ಉಮೇಶ ಕತ್ತಿ ವಿಧಿವಶ: ದೊಡ್ ಸೌಕಾರ ಭಾಳ ಛಂದ ಕಬಡ್ಡಿ ಆಡ್ತಿದ್ರು ಅಂದರು ಉಮೇಶ ಕತ್ತಿ ಸ್ನೇಹಿತರು!
ಉಮೇಶ ಮತ್ತು ರಮೇಶ ಸಹೋದರರನ್ನು ಬೆಲ್ಲದ ಬಾಗೇವಾಡಿ ಜನ ದೊಡ್ಡ ಸಾಹುಕಾರ ಸಣ್ಣ ಸಾಹುಕಾರ ಅಂತ ಸಂಬೋಧಿಸುತ್ತಾರೆ.
ಉಮೇಶ ಕತ್ತಿಯವರ ಬಾಲ್ಯದ ಸ್ನೇಹಿತರು, ಒಡನಾಡಿಗಳು ಮತ್ತು ಸಹಪಾಠಿಗಳು (classmates) ಸಾವಿನ ಸುದ್ದಿ ಕೇಳಿ ದಿಗ್ಭ್ರಾಂತರಾಗಿದ್ದಾರೆ ಮತ್ತು ಆಘಾತಕ್ಕೊಳಗಾಗಿದ್ದಾರೆ (shocked). ಅವರಲ್ಲಿ ಕೆಲವರೊಂದಿಗೆ ಟಿವಿ9 ಕನ್ನಡ ವಾಹಿನಿಯ ವರದಿಗಾರ ಮಾತಾಡಿದ್ದಾರೆ. ಕತ್ತಿಯವರನ್ನು ಕುರಿತು ಮಾತಾಡುವಾಗ ಸ್ನೇಹಿತರು ಗದ್ಗದಿತರಾಗುತ್ತಿದ್ದಾರೆ. ಉಮೇಶ ಮತ್ತು ರಮೇಶ (Ramesh) ಸಹೋದರರನ್ನು ಬೆಲ್ಲದ ಬಾಗೇವಾಡಿ ಜನ ದೊಡ್ಡ ಸಾಹುಕಾರ ಸಣ್ಣ ಸಾಹುಕಾರ ಅಂತ ಸಂಬೋಧಿಸುತ್ತಾರೆ. ಶಾಲಾ ದಿನಗಳಲ್ಲಿ ಉಮೇಶ ಉತ್ತಮ ಕಬಡ್ಡಿ ಆಟಗಾರರಾಗಿದ್ದರು ಎಂದು ಸಹಪಾಠಿಗಳು ಹೇಳುತ್ತಾರೆ.