AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುಮಾರಸ್ವಾಮಿ ಜ್ಯೋತಿಷ್ಯ ಹೇಳೋದನ್ನು ಕಲ್ಕೊಂಡು ಬಂದಿದ್ದಾರೆ, ಅವರಂತೆ ಜ್ಯೋತಿಷ್ಯ ನುಡಿಯಲು ನನಗೆ ಬರಲ್ಲ: ಕೆಎನ್ ರಾಜಣ್ಣ, ಸಚಿವ

ಕುಮಾರಸ್ವಾಮಿ ಜ್ಯೋತಿಷ್ಯ ಹೇಳೋದನ್ನು ಕಲ್ಕೊಂಡು ಬಂದಿದ್ದಾರೆ, ಅವರಂತೆ ಜ್ಯೋತಿಷ್ಯ ನುಡಿಯಲು ನನಗೆ ಬರಲ್ಲ: ಕೆಎನ್ ರಾಜಣ್ಣ, ಸಚಿವ

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 11, 2023 | 5:27 PM

ಜೆಡಿಎಸ್-ಬಿಜೆಪಿ ಮೈತ್ರಿಯ ಬಳಿಕ ಲೋಕ ಸಭಾ ಚುನಾವಣೆಗಾಗಿ ಕಾಂಗ್ರೆಸ್ ಪಕ್ಷದ ತಯಾರಿ ಹೇಗಿದೆ ಅಂತ ಕೇಳಿದ ಪ್ರಶ್ನೆಗೆ ರಾಜಣ್ಣ, ಅವರೇನಾದರೂ ಮಾಡಿಕೊಳ್ಳಲಿ, ಲೋಕ ಸಭಾ ಚುನಾವಣೆಯಲ್ಲಿ ಅವೆರಡು ಪಕ್ಷಗಳ ನಡುವೆ ನಡೆದಿರುವ ಮೈತ್ರಿ ಕಾಂಗ್ರೆಸ್ ಪಕ್ಷದ ಅವಕಾಶಗಳ ಮೇಲೆ ಯಾವುದೇ ಪರಿಣಾಮ ಬೀರಲ್ಲ, ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಎಲ್ಲ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಲಾಗುವುದು ಎಂದರು.

ಹಾಸನ: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಎಗ ಮಾತಾಡಿದ ಜಿಲ್ಲಾ ಉಸ್ತುವಾರಿ ಸಚಿವ ಕೆಎನ್ ರಾಜಣ್ಣ, (KN Rajanna) ಜೆಡಿಎಸ್-ಬಿಜೆಪಿ ಮೈತ್ರಿಯ (JDS-BJP alliance) ಬಳಿಕ ಲೋಕ ಸಭಾ ಚುನಾವಣೆಗಾಗಿ ಕಾಂಗ್ರೆಸ್ ಪಕ್ಷದ ತಯಾರಿ ಹೇಗಿದೆ ಅಂತ ಕೇಳಿದ ಪ್ರಶ್ನೆಗೆ, ಅವರೇನಾದರೂ ಮಾಡಿಕೊಳ್ಳಲಿ, ಲೋಕ ಸಭಾ ಚುನಾವಣೆಯಲ್ಲಿ (Lok Sabha polls) ಅವೆರಡು ಪಕ್ಷಗಳ ನಡುವೆ ನಡೆದಿರುವ ಮೈತ್ರಿ ಕಾಂಗ್ರೆಸ್ ಪಕ್ಷದ ಅವಕಾಶಗಳ ಮೇಲೆ ಯಾವುದೇ ಪರಿಣಾಮ ಬೀರಲ್ಲ, ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಎಲ್ಲ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಲಾಗುವುದು ಎಂದು ಹೇಳಿದರು. ಇನ್ನಾರು ತಿಂಗಳಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಿದ್ದು ಹೋಗಲಿದೆ ಅಂತ ಕುಮಾರಸ್ವಾಮಿ ಹೇಳಿರುವುಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ರಾಜಣ್ಣ, ಅವರು ಎಲ್ಲೋ ಹೋಗಿ ಜ್ಯೋತಿಷ್ಯ ಹೇಳೋದನ್ನು ಕಲ್ಕೊಂಡು ಬಂದಿರಬೇಕು, ನಾನು ಜ್ಯೋತಿಷಿ ಅಲ್ಲ, ಅವರನ್ನೇ ಕೇಳಿ ಅಂತ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ