ಹಸಿವಿನಿಂದ ಕಂಗಾಲಾದ ಹೆಬ್ಬಾವು ಸಾಕು ಮೇಕೆಯನ್ನು ಸ್ವಾಹಾ ಮಾಡಲು ಬಂದಿತ್ತು, ಮುಂದೇನಾಯ್ತು ನೀವೇ ನೋಡಿ!

ಹಸಿವಿನಿಂದ ಕಂಗಾಲಾದ ಹೆಬ್ಬಾವು ಸಾಕು ಮೇಕೆಯನ್ನು ಸ್ವಾಹಾ ಮಾಡಲು ಬಂದಿತ್ತು, ಮುಂದೇನಾಯ್ತು ನೀವೇ ನೋಡಿ!

ಸಾಧು ಶ್ರೀನಾಥ್​
|

Updated on: Oct 11, 2023 | 7:04 PM

ಆದರೆ ತಮ್ಮ ಜೊತೆಗಾರ ಮೇಕೆ ಹೀಗೆ ಹೆಬ್ಬಾವಿಗೆ ಆಹಾರವಾಗುವುದನ್ನು ಕಂಡು ಹಿಂಡಿನಲ್ಲಿದ್ದ ಇತರೆ ಜಾನುವಾರುಗಳು ಭಯದಿಂದ ಅರಚಲು ಪ್ರಾರಂಭಿಸಿದವು. ಯಾಕೆ ಇವೆಲ್ಲಾ ಹೀಗೆ ಕೂಗುತ್ತಿವೆ ಎಂದು ಗಾಬರಿಗೆ ಬಿದ್ದ ಮೇಕೆ ಸಾಕಾಣಿಕೆ ದಾರ ​​ಅವುಗಳ ಬಳಿ ಓಡಿ ಬಂದು ನೋಡಲಾಗಿ ಆ ದೃಶ್ಯ ಕಂಡು ಬೆಚ್ಚಿಬಿದ್ದ.

ಆಂಧ್ರ ಪ್ರದೇಶ, ಅಕ್ಟೋಬರ್​ 11: ಹೆಬ್ಬಾವು ತನ್ನ ಬೇಟೆಯನ್ನು ವಿಲವಿಲ ಒದ್ದಾಡುವಂತೆ ಮಾಡಿ, ಕೊಂದು ತಿನ್ನುತ್ತದೆ. ಬೇಟೆ ಸಿಕ್ಕಿದಾಗ ತನ್ನ ಮಾಂಸಖಂಡಗಳನ್ನು ಬಿಗಿಗೊಳಿಸಿ, ದೊಡ್ಡದಾಗಿ ಬೆಳೆಯುತ್ತದೆ. ಆದರೆ ಇತ್ತ ಬೇಟೆಗೆ ತುತ್ತಾದ ಪ್ರಾಣಿ ಜಡ್ಡುಗಟ್ಟಿ ಸಾಯುತ್ತದೆ. ಕೊನೆಗೆ ಹಾವು ತಾನು ಬೇಟೆಯಾಡಿದ ಪ್ರಾಣಿಯ ಮೂಳೆಗಳನ್ನು ಪುಡಿ ಪುಡಿ ಮಾಡಿ ಸಾಯಿಸುತ್ತದೆ. ನಂತರ ಅದನ್ನು ಸುಗ್ರಾಸವಾಗಿ ಮೆಲ್ಲುತ್ತದೆ. ತಾಜಾ ಘಟನೆಯಲ್ಲಿ ಹಸಿವಿನಿಂದ ಕಂಗಾಲಾಗಿ ಬಂದಿದ್ದ ಹೆಬ್ಬಾವು ತನ್ನ ಬೇಟೆಯನ್ನು ಸುತ್ತುವರೆದಿತ್ತು. ಆದರೆ ಸ್ಥಳೀಯರು ಆ ದೃಶ್ಯವನ್ನು ಕಂಡು, ಮೊದಲು ಹೆಬ್ಬಾವಿನ ಕಪಿಮುಷ್ಟಿಯಲ್ಲಿದ್ದ, ತಮ್ಮ ಸಾಕು ಮೇಕೆಯ ಪ್ರಾಣ ಉಳಿಸಲು ಮುಂದಾದರು. ಏಲೂರು ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಮುಂದೆ ಆ ಬೃಹತ್ ಹಾವು ಆಹಾರಕ್ಕಾಗಿ ಬಂದು ತನ್ನ ಪ್ರಾಣವನ್ನೇ ಕಳೆದುಕೊಳ್ಳಬೇಕಾದ ಪ್ರಸಂಗ ಎದುರಾಯಿತು. ಸ್ಥಳೀಯರು ಧೈರ್ಯ ಮಾಡಿ ತಮ್ಮ ಕೋಲುಗಳು, ಕಬ್ಬಿಣದ ರಾಡುಗಳಿಂದ ಆ ಹೆಬ್ಬಾವನ್ನು ಕೊಂದರು. ಅದರೊಂದಿಗೆ ಸಾವಿನ ದವಡೆಯಲ್ಲಿದ್ದ ತಮ್ಮ ಸಾಕು ಮೇಕೆಯನ್ನು ​​ಕಾಪಾಡಿಕೊಂಡರು.

ಏಲೂರು ಜಿಲ್ಲೆಯ ದ್ವಾರಕಾತಿರುಮ ವಸಂತನಗರ ಕಾಲೋನಿಯಲ್ಲಿ ಮೇಕೆಗಳು ಹಿಂಡಿನೊಂದಿಗೆ ವಾಸಿಸುತ್ತಿದ್ದವು. ಕಾಲೋನಿ ನಿವಾಸಿಯೊಬ್ಬ ಊರ ಹೊರವಲಯದಲ್ಲಿ ಹುಲ್ಲುಗಾವಲಿನಲ್ಲಿ ಆ ಮೇಕೆ, ದನಗಳನ್ನು ಮೇಯಿಸುತ್ತಾನೆ. ಪ್ರತಿದಿನವೂ ತನ್ನ ಸಾಕು ಪ್ರಾಣಿಗಳನ್ನು ಕರೆದುಕೊಂಡು ಹುಲ್ಲುಗಾವಲಿಗೆ ಹೋಗುತ್ತಿದ್ದನು. ಆದರೆ ಇಂದು ಬುಧವಾರ ಅಲ್ಲಿದ್ದ ಪೊದೆಗಳಲ್ಲಿ ದೊಡ್ಡ ಹೆಬ್ಬಾವೊಂದು ಅಡಗಿತ್ತು. ಅದು ಈ ಸಾಕು ಪ್ರಾಣಿಗಳ ಆಹಾರವನ್ನು ಕಂಡು ಸಂತೋಷಪಟ್ಟಿರಬೇಕು. ಅದು ಹಿಂಡಿನಲ್ಲಿ, ತನ್ನ ಸಮೀಪವಿದ್ದ ಒಂದು ಸಾಕು ಮೇಕೆಯನ್ನು ಹಿಡಿದು, ಅದನ್ನು ತನ್ನ ದೇಹಕ್ಕೆ ಬಿಗಿಯಾಗಿ ಸುತ್ತಿ ಕೊಂಡಿತು. ಅದಕ್ಕಾಗ ಉಸಿರಾಡಲು ಸಾಧ್ಯವಾಗದೇ ಹೋಯಿತು.

ಆದರೆ ತಮ್ಮ ಜೊತೆಗಾರ ಮೇಕೆ ಹೀಗೆ ಹೆಬ್ಬಾವಿಗೆ ಆಹಾರವಾಗುವುದನ್ನು ಕಂಡು ಹಿಂಡಿನಲ್ಲಿದ್ದ ಇತರೆ ಜಾನುವಾರುಗಳು ಭಯದಿಂದ ಅರಚಲು ಪ್ರಾರಂಭಿಸಿದವು. ಯಾಕೆ ಇವೆಲ್ಲಾ ಹೀಗೆ ಕೂಗುತ್ತಿವೆ ಎಂದು ಗಾಬರಿಗೆ ಬಿದ್ದ ಮೇಕೆ ಸಾಕಾಣಿಕೆ ದಾರ ​​ಅವುಗಳ ಬಳಿ ಓಡಿ ಬಂದು ನೋಡಲಾಗಿ ಆ ದೃಸ್ಯ ಕಂಡು ಬೆಚ್ಚಿಬಿದ್ದ. ಆ ದೃಶ್ಯವನ್ನು ನೋಡಿದ ಸಾಕಣಿಕೆದಾರ, ಭಯದಿಂದ ಬೆವತುಹೋಗಿದ್ದಾನೆ. ಅದರೂ ತನ್ನ ಶಕ್ತಿಮೀರು ಜೋರಾಗಿ ಕಿರುಚಿದ್ದಾನೆ. ಆತನ ಕೂಗು ಕೇಳಿದ ಸ್ಥಳೀಯ ಯುವಕರು ಅಲ್ಲಿಗೆ ದೌಡಾಯಿಸಿ ಬಂದರು. ತಕ್ಷಣವೇ ಕಾರ್ಯಪ್ರವೃತ್ತರಾಗಿ, ಕಗೆ ಸಿಕ್ಕಿದ ಕೋಲು, ಬಡಿಗೆ, ಕಬ್ಬಿಣದ ಸಲಾಕೆಗಳನ್ನು ಹಿಡಿದುಬಂದು ಹೆಬ್ಬಾವನ್ನು ಕೊಂದರು. ಅಲ್ಲಿಗೆ ದೊಡ್ಡ ದುರಂತದಿಂದ ಪಾರಾದೆವು ಎಂದು ನೆಮ್ಮದಿಯ ನಿಟ್ಟುಸಿರುಬಿಟ್ಟರು.