Pradeep Eshwar: ಚಿಕ್ಕಬಳ್ಳಾಪುರದಿಂದ ಅಸೆಂಬ್ಲಿಗೆ ಆಯ್ಕೆಯಾಗಿರುವ ಪ್ರದೀಪ್ ಈಶ್ವರ್ ದೈತ್ಯಸಂಹಾರಿ ಮಾತ್ರ ಅಲ್ಲ; ನಿಗರ್ವಿ, ನಮ್ರ ಮತ್ತು ಸಂಸ್ಕಾರಿಯೂ ಹೌದು!

ಅರುಣ್​ ಕುಮಾರ್​ ಬೆಳ್ಳಿ

Updated on: May 18, 2023 | 7:02 PM

ತನಗಿಂತ ದೊಡ್ಡವರನ್ನು ಅವರು ಕಾಲುಮುಟ್ಟಿ ನಮಸ್ಕರಿಸುವುದನ್ನು ಸಹ ಇಲ್ಲಿ ನೋಡಬಹುದು. ಪ್ರದೀಪ್ ಈಶ್ವರ್ ಒಬ್ಬ ಸಂಸ್ಕಾರವಂತ ರಾಜಕಾರಣಿಯೂ ಹೌದು.

ಬೆಂಗಳೂರು: ಚಿಕ್ಕಬಳ್ಳಾಪುರದಿಂದ ವಿಧಾನಸಭೆಗೆ ಆಯ್ಕೆಯಾಗಿರುವ ಕಾಂಗ್ರೆಸ್ ಪಕ್ಷದ ಪ್ರದೀಪ್ ಈಶ್ವರ್ (Pradeep Eshwar) ನಿಸ್ಸಂದೇಹವಾಗಿ ಕರ್ನಾಟಕ ರಾಜಕಾರಣದಲ್ಲಿ ಹೊಸ ಸೆನ್ಸೇಷನ್! ಡಾ ಕೆ ಸುಧಾಕರ್ ರಂಥ (Dr K Sudhakar) ಅತಿರಥನನ್ನು ಸೋಲಿಸಿದರೂ ನೆಲಕ್ಕೆ ಅಂಟಿಕೊಂಡಿರುವ ನಿಗರ್ವಿ ಮತ್ತು ವಿನಯಶೀಲ ಯುವ ರಾಜಕಾರಣಿ. ಇವತ್ತು ಬೆಳಗ್ಗೆ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಪ್ರದೀಪ್ ಜನರ ಮನೆಗಳಿಗೆ ಹೋಗಿ ಅವರ ಕಷ್ಟ ಸುಖ ವಿಚಾರಿಸುತ್ತಿದ್ದರು. ಸಾಯಂಕಾದಷ್ಟೊತ್ತಿಗೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯಾಗಿ ಅಯ್ಕೆಯಾಗಿರುವ ಸಿದ್ದರಾಮಯ್ಯ (Siddaramaiah) ಮತ್ತು ಡಿಕೆ ಶಿವಕುಮಾರ್ ರನ್ನು (DK Shivakumar) ಸ್ವಾಗತಿಸಲು ಹೆಚ್ ಎ ಎಲ್ ವಿಮಾನ ನಿಲ್ದಾಣದಲ್ಲಿ ಹಾಜರಿದ್ದರು. ನಿಲ್ದಾಣದ ಬಳಿ ನೆರೆದಿರುವ ಜನರ ಗಮನವೆಲ್ಲ ಪ್ರದೀಪ್ ಈಶ್ವರ್ ಮೇಲಿದೆ. ಪೊಲೀಸರು ಕೂಡ ಅವರೊಂದಿಗೆ ಸೆಲ್ಪೀ ತೆಗೆದುಕೊಳ್ಳಲು ಹಾತೊರೆಯುತ್ತಿದ್ದಾರೆ. ತನಗಿಂತ ದೊಡ್ಡವರನ್ನುಅವರು ಕಾಲುಮುಟ್ಟಿ ನಮಸ್ಕರಿಸುವುದನ್ನು ಸಹ ಇಲ್ಲಿ ನೋಡಬಹುದು. ಪ್ರದೀಪ್ ಈಶ್ವರ್ ಒಬ್ಬ ಸಂಸ್ಕಾರವಂತ ರಾಜಕಾರಣಿಯೂ ಹೌದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.