ಹಾಸನಾಂಬೆ ಉತ್ಸವ; ಸಾಲಲ್ಲಿ ನಿಂತಿದ್ದ ಮಹಿಳಾ ಭಕ್ತಾದಿಗಳು ಒಂದೇ ಸಮ ಕೂಗಾಡಿದರೂ ಜಿಲ್ಲಾಧಿಕಾರಿ ತಾಳ್ಮೆ ಕಳೆದುಕೊಳ್ಳಲಿಲ್ಲ!

Edited By: ಅರುಣ್​ ಕುಮಾರ್​ ಬೆಳ್ಳಿ

Updated on: Nov 11, 2023 | 10:33 AM

ನಿನ್ನೆಯ ಘಟನೆಯಿಂದ ಎಚ್ಚೆತ್ತುಕೊಂಡಿರುವ ಜಿಲ್ಲಾಧಿಕಾರಿ ಸಿ ಸತ್ಯಭಾಮ ಬೆಳಗಿನ ಸಮಯದಲ್ಲೇ ದೇವಸ್ಥಾನದ ಆವರಣದಲ್ಲಿ ಹಾಜರಿದ್ದರು. ಕೂಗಾಡುತ್ತಿದ್ದ ಮಹಿಳೆಯರಿಗೆ ಅವರು ಶಾಂತವಾಗಿಯೇ ಪ್ರತಿಕ್ರಿಯೆ ನೀಡಿದರು. ಆದರೆ, ಮಹಿಳೆಯರಿಗೆ ತಮ್ಮದೇ ವರಾತ. ಪೊಲೀಸರು ಅವರ ಬಳಿ ಹೋಗಿ ಸಮಾಧಾನದಿಂದ ಹೇಳಿದರೂ ಕೇಳಲೊಲ್ಲರು. ಆಗಲೂ ಸತ್ಯಭಾಮ ಸಮಾಧಾನ ಭಾವದಿಂದಲೇ ಸಿಡುಕುತ್ತಾರೆ.

ಹಾಸನ: ನಿನ್ನೆ ನಡೆದ ಹಾಸನಾಂಬೆ ಉತ್ಸವದಲ್ಲಿ ನಡೆದ ವಿದ್ಯುತ್ ಶಾಕ್ (electric shock) ಘಟನೆ ಭಕ್ತಾದಿಗಳ ಉತ್ಸಾಹ ಕುಂದಿಸಿಲ್ಲ. ಹಾಸನಾಂಬ ದೇಗುಲದ (Hasanamba temple) ದ್ವಾರಗಳನ್ನು ತೆರೆದು ಇವತ್ತಿಗೆ 9ನೇ ದಿನ, ಜನ ದೇವಿಯ ದರ್ಶನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಬರುತ್ತಿದ್ದಾರೆ. ದೂರದಿಂದ ಬಂದವರಿಗೆ ಸಹಜವಾಗೇ ಬೇಗ ದರ್ಶನ ಮಾಡಿಕೊಳ್ಳುವ ಆತುರ. ಭಕ್ತಾದಿಗಳೆಲ್ಲ ಸಾಲಿನಲ್ಲಿ ನಿಂತಿರುವುದರಿಂದ ದರ್ಶನ ಪ್ರಕ್ರಿಯೆ ಕ್ರಮ ಮತ್ತು ಶಿಸ್ತುಬದ್ಧವಾಗಿ ನಡೆಯಬೇಕು. ಸಾಲಿನಲ್ಲಿರುವ ಇಬ್ಬರು ಮಹಿಳೆಯರು ತಡವಾಗುತ್ತಿದೆ ಅಂತ ಜಿಲ್ಲಾಧಿಕಾರಿ ಮೇಲೆ ಕೂಗಾಡುತ್ತಿದ್ದಾರೆ. ನಿನ್ನೆಯ ಘಟನೆಯಿಂದ ಎಚ್ಚೆತ್ತುಕೊಂಡಿರುವ ಜಿಲ್ಲಾಧಿಕಾರಿ ಸಿ ಸತ್ಯಭಾಮ (DC C Sathyabhama) ಬೆಳಗಿನ ಸಮಯದಲ್ಲೇ ದೇವಸ್ಥಾನದ ಆವರಣದಲ್ಲಿ ಹಾಜರಿದ್ದರು. ಕೂಗಾಡುತ್ತಿದ್ದ ಮಹಿಳೆಯರಿಗೆ ಅವರು ಶಾಂತವಾಗಿಯೇ ಪ್ರತಿಕ್ರಿಯೆ ನೀಡಿದರು. ಆದರೆ, ಮಹಿಳೆಯರಿಗೆ ತಮ್ಮದೇ ವರಾತ. ಪೊಲೀಸರು ಅವರ ಬಳಿ ಹೋಗಿ ಸಮಾಧಾನದಿಂದ ಹೇಳಿದರೂ ಕೇಳಲೊಲ್ಲರು. ಆಗಲೂ ಸತ್ಯಭಾಮ ಸಮಾಧಾನ ಭಾವದಿಂದಲೇ ಸಿಡುಕುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Web contact

TV9 Kannada

Read More