ವಿಶ್ವನಿಂದ ಅಕ್ಕನ ಜೀವಕ್ಕೆ ಅಪಾಯವಿದೆ ಅಂತ ದೂರು ನೀಡಿದ್ದರೂ ಪೊಲೀಸರು ಕ್ರಮ ತೆಗೆದುಕೊಳ್ಳಲಿಲ್ಲ: ಅಂಜಲಿ ಸಹೋದರಿಯರು

ಅರುಣ್​ ಕುಮಾರ್​ ಬೆಳ್ಳಿ

Updated on: May 16, 2024 | 4:05 PM

ಅಂಜಲಿಯ ಮತ್ತೊಬ್ಬ ಸಹೋದರಿ ಭಾರೀ ಶಾಕ್ ನಲ್ಲಿದ್ದಾರೆ. ಆಕೆ ಹೇಳುವ ಪ್ರಕಾರ, ಗಿರೀಶ್ ನಿಂದ ಅಂಜಲಿಯ ಜೀವಕ್ಕೆ ಅಪಾಯವಿರುವ ಸಂಗತಿಯನ್ನು ಪೊಲೀಸರ ಗಮನಕ್ಕೆ ತಂದಾಗ್ಯೂ ಅವರು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಹತ್ಯೆ ನಡೆದ ಬಗ್ಗೆ ಕೇಳಿದಾಗ ಅಕೆ, ಹೇಳಿದ್ದನ್ನೇ ಹೇಳಿ ಹೇಳಿ ತನಗೆ ಸಾಕಾಗಿದೆ ಎಂದು ದುಃಖಿಸಲಾರಂಭಿಸುತ್ತಾರೆ.

ಹುಬ್ಬಳ್ಳಿ: ನಿನ್ನೆ ದುಷ್ಟನೊಬ್ಬನ ಕ್ರೌರ್ಯಕ್ಕೆ ಬಲಿಯಾದ ಅಂಜಲಿ ಅಂಬಿಗೇರ್ (Anjali Ambiger) ಮನೆಯಲ್ಲಿ ಸೂತಕ ಆವರಿಸಿದೆ. ಆಕೆಯ ಸಹೋದರಿಯರು ಮತ್ತು ಸಂಬಂಧಿಕರಿಗೆ ಆಘಾತದಿಂದ ಚೇತರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಟಿವಿ9 ಕನ್ನಡ ವಾಹಿನಿಯ ಹುಬ್ಬಳ್ಳಿ ವರದಿಗಾರ ಅಂಜಲಿಯ ತಂಗಿಯರೊಂದಿಗೆ ಮಾತಾಡಿದ್ದಾರೆ. ಕೊಲೆ ಆರೋಪಿ ಗಿರೀಶ್ ಸಾವಂತ್ (ವಿಶ್ವ) (Girish Sawant) ಮತ್ತು ಅವನ ಸ್ನೇಹಿತ ವಿಜಯ್ (Vijay) ಇಬ್ಬರೂ ನಾಪತ್ತೆಯಾಗಿದ್ದಾರೆ, ಪೊಲೀಸರು ಅವರಿಬ್ಬರನ್ನೂ ಬಂಧಿಸಿ ಅತ್ಯಂತ ಕಠಿಣ ಶಿಕ್ಷೆಗೊಳಪಡಿಸಬೇಕು ಎಂದು ಹುಬ್ಬಳ್ಳಿ ಬಿಟ್ಟು ಬೇರೆ ಊರೊಂದರಲ್ಲಿ ಕೆಲಸ ಮಾಡುತ್ತಿರುವ ಅಂಜಲಿಯ ತಂಗಿಯೊಬ್ಬರು ಹೇಳುತ್ತಾರೆ. ಪ್ರೀತಿ-ಪ್ರೇಮ ಹೆಸರಲ್ಲಿ ನಾವು ಈಗಾಗಲೇ ಇಬ್ಬರು ಅಕ್ಕಂದಿರನ್ನು (ನೇಹಾ ಹಿರೇಮಠ ಮತ್ತು ಅಂಜಲಿ) ಕಳೆದುಕೊಂಡಿದ್ದೇವೆ, ಇನ್ನೆಷ್ಟು ಭೀಕರ ಸಾವುಗಳನ್ನು ನಾವು ನೋಡಬೇಕು? ಎಂದು ಆಕೆ ಪ್ರಶ್ನಿಸುತ್ತಾರೆ. ಅಂಜಲಿಯ ಮತ್ತೊಬ್ಬ ಸಹೋದರಿ ಭಾರೀ ಶಾಕ್ ನಲ್ಲಿದ್ದಾರೆ. ಆಕೆ ಹೇಳುವ ಪ್ರಕಾರ, ಗಿರೀಶ್ ನಿಂದ ಅಂಜಲಿಯ ಜೀವಕ್ಕೆ ಅಪಾಯವಿರುವ ಸಂಗತಿಯನ್ನು ಪೊಲೀಸರ ಗಮನಕ್ಕೆ ತಂದಾಗ್ಯೂ ಅವರು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಹತ್ಯೆ ನಡೆದ ಬಗ್ಗೆ ಕೇಳಿದಾಗ ಅಕೆ, ಹೇಳಿದ್ದನ್ನೇ ಹೇಳಿ ಹೇಳಿ ತನಗೆ ಸಾಕಾಗಿದೆ ಎಂದು ದುಃಖಿಸಲಾರಂಭಿಸುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಅಂಜಲಿ ಕೊಲೆ: ರಜೆ ರದ್ದುಗೊಳಿಸಿ ಕರ್ತವ್ಯಕ್ಕೆ ಹಾಜರಾದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್

Published on: May 16, 2024 01:08 PM
Loading...
Unable to load recommendations.
Follow Us