ಬೆಂಗಳೂರಲ್ಲಿ ಹದಗೆಟ್ಟ ಕಾನೂನು ಸುವ್ಯವಸ್ಥೆ; ಡೆಲಿವರಿ ಬಾಯ್ ಅಡ್ಡಗಟ್ಟಿ ರಾಬರಿ, ತಲ್ವಾರ್ನಿಂದ ಹೊಡೆದು ಅಟ್ಟಹಾಸ
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪುಂಡರ ಹಾವಳಿ ಮೀತಿಮೀರಿದ್ದು, ಇವರಿಗೆ ಪೊಲೀಸರ ಭಯ ಇದೆಯಾ ಎಂಬ ಪ್ರಶ್ನೆ ಮೂಡಿದೆ. ಹೌದು, ಒಂದೇ ಕಡೆ ಎರಡೆರಡು ಕಳ್ಳತನ ಘಟನೆ ನಡೆದರೂ ಪೊಲೀಸರು ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಮೂಲಕ ರಾತ್ರಿ ಹೊತ್ತು ಮನೆಯಿಂದ ಹೊರಗಡೆ ಬರಲು ಹೆದರುವಂತಹ ಪರಿಸ್ಥಿತಿ ಎದುರಾಗಿದೆ.
ಬೆಂಗಳೂರು, ಆ.21: ಬೆಂಗಳೂರಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಪುಂಡರಿಗೆ ಪೊಲೀಸರ ಭಯವೇ ಇಲ್ಲದಂತಾಗಿದೆ. ಹೌದು, ರಸ್ತೆ ರಸ್ತೆಯಲ್ಲಿಯೂ ಪುಂಡರು ಟೂಲ್ಸ್ ಹಿಡಿದು ರಾಬರಿಗೆ ಇಳಿದಿದ್ದಾರೆ. ಅದರಂತೆ ಇದೀಗ ಹೊಟ್ಟೆಪಾಡಿಗಾಗಿ ಮಧ್ಯರಾತ್ರಿವರೆಗೂ ಕೆಲಸ ಮಾಡುವ ಡೆಲವರಿ ಬಾಯ್ಗೆ ಅಡ್ಡಗಟ್ಟಿ ದರೋಡೆ ಮಾಡಿದ್ದಾರೆ. ಅಷ್ಟೇ ಅಲ್ಲ, ತಲ್ವಾರ್ನಿಂದ ಹೊಡೆದು ಅಟ್ಟಹಾಸ ಮೆರೆದಿದ್ದಾರೆ. ಈ ಘಟನೆ ಕೋನೇನ ಅಗ್ರಹಾರ ವಿನಾಯಕನಗರ ಬಿ ಬ್ಲಾಕ್ನಲ್ಲಿ ನಡೆದಿದ್ದು, ಒಂದೇ ಕಡೆ ಎರಡೆರಡು ಘಟನೆ ನಡೆದರು ಪೊಲೀಸರು ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ