ಪುನೀತ್ ರಾಜಕುಮಾರ್ ಅವರ ಆದರ್ಶ ಮತ್ತು ಸಮಾಜಮುಖಿ ಚಿಂತನೆ ನನ್ನ ಮೇಲೆ ಅಗಾಧ ಪ್ರಭಾವ ಬೀರಿದೆ: ಎಮ್ ಪಿ ರೇಣುಕಾಚಾರ್ಯ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 05, 2021 | 7:17 PM

ಅಪ್ಪು ಅವರಿಗಿದ್ದ ಸಾಮಾಜಿಕ ಕಳಕಳಿಯನ್ನು ಮನಸಾರೆ ಹೊಗಳಿದ ಮಾಜಿ ಸಚಿವರು, ಅವರು ಮಾಡಿದ ನೇತ್ರದಾನ ನಾಲ್ವರ ಬದುಕಿನಲ್ಲಿ ಬೆಳಕು ತರುವ ಜೊತೆಗೆ ಲಕ್ಷಾಂತರ ಜನರಿಗೆ ಪ್ರೇರಣೆ ನೀಡಿದೆ ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ರಾಜಕೀಯ ಕಾರ್ಯದರ್ಶಿ ಮತ್ತು ಹೊನ್ನಾಳಿ ಶಾಸಕ ಎಂ ಪಿ ರೇಣುಕಾಚಾರ್ಯ ಅವರು ಶುಕ್ರವಾರ ಬೆಳಗ್ಗೆ ಪುನೀತ್ ರಾಜಕುಮಾರ ಅವರ ಸಮಾಧಿಗೆ ನಮನ ಸಲ್ಲಿಸಿದ ನಂತರ ಮಾಧ್ಯಮದೊಂದಿಗೆ ಮಾತಾಡುತ್ತಾ, ಅಗಲಿದ ನಟನ ಆದರ್ಶ, ಸಮಾಜ ಸೇವೆ, ಮಾನವೀಯ ಕಳಕಳಿ ತಮಗೆ ಸ್ಫೂರ್ತಿಯಾಗಿವೆ ಎಂದು ಹೇಳಿದರು. ಅಪ್ಪು ಅವರನ್ನು ಹಾಸನದಲ್ಲಿ ಭೇಟಿಯಾದ ಸಂದರ್ಭವನ್ನು ನೆನಪಿಸಿಕೊಂಡ ಶಾಸಕರು, ನಟನಿಗೆ ಹೊನ್ನಾಳಿಯಲ್ಲಿ ಆಯೋಜಿಸಲಾಗಿದ್ದ ಕೃಷಿಮೇಳಕ್ಕೆ ಆಹ್ವಾನಿಸಿದ್ದನ್ನು ಹೇಳಿದರು. ಆದರೆ, ಅದೇ ಸಮಯಕ್ಕೆ ಅಪ್ಪು ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಶಬರಿ ಮಲೆಗೆ ಹೋಗಿದ್ದರಿಂದ ಅವರ ಬದಲಿಗೆ ಶಿವರಾಜುಕುಮಾರ್ ಅವರು ಆಗಮಿಸಿದ್ದರು ಅಂತ ರೇಣುಕಾಚಾರ್ಯ ಹೇಳಿದರು.

ಅಪ್ಪು ಅವರಿಗಿದ್ದ ಸಾಮಾಜಿಕ ಕಳಕಳಿಯನ್ನು ಮನಸಾರೆ ಹೊಗಳಿದ ಮಾಜಿ ಸಚಿವರು, ಅವರು ಮಾಡಿದ ನೇತ್ರದಾನ ನಾಲ್ವರ ಬದುಕಿನಲ್ಲಿ ಬೆಳಕು ತರುವ ಜೊತೆಗೆ ಲಕ್ಷಾಂತರ ಜನರಿಗೆ ಪ್ರೇರಣೆ ನೀಡಿದೆ ಎಂದರು. ಅನೇಕರು ನೇತ್ರದಾನ ಮಾಡಲು ಮುಂದೆ ಬರುತ್ತಿರುವ ಹಾಗೆ, ತಮ್ಮ ಪತ್ನಿಯೂ ಅಂಥ ಪುಣ್ಯದ ಕಾರ್ಯದಲ್ಲಿ ತಾವು ಭಾಗಿಯಾಗಬೇಕು ಅಂತ ಹೇಳಿದ ನಂತರ ತಮ್ಮ ಕುಟುಂಬವೂ ಅದಕ್ಕೆ ತಯಾರಾಗಿದೆ ಎಂದು ಅವರು ಹೇಳಿದರು.

ಪುನೀತ್ ಅವರ ಕುಟುಂಬ ಅಗಾಧವಾದ ದುಃಖ ಮತ್ತು ನೋವಿನಲ್ಲಿದ್ದರೂ ಜನರಿಗೆಲ್ಲ ಸಾಂತ್ವನ ನೀಡುತ್ತಿರುವುದು ಶ್ಲಾಘನೀಯವಾಗಿದೆ ಎಂದು ರೇಣುಕಾಚಾರ್ಯ ಹೇಳಿದರು. ತಾನೊಬ್ಬ ರಾಜಕಾರಣಿಯಾಗಿದ್ದರೂ ಪುನೀತ್ ಅವರ ಸಮಾಜಮುಖಿ ಚಿಂತನೆ ತನ್ನ ಮೇಲೆ ಗಾಢವಾದ ಪರಿಣಾಮ ಬೀರಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ:  ಬೆಂಗಳೂರು ವಿಮಾನ ನಿಲ್ದಾಣದಲ್ಲಿ ತಮಿಳು ನಟ ವಿಜಯ್​ ಸೇತುಪತಿ ಮೇಲೆ ಹಲ್ಲೆಗೆ ಯತ್ನ, ವಿಡಿಯೋ ವೈರಲ್