ಬೈಪಾಸ್​​ಗೆ ಆಗ್ರಹಿಸಿ ಕಗ್ಗಲಿಪುರ ನಿವಾಸಿಗಳಿಂದ ವಿನೂತನ ಪ್ರತಿಭಟನೆ: ದೇಹಕ್ಕೆ ಗೋಣಿ ಚೀಲ ಕಟ್ಟಿಕೊಂಡು ಭಿಕ್ಷಾಟನೆ

Edited By:

Updated on: Oct 25, 2026 | 12:54 PM

ಕನಕಪುರ ರಸ್ತೆಯ ಕಗ್ಗಲಿಪುರದಲ್ಲಿ ಬೈಪಾಸ್ ನಿರ್ಮಾಣಕ್ಕೆ ಆಗ್ರಹಿಸಿ ಸ್ಥಳೀಯ ನಿವಾಸಿಗಳು ಗೋಣಿ ಚೀಲ ಧರಿಸಿ ಭಿಕ್ಷಾಟನೆ ನಡೆಸುವ ಮೂಲಕ ವಿನೂತನ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ. ಕನಕಪುರ ರೋಡ್ನಲ್ಲಿರುವ ಉದಯಪುರದಿಂದ, ಸೋಮನಹಳ್ಳಿ ಟೋಲ್​​ವರೆಗೆ ಬೈಪಾಸ್​​ಗೆ ಆಗ್ರಹಿಸಲಾಗಿದ್ದು, ಈಗಾಗಲೇ ಕಳೆದ ಒಂದು ತಿಂಗಳಲ್ಲಿ ಅಪಘಾತಗಳಿಂದ ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪ್ರತಿಭಟನಾಕಾರು ಮಾಹಿತಿ ನೀಡಿದ್ದಾರೆ.

ಬೆಂಗಳೂರು, ಅಕ್ಟೋಬರ್​​ 25: ಬೈಪಾಸ್​​ಗೆ ಆಗ್ರಹಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ವಿರುದ್ಧ ಕಗ್ಗಲಿಪುರ ನಿವಾಸಿಗಳು ವಿನೂತನ ಪ್ರತಿಭಟನೆ ನಡೆಸಿದ್ದಾರೆ. ದೇಹಕ್ಕೆ ಗೋಣಿ ಚೀಲ ಕಟ್ಟಿಕೊಂಡು, ಕುತ್ತಿಗೆಗೆ ಭಿಕ್ಷೆ ನೀಡಿ ಎಂಬ ಬೋರ್ಡ್ ಜೊತೆಗೆ ಪಾತ್ರೆ ಹಿಡಿದು ಭಿಕ್ಷಾಟನೆ ನಡೆಸಿದ್ದಾರೆ. ಭಿಕ್ಷೆ ಬೇಡಿ ಸಂಗ್ರಹಿಸಿದ ಹಣವನ್ನು NHAIಗೆ ನೀಡಲು ತೀರ್ಮಾನಿಸಲಾಗಿದೆ. ಕನಕಪುರ ರೋಡ್ನಲ್ಲಿರುವ ಉದಯಪುರದಿಂದ, ಸೋಮನಹಳ್ಳಿ ಟೋಲ್​​ವರೆಗೆ ಬೈಪಾಸ್​​ಗೆ ಆಗ್ರಹಿಸಲಾಗಿದ್ದು, ಈಗಾಗಲೇ ಕಳೆದ ಒಂದು ತಿಂಗಳಲ್ಲಿ ಅಪಘಾತಗಳಿಂದ ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪ್ರತಿಭಟನಾಕಾರು ಮಾಹಿತಿ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ

Loading...
Unable to load recommendations.
Follow Us
ಕಿರಣ್​ ಸೂರ್ಯ

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More