ಬಿಜೆಪಿ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಜೆಡಿಎಸ್ ಜೊತೆ ಮಾಡಿಕೊಂಡಿರುವ ಮೈತ್ರಿ ಬ್ಯಾಕ್​ಫೈರ್ ಆಗಬಹುದು: ಸುಮಲತಾ ಅಂಬರೀಶ್

ಮೈತ್ರಿಯ ಮಾತುಕತೆ ನಡೆಸುವ ಮೊದಲಾಗಲೀ ಅಥವಾ ನಂತರವಾಗಲೀ ತನ್ನನ್ನು ಯಾರೂ ಸಂಪರ್ಕಿಸಿಲ್ಲ ಎಂದು ಹೇಳಿದ ಸುಮಲತಾ, ಬಿಜೆಪಿಗೆ ತಮ್ಮ ಬೆಂಬಲ ಈಗ ಇದೆ ಮುಂದೆಯೂ ಇರಬಹುದು; ಆದರೆ, ಪಕ್ಷಕ್ಕಾಗಿ ಮೊದಲಿನಿಂದಲೂ ದುಡಿಯುತ್ತಾ ಬಂದಿರುವ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಅವರೊಂದಿಗೆ ವಿಚಾರ ವಿನಿಮಯ ನಡೆಸದೆ ದೋಸ್ತಿ ಬೆಳೆಸಿದ್ದು ಸೂಕ್ತವೆನಿಸುತ್ತಿಲ್ಲ ಎಂದು ಸುಮಲತಾ ಹೇಳಿದರು

ಬಿಜೆಪಿ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಜೆಡಿಎಸ್ ಜೊತೆ ಮಾಡಿಕೊಂಡಿರುವ ಮೈತ್ರಿ ಬ್ಯಾಕ್​ಫೈರ್ ಆಗಬಹುದು: ಸುಮಲತಾ ಅಂಬರೀಶ್
|

Updated on: Oct 11, 2023 | 7:51 PM

ಮಂಡ್ಯ: ಬಿಜೆಪಿ-ಜೆಡಿಎಸ್ ಮೈತ್ರಿಯ (JDS-BLP alliance) ಬಗ್ಗೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಅವರ ಅಭಿಪ್ರಾಯ ಬಿಜೆಪಿ ನಾಯಕರಿಗೆ ಇಷ್ಟವಾಗದಿರಬಹುದು ಅದರೆ ಅವರು ವಾಸ್ತವಾಂಶವನ್ನು ಬಿಚ್ಟಿಟ್ಟಿದ್ದಾರೆ. ಮೈತ್ರಿಯ ಮಾತುಕತೆ ನಡೆಸುವ ಮೊದಲಾಗಲೀ ಅಥವಾ ನಂತರವಾಗಲೀ ತನ್ನನ್ನು ಯಾರೂ ಸಂಪರ್ಕಿಸಿಲ್ಲ ಎಂದು ಹೇಳಿದ ಸುಮಲತಾ, ಬಿಜೆಪಿಗೆ ತಮ್ಮ ಬೆಂಬಲ ಈಗ ಇದೆ ಮುಂದೆಯೂ ಇರಬಹುದು; ಆದರೆ, ಪಕ್ಷಕ್ಕಾಗಿ ಮೊದಲಿನಿಂದಲೂ ದುಡಿಯುತ್ತಾ ಬಂದಿರುವ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಅವರೊಂದಿಗೆ ವಿಚಾರ ವಿನಿಮಯ ನಡೆಸದೆ ದೋಸ್ತಿ ಬೆಳೆಸಿದ್ದು ಸೂಕ್ತವೆನಿಸುತ್ತಿಲ್ಲ ಎಂದು ಸುಮಲತಾ ಹೇಳಿದರು. ತಮಗಿಂತ ಮೊದಲು ಬಿಜೆಪಿಗಾಗಿ ಕೆಲಸ ಮಾಡುತ್ತಾ ಶಾಸಕರಾಗಿದ್ದ ಕೆಸಿ ನಾರಾಯಣಗೌಡರಿಗೆ (KC Narayana Gowda) ಕಾರ್ಯಕರ್ತರ ಮತ್ತು ಜನರ ಪಲ್ಸ್ ಚೆನ್ನಾಗಿ ಗೊತ್ತಿರುತ್ತದೆ. ಜನ ಏನು ಬಯಸುತ್ತಾರೆ ಅನ್ನೋದು ಅವರಿಗೆ ತಿಳಿದಿರುತ್ತದೆ. ಹಾಗಾಗಿ, ಅವರನ್ನೆಲ್ಲ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಬಿಜೆಪಿ ಹಿರಿಯ ನಾಯಕರು ಮಾಡಿಕೊಂಡಿರುವ ಮೈತ್ರಿ ಬ್ಯಾಕ್ ಫೈರ್ ಆಗಬಹುದು ಎಂದು ಸುಮಲತಾ ಅಂಬರೀಶ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us