AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೊಲೀಸರಿಗೆ ಸವಾಲ್ ಹಾಕಿ ಕಳ್ಳತನ ಮಾಡುತ್ತಿದ್ದವ ಅರೆಸ್ಟ್: ಕಾಡಿನ ಬಂಡೆ ಕೆಳಗೆ ಚಿನ್ನಾಭರಣ ಹೂತಿಟ್ಟಿದ್ದ ಚಿನ್ನ ವಶಕ್ಕೆ

ಇತ್ತೀಚೆಗೆ ಕಳ್ಳತನ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿವೆ. ಅದರಂತೆ ಇಲ್ಲೊಬ್ಬ ಖತರ್ನಾಕ್​ ಕಳ್ಳನೊಬ್ಬ ಪೊಲೀಸರಿಗೆ ಸವಾಲ್ ಹಾಕಿ ದರೋಡೆ ಮಾಡುತ್ತಿದ್ದ. ಇದರಿಂದ ತಲೆಕೆಡಿಸಿಕೊಂಡಿದ್ದ ಪೊಲೀಸರ ಕೈಗೆ ಕೊನೆಗೂ ಆ ಕಳ್ಳ ಸಿಕ್ಕಿಬಿದ್ದಿದ್ದಾನೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ.

ಪೊಲೀಸರಿಗೆ ಸವಾಲ್ ಹಾಕಿ ಕಳ್ಳತನ ಮಾಡುತ್ತಿದ್ದವ ಅರೆಸ್ಟ್: ಕಾಡಿನ ಬಂಡೆ ಕೆಳಗೆ ಚಿನ್ನಾಭರಣ ಹೂತಿಟ್ಟಿದ್ದ ಚಿನ್ನ ವಶಕ್ಕೆ
ಕಳ್ಳ ನರಸಿಂಹ ರೆಡ್ಡಿ
ರಾಚಪ್ಪಾಜಿ ನಾಯ್ಕ್
| Edited By: |

Updated on:Aug 16, 2024 | 5:05 PM

Share

ಬೆಂಗಳೂರು, ಆ.16: ಸಿಟಿಯಲ್ಲಿ ಕಳ್ಳತನ ಮಾಡಿ, ಬಳಿಕ ಕದ್ದ ಆಭರಣಗಳೊಂದಿಗೆ ಕಾಡಿಗೆ ಎಸ್ಕೇಪ್ ಆಗುತ್ತಿದ್ದ ಐನಾತಿ ಕಳ್ಳನೊಬ್ಬನನ್ನ ಬೆಂಗಳೂರಿನ ಗಿರಿನಗರ ಪೊಲೀಸರು(Girinagara Police)  ಬಂಧಿಸಿದ್ದಾರೆ. ಕುಖ್ಯಾತ ಕಳ್ಳ ನರಸಿಂಹ ರೆಡ್ಡಿ ಎಂಬಾತ ಸುಮಾರು 50 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಇತ್ತೀಚೆಗೆ ಗಿರಿನಗರ ವ್ಯಾಪ್ತಿಯಲ್ಲಿ ಮನೆ ಕಳ್ಳತನ ಮಾಡಿ, ಕದ್ದ ಆಭರಣ ಸಮೇತ ಕಾಡಿಗೆ ಎಸ್ಕೇಪ್ ಆಗಿದ್ದ.

ಎರಡು ಕಾಡುಗಳನ್ನ ತನ್ನ ಆವಾಸಸ್ಥಾನ ಮಾಡಿಕೊಂಡಿದ್ದ ಕಳ್ಳ

ನೆಲಮಂಗಲ ಬಳಿಯ ಗುಡೇಮಾರನಹಳ್ಳಿ ಹಾಗೂ ಕೃಷ್ಣಗಿರಿಯ ಫಾರೆಸ್ಟ್ ಎಂಬ ಎರಡು ಕಾಡುಗಳನ್ನ ಇತ ತನ್ನ ಆವಾಸಸ್ಥಾನ ಮಾಡಿಕೊಂಡಿದ್ದ. ಕಾಡಿನ ಬಂಡೆಗಳ ಮೇಲೆ ಮಲಗುತ್ತಿದ್ದ ಆರೋಪಿ, ಪೊಲೀಸರು ಬೆನ್ನತ್ತಿದರೆ ಅವರು ನನ್ನ ಹಿಂದೆ ಬರಬೇಕು, ಬೆನ್ನಟ್ಟಬೇಕು ಎಂದು ಚಾಲೆಂಜ್ ಮಾಡಿ ಹೋಗುತ್ತಿದ್ದ. ಹೀಗೆ ಗುಡೇಮಾರನಹಳ್ಳಿ ಕಾಡಿನಲ್ಲಿದ್ದ ವೇಳೆ ಆರೋಪಿಯನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಇದನ್ನೂ ಓದಿ:ಹಣ ಹಾಕದೆಯೇ ಎಟಿಎಂ ಕಳ್ಳತನವೆಂದು ದೂರು: ಬೆಡ್ ಶೀಟ್ ಹಾಕ್ಕೊಂಡು ಬಂದಿದ್ದ ಬ್ಯಾಂಕ್ ಸಿಬ್ಬಂದಿಯ ಕಳ್ಳಾಟ ಬಯಲು

70 ಲಕ್ಷ ರೂ. ಮೌಲ್ಯದ ಒಂದು ಕೆಜಿ ಚಿನ್ನಾಭರಣ ವಶಕ್ಕೆ

ಇನ್ನು ಈ ಆರೋಪಿ ನರಸಿಂಹ ರೆಡ್ಡಿ ನೆಲಮಂಗಲದ ಸೋಲೂರು ಮೂಲದವನು. ಒಂಟಿ ಮನೆಗಳು, ಬೀಗ ಹಾಕಿದ ಮನೆಗಳನ್ನೇ ಟಾರ್ಗೆಟ್​ ಮಾಡುತ್ತಿದ್ದ ಇತ, ಮನೆಯಲ್ಲಿ ಯಾರು ಇಲ್ಲದ ವೇಳೆ ಕಳ್ಳತನ ಮಾಡಿ, ಅದೇ ದುಡ್ಡಲ್ಲಿ ಕಾರು ಖರೀದಿ ಮಾಡ್ತಿದ್ದ. ಬಳಿಕ ಕಾರಿನಲ್ಲಿ ಓಡಾಡುತ್ತಿದ್ದ ನರಸಿಂಹ, ಕಾಡಿನ ಬಂಡೆ ಕೆಳಗೆ ಕದ್ದ ಚಿನ್ನಾಭರಣ ಹೂತಿಟ್ಟಿದ್ದ. ಇದೀಗ ಖತರ್ನಾಕ್​ ಕಳ್ಳನನ್ನ ಪೊಲೀಸರು ಬಂಧಿಸಿದ್ದು, ಆತನಿಂದ 70 ಲಕ್ಷ ರೂ. ಮೌಲ್ಯದ ಒಂದು ಕೆ.ಜಿ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ. ಈ ಕುರಿತು ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನೆಗೆ ಕನ್ನ ಹಾಕುತ್ತಿದ್ದ ಇಬ್ಬರು ಆರೋಪಿಗಳ ಬಂಧನ

ಮನೆ ಕಳ್ಳತನ ಮಾಡುತ್ತಿದ್ದ ಇಬ್ಬರು ಆಸಾಮಿಗಳನ್ನ ಕುಮಾರಸ್ವಾಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ರಘು ಅಲಿಯಾಸ್ ಪೆಪ್ಸಿ (26),  ಕಾರ್ತಿಕ್ ಅಲಿಯಾಸ್​ ಎಸ್ಕೇಪ್ ಕಾರ್ತಿಕ್ (36) ಬಂಧಿತ ಆರೋಪಿಗಳು. ಯಾರು ಇಲ್ಲದಿರೊ ಮನೆ ನೋಡಿ ಸಂಚು ಹಾಕಿತ್ತಿದ್ದ ಇವರು ಬಾಗಿಲು ಒಡೆದು ಮನೆಗೆ ನುಗ್ಗಿ ಕಳ್ಳತನ ಮಾಡುತ್ತಿದ್ದರು. ಈ ಬಂಧಿತರಿಂದ 470 ಗ್ರಾಂ ಚಿನ್ನ 3 ಕೆಜಿ ಬೆಳ್ಳಿ ಗಟ್ಟಿ ವಶಕ್ಕೆ ಪಡೆಯಲಾಗಿದೆ.

ಕದ್ದ ಚಿನ್ನ ಪ್ರೇಯಸಿಗೆ ನೀಡ್ತಿದ್ದ ರಘು

ಕಳ್ಳ ರಘು, ಕದ್ದ ಚಿನ್ನವನ್ನು ಪ್ರೇಯಸಿ ಹಾಗೂ ಸ್ನೇಹಿತರಿಗೆ ನೀಡುತ್ತಿದ್ದನಂತೆ, ಜೊತೆಗೆ ಬೆಂಗಳೂರು, ಹೈದ್ರಾಬಾದ್​ನಲ್ಲಿ ಅಡ ಇಟ್ಟಿದ್ದ. ಇದೀಗ ಬನಶಂಕರಿಯ ಕಾವೇರಿನಗರ ಮನೆಯಲಿದ್ದ ಪ್ರೇಯಸಿಯಿಂದ 48 ಗ್ರಾಂ‌ ಚಿನ್ನದ ಸರ ವಶಕ್ಕೆ ಪಡೆಯಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:08 pm, Fri, 16 August 24

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್