ಹಣ ಹಾಕದೆಯೇ ಎಟಿಎಂ ಕಳ್ಳತನವೆಂದು ದೂರು: ಬೆಡ್ ಶೀಟ್ ಹಾಕ್ಕೊಂಡು ಬಂದಿದ್ದ ಬ್ಯಾಂಕ್ ಸಿಬ್ಬಂದಿಯ ಕಳ್ಳಾಟ ಬಯಲು

ಇದೇ ಜುಲೈ 7 ರಂದು ಬೆಂಗಳೂರಿನ ಬೆಳ್ಳಂದೂರು ಆಕ್ಸಿಸ್ ಬ್ಯಾಂಕ್ ಎಟಿಎಂಗೆ ಬೆಡ್ ಶೀಟ್ ಹಾಕ್ಕೊಂಡು ಬಂದಿದ್ದ ಕಳ್ಳರ ಗ್ಯಾಂಗ್, ಎಟಿಎಂ ಕಟ್ ಮಾಡಿ ಕಳ್ಳತನ ಮಾಡಿದ್ದರು. ಈ ಹಿನ್ನಲೆ ದೂರು ಕೂಡ ದಾಖಲಾಗಿತ್ತು. ಇದೀಗ ತನಿಖೆ ನಡೆಸಿದ ಪೊಲೀಸರಿಗೆ ಮೇಜರ್ ಟ್ವಿಸ್ಟ್‌ ಸಿಕ್ಕಿದ್ದು, ಹಣ ಕಳ್ಳತನ ಆಗಿದೆ ಎಂದು ದೂರು ಕೊಟ್ಟ ಬ್ಯಾಂಕ್ ಸಿಬ್ಬಂದಿಯ ಕಳ್ಳಾಟ ಬೆಳಕಿಗೆ ಬಂದಿದೆ.

ಹಣ ಹಾಕದೆಯೇ ಎಟಿಎಂ ಕಳ್ಳತನವೆಂದು ದೂರು: ಬೆಡ್ ಶೀಟ್ ಹಾಕ್ಕೊಂಡು ಬಂದಿದ್ದ ಬ್ಯಾಂಕ್ ಸಿಬ್ಬಂದಿಯ ಕಳ್ಳಾಟ ಬಯಲು
ಎಟಿಎಂ ಕಳ್ಳತನ
Follow us
ರಾಚಪ್ಪಾಜಿ ನಾಯ್ಕ್
| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 16, 2024 | 10:09 PM

ಬೆಂಗಳೂರು, ಜು.16: ಬೆಡ್ ಶೀಟ್ ಹಾಕಿಕೊಂಡು ಬಂದು ಬೆಂಗಳೂರಿನ ಬೆಳ್ಳಂದೂರು(Bellandur) ಎಟಿಎಂ ಕಳ್ಳತನ ಮಾಡಿದ್ದ ಕೇಸ್​ಗೆ ಮೇಜರ್ ಟ್ವಿಸ್ಟ್‌ ಸಿಕ್ಕಿದೆ. ಹೌದು, ಪೊಲೀಸರ ತ‌ನಿಖೆಯಲ್ಲಿ 16.5 ಲಕ್ಷ ರೂ. ಹಣ ಕಳ್ಳತನ ಆಗಿದೆ ಎಂದು ದೂರು ಕೊಟ್ಟ ಬ್ಯಾಂಕ್ ಸಿಬ್ಬಂದಿಯ ಕಳ್ಳಾಟ ಬೆಳಕಿಗೆ ಬಂದಿದೆ. ‘ಹಣ ಹಾಕದೆಯೇ ಎಟಿಎಂನಲ್ಲಿ ಕಳ್ಳತನ ಆಗಿದೆ ಎಂದು ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ್ದ. ತನಿಖೆ ಕೈಗೊಂಡ ಪೊಲಿಸರು, ಸಿಸಿ ಕ್ಯಾಮರಾಗಳ ಪರಿಶೀಲನೆ ನಡೆಸಿದ ವೇಳೆ ಏಜೆನ್ಸಿಯವರು ಸಿಕ್ಕಿಬಿದ್ದಿದ್ದಾರೆ.

ಐವರನ್ನು ಬಂಧಿಸಿದ ಬೆಳ್ಳಂದೂರು ಪೊಲೀಸರು

ಇದುವರೆಗೂ ಐವರನ್ನು ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ. ಫೀಲ್ಡ್ ಆಪರೇಷನ್ ಮ್ಯಾನೇಜರ್ ಪ್ರತಾಪ್,  ಎಟಿಎಂ ಆಫಿಸರ್ ಪವನ್ ಕಲ್ಯಾಣ್(28), ಸೆಕ್ಯೂರ್ ವ್ಯಾಲ್ಯೂ ಕಂಪನಿ ಬೆಂಗಳೂರು ನಗರ ಎಟಿಎಂ ಇನ್ ಚಾರ್ಜ್ ಧರ್ಮೇಂದ್ರ(52), ಸೆಕ್ಯೂರ್ ವ್ಯಾಲ್ಯೂ ಕಂಪನಿ ಮಡಿವಾಳ ಏರಿಯಾ ಬ್ರಾಂಚ್ ಹೆಡ್ ರಾಘವೇಂದ್ರ ( 36) , ಸೆಕ್ಯೂರ್ ವ್ಯಾಲ್ಯೂ ಕಂಪನಿ ಅಸ್ಸಿಸ್ಟೆಂಟ್ ಮ್ಯಾನೇಜರ್ ಮಹೇಶ್(30) ಎಂಬುವವರು ಬಂಧಿತ ಆರೋಪಿಗಳು.

ಇದನ್ನೂ ಓದಿ:ಕಳ್ಳತನವಾಗಿದ್ದ ಮುರುಘಾಶ್ರೀ ಪುತ್ಥಳಿ ಪತ್ತೆ: ನಾಲ್ವರು ಶಂಕಿತ ಆರೋಪಿಗಳ ಪಾಲಿಗ್ರಫಿ ಪರೀಕ್ಷೆಗೆ ಪೊಲೀಸರ ಸಿದ್ದತೆ

ಬೆಡ್ ಶೀಟ್ ಹಾಕ್ಕೊಂಡು ಬಂದ ಗ್ಯಾಂಗ್​ನಿಂದ ಕಳ್ಳತನ

ಜುಲೈ 7 ರಂದು ಬೆಳ್ಳಂದೂರು ಆಕ್ಸಿಸ್ ಬ್ಯಾಂಕ್ ಎಟಿಎಂಗೆ ಬೆಡ್ ಶೀಟ್ ಹಾಕ್ಕೊಂಡು ಬಂದಿದ್ದ ಕಳ್ಳರ ಗ್ಯಾಂಗ್, ಎಟಿಎಂ ಕಟ್ ಮಾಡಿ ಕಳ್ಳತನ ಮಾಡಿದ್ದರು. ಆದ್ರೆ, ಆ ಗ್ಯಾಂಗ್​ಗೆ ಕೇವಲ 5 ಸಾವಿರ ಹಣ ಮಾತ್ರ ಸಿಕ್ಕಿದೆ. ಆದ್ರೆ, ಮರುದಿನ ಬ್ಯಾಂಕ್ ಸಿಬ್ಬಂದಿ 16.5 ಲಕ್ಷ ಕಳ್ಳತನ ಆಗಿದೆ ಎಂದು ದೂರು ನೀಡಿದ್ದರು. ಬ್ಯಾಂಕ್ ಸಿಬ್ಬಂದಿ ದೂರಿನ ಬಳಿಕ ಸಿಸಿ ಕ್ಯಾಮೆರಾ ಪರಿಶೀಲನೆಗೆ ಮುಂದಾಗಿದ್ದ ಪೊಲೀಸರಿಗೆ, ಕಳ್ಳತನ ಆದ ಹಿಂದಿನ ದಿನದ ವೀಡಿಯೋಯಿಂದ ಕ್ಲೂ ಸಿಕ್ಕಿತ್ತು. ಹಣ ಹಾಕಲು ಬಂದಿದ್ದ ಏಜೆನ್ಸಿಯವರು ಹಣವೇ ಹಾಕಿರಲಿಲ್ಲ. ಕೆಲ ಟೆಕ್ನಿಕಲ್ ಎರರ್ ಕಾರಣಕ್ಕೆ ರಿಸಿಪ್ಟ್ ಮಾತ್ರ ಬಂದಿದ್ದು, ಹಣ ಹಾಕಿರಲಿಲ್ಲ. ಮರುದಿನವೇ ಕಳ್ಳತನ ಆಗಿದ್ದು, ಹಣ ಹಾಕಿದ್ದೀವಿ, ಅದೇ ಹಣ ಕಳ್ಳತನ ಆಗಿದೆ ಎಂದು ಏಜೆನ್ಸಿಯವರು ಹೇಳಿದ್ದಾರೆ. ಇತ್ತ ಏಜೆನ್ಸಿಯವರ ಮಾತಿನಂತೆ ಆಕ್ಸಿಸ್ ಬ್ಯಾಂಕ್ ಸಿಬ್ಬಂದಿ ದೂರು ನೀಡಿದ್ದರು.

ಪಾಲಿಗೆ ಬಂದ ಹಣದಲ್ಲಿ ಸಾಲ ತೀರಿಸಿಕೊಂಡಿದ್ದ ಆರೋಪಿಗಳು

ಇನ್ನು ಕದ್ದ ಹಣವನ್ನು ಐದು ಜನರು ಸಮನಾಗಿ ಹಂಚಿಕೊಂಡಿದ್ದಾರೆ. ಇತ್ತ ಸಿಸಿ ಕ್ಯಾಮರಾ ಪರಿಶೀಲನೆ ವೇಳೆ ಹಣ ವಾಪಸ್ ತಗೋತಿರೋದು ಗೊತ್ತಾಗಿದೆ. ಬಿಳಿಕ ಪೊಲೀಸರ ತನಿಖೆ ವೇಳೆ ಹಣ ಹಾಕಿದ್ದೇವೆ ಎಂದು ವಾದ ಮಾಡಿದ್ದ ಏಜೆನ್ಸಿಯ ಐವರು ಬಾಯಿಬಿಟ್ಟಿದ್ದಾರೆ. ಪಾಲಿಗೆ ಬಂದ ಹಣದಲ್ಲಿ ಆರೋಪಿಗಳು, ಕ್ರೆಡಿಟ್ ಕಾರ್ಡ್ ಸಾಲ, ಬ್ಯಾಂಕ್ ಸಾಲಗಳನ್ನು ತೀರಿಸಿಕೊಂಡಿದ್ದರು. ಇದೀಗ ಐವರು ಅಂದರ್​ ಆಗಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ