದ ಗೊಂದಲದ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದ್ದು, ಪ್ಲಾಟ್‌ಫಾರ್ಮ್ ಮತ್ತು ರೈಲಿನ ನಡುವೆ ಸಿಲುಕಿಕೊಂಡಿದ್ದ ಪ್ರಯಾಣಿಕನ ದೇಹ ಕೆಲವೇ ನಿಮಿಷಗಳ ಛಿದ್ರ ಛಿದ್ರವಾಗಿತ್ತು. ರೈಲ್ವೆ ಪೊಲೀಸರು ಸ್ಥಳಕ್ಕೆ ಓಡೋಡಿ ಬರುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಯಾವುದೇ ಪ್ರಯಾಣಿಕರಾಗಲಿ ಎಷ್ಟೇ ತುರ್ತು ಪರಿಸ್ಥಿತಿ ಇರಲಿ, ರೈಲು ನಿಂತ ಮೇಲೆ ಇಳಿಯುವುದು ಸೂಕ್ತ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

