ಪರೀಕ್ಷಾ ಪ್ರಾಧಿಕಾರದ ಎಡವಟ್ಟು, ಹಾಲ್​ ಟಿಕೆಟ್​​ನಲ್ಲಿ ಮಲ್ಲೇಶ್ವರಂ 18ನೇ ಕ್ರಾಸ್ ಬದಲು 13ನೇ ಕ್ರಾಸ್ ನಮೂದು!

ಅರುಣ್​ ಕುಮಾರ್​ ಬೆಳ್ಳಿ

Updated on: Apr 15, 2025 | 1:12 PM

ಇದು ಟೈಪೋನೋ ಅಥವಾ ಮತ್ತೊಂದೋ ಅಂತ ಕೆಇಎ ಅಧಿಕಾರಿಗಳೇ ಹೇಳಬೇಕು, ಸಾಮಾನ್ಯವಾಗಿ ಪ್ರಾಧಿಕಾರದಿಂದ ಪರೀಕ್ಷಾ ಸಮಯದಲ್ಲಿ ಇಂಥ ಪ್ರಮಾದಗಳು ಜರುಗುವುದಿಲ್ಲ. ಮಹಿಳೆ ಹೇಳುವಂತೆ ಬದಲೀ ಪರೀಕ್ಷಾ ಕೇಂದ್ರ 18ನೇ ಕ್ರಾಸ್ ನಲ್ಲಿರದೆ ಬೇರೆ ದೂರದ ಕಾಲೇಜಾಗಿದ್ದರೆ ವಿದ್ಯಾರ್ಥಿನಿ ಏನು ಮಾಡಬೇಕಿತ್ತು? ಅವರು ಕೇಳುವ ಪ್ರಶ್ನೆಯಲ್ಲಿ ತರ್ಕವಿದೆ, ಕೆಇಎ ಯೋಚಿಸಬೇಕು.

ಬೆಂಗಳೂರು, ಏಪ್ರಿಲ್ 15: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರತಿವರ್ಷ ವೃತ್ತಿಪಪ ಕೋರ್ಸ್​ಗಳಿಗಾಗಿ (Professional Courses) ನಡೆಸುವ 2025 ಸಾಲಿನ ಕಾಮನ್ ಎಂಟ್ರನ್ಸ್ ಟೆಸ್ಟ್​ (ಸಿಇಟಿ) ಇಂದಿನಿಂದ ಆರಂಭವಾಗಿದೆ. ಈ ಗೃಹಿಣಿ ಹೇಳುವ ಪ್ರಕಾರ ಸಿಇಟಿ ಬರೆಯುತ್ತಿರುವ ಅವರ ಮಗಳ ಪರೀಕ್ಷಾ ಕೇಂದ್ರದ ವಿಳಾಸ ಹಾಲ್ ಟಿಕೆಟ್​​ನಲ್ಲಿ ತಪ್ಪಾಗಿ ನಮೂದಾಗಿದೆ. ಮಲ್ಲೇಶ್ವರಂ 13 ನೇ ಕ್ರಾಸ್ ಅಂತ ನಮೂದಾಗಿದ್ದು ಅಲ್ಲಿನ ಸಿಬ್ಬಂದಿ ನಿಮ್ಮ ಎಕ್ಸಾಂ ಸೆಂಟರ್ ಇರೋದು 18 ನೇ ಕ್ರಾಸ್ ಅಂತ ಹೇಳಿದ್ದಾರೆ. ಅವರ ಮಗಳು ಅಳುತ್ತಾ 18ನೇ ಕ್ರಾಸ್​​ಗೆ ಬಂದು ಸೆಂಟರ್​ನೊಳಗೆ ಹೋಗಿದ್ದಾಳೆ. ಸೆಂಟರ್​​ ದೂರದಲ್ಲಿದ್ದಿದ್ದರೆ ಏನು ಮಾಡಬೇಕಿತ್ತು ಅಂತ ಅವರು ತಾಯಿ ದುಃಖಿಸುತ್ತಾ ಪ್ರಶ್ನಿಸುತ್ತಾರೆ.

ಇದನ್ನೂ ಓದಿ:  ಇನ್ಮುಂದೆ ಸಿಇಟಿ ಪರೀಕ್ಷೆಗಳಿಗೆ ಆಧಾರ್ ಆಧಾರಿತ ನೋಂದಣಿ: ಹೊಸ ನಿಯಮ ತರಲು ಮುಂದಾದ ಕೆಇಎ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Published on: Apr 15, 2025 01:12 PM
Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.