ದೊಡ್ಡ ಅನಾಹುತವೇನೂ ಸಂಭವಿಸಿಲ್ಲ, ಹಾಸನಾಂಬೆಯ ದರ್ಶನ ಪುನಃ ಆರಂಭವಾಗಿದೆ: ಕೆಎನ್ ರಾಜಣ್ಣ
ಜಿಲ್ಲಾಧಿಕಾರಿ ದುಷ್ಕೃತ್ಯ ಆಗಿರುವ ಸಾಧ್ಯತೆ ಇದೆ ಅಂತ ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಸಚಿವ, ಹೌದು ಅಥವಾ ಇಲ್ಲ ಅಂತ ಸದ್ಯಕ್ಕೆ ಹೇಳಲಾಗದು ಅಂತ ಹೇಳಿ ತೆಲಂಗಾಣ ಪ್ರವಾಸದಲ್ಲಿರುವ ಸಿಎಂ ಸಿದ್ದರಾಮಯ್ಯ ಜಿಲ್ಲಾಧಿಕಾರಿಯಿಂದ ಮಾಹಿತಿ ಪಡೆದಿದ್ದಾರೆ ಎಂದರು.
ಹಾಸನ: ಹಾಸನಾಂಬೆ ಉತ್ಸವದ (Hasanamba Utsav) 8ನೇ ದಿನವಾಗಿರುವ ಇಂದು ಬ್ಯಾರಿಕೇಡ್ ಗಳಲ್ಲಿ ವಿದ್ಯುತ್ ಪ್ರವಹಿಸಿದ ಘಟನೆ ರಾಜ್ಯದೆಲ್ಲೆಡೆ ಚರ್ಚೆಯಾಗುತ್ತಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನೆ ನಡೆದಾಗ ಜಿಲ್ಲಾ ಉಸ್ತವಾರಿ ಸಚಿವ ಕೆಎನ್ ರಾಜಣ್ಣ (KN Rajanna) ತುಮಕೂರಲ್ಲಿದ್ದರು. ಹಾಸನಕ್ಕೆ ತೆರಳುವ ಮೊದಲು ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ದೊಡ್ಡ ಆನಾಹುತಕಾರಿ ವಿದ್ಯಮಾನಗಳೇನೂ ಜರುಗಿಲ್ಲ, ತಮಗೆ ದೊರೆತಿರುವ ಮಾಹಿತಿಯ ಪ್ರಕಾರ ಜನ ಗಾಬರಿ ಮತ್ತು ಅತಂಕಕ್ಕೆ ಒಳಗಾಗಿದ್ದು ಸತ್ಯ, ಆದರೆ ಈಗ ಹಾಸನಾಂಬೆ ದೇವಸ್ಥಾನ ಆವರಣ ಸಾಮಾನ್ಯ ಸ್ಥಿತಿಗೆ ಮರಳಿದೆ, ದರ್ಶನದ ವ್ಯವಸ್ಥೆ ಮತ್ತೆ ಪ್ರಾರಂಭಗೊಂಡಿದೆ ಮತ್ತು ಭಕ್ತಾದಿಗಳು ದೇವಿಯ ದರ್ಶನ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು. ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao), ಸಂಸದ ಮತ್ತು ಶಾಸಕರು ಮಾತಾಡಿಸಿದ್ದಾರೆ, ಯಾರೂ ಗಾಬರಿಯಾಬೇಕಿಲ್ಲ ಎಂದು ರಾಜಣ್ಣ ಹೇಳಿದರು. ಜಿಲ್ಲಾಧಿಕಾರಿ ದುಷ್ಕೃತ್ಯ ಆಗಿರುವ ಸಾಧ್ಯತೆ ಇದೆ ಅಂತ ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಸಚಿವ, ಹೌದು ಅಥವಾ ಇಲ್ಲ ಅಂತ ಸದ್ಯಕ್ಕೆ ಹೇಳಲಾಗದು ಅಂತ ಹೇಳಿ ತೆಲಂಗಾಣ ಪ್ರವಾಸದಲ್ಲಿರುವ ಸಿಎಂ ಸಿದ್ದರಾಮಯ್ಯ ಜಿಲ್ಲಾಧಿಕಾರಿಯಿಂದ ಮಾಹಿತಿ ಪಡೆದಿದ್ದಾರೆ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ