ಹಿಂದೆ ನೀವು ಹೇಳಿದ್ದನ್ನೇ ಈಗ ನಾನು ಹೇಳಿದ್ದೇನೆ ಎಂದು ಜ್ಞಾನೇಂದ್ರಗೆ ಹೇಳಿದ ಶಿವಕುಮಾರ್!

ಹಿಂದೆ ನೀವು ಹೇಳಿದ್ದನ್ನೇ ಈಗ ನಾನು ಹೇಳಿದ್ದೇನೆ ಎಂದು ಜ್ಞಾನೇಂದ್ರಗೆ ಹೇಳಿದ ಶಿವಕುಮಾರ್!

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 16, 2024 | 8:19 PM

ಶಿವಕುಮಾರ್ ಹೇಳಿದ್ದಕ್ಕೆ ಜ್ಞಾನೇಂದ್ರ ಉತ್ರ ಕೊಡುತ್ತಾರೆ ಅದು ಬೇರೆ ವಿಚಾರ. ಅದರೆ ಸದನದಲ್ಲಿ ಅಗುತ್ತಿರುವ ಚರ್ಚೆಗಳ ಗುಣಮಟ್ಟ ಕಳವಳಕಾರಿಯಾಗಿದೆ. ನೀವು ಹೇಳಿದ್ದಕ್ಕೆ ನಾನು ಹೇಳಿದ್ದು, ನೀವು ಮಾಡಿದ್ದಕ್ಕೆ ನಾನು ಮಾಡಿದ್ದು ಅಂತೆಲ್ಲ ಚರ್ಚೆ ನಡೆಯುವುದಾದರೆ ಚರ್ಚೆಯ ಅಗತ್ಯವಿಲ್ಲ ಎನಿಸುತ್ತದೆ. ಜನ ಕೂಡ ಅರ್ಥ ಮಾಡಿಕೊಂಡು ಬಿಡುತ್ತಾರೆ. ಓಹೋ, ಹಿಂದೆ ಅವರು ಮಾಡಿದ್ದನ್ನೇ ಇವರು ಈಗ ಮಾಡುತ್ತಿದ್ದಾರೆ!

ಬೆಂಗಳೂರು: ಸದನದಲ್ಲಿ ಇಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಡುವೆ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಎಸ್ಐಟಿ ತನಿಖೆಗೆ ಸಂಬಂಧಿಸಿದಂತೆ ವಾಗ್ವಾದ ನಡೆಯಿತು. ಎಸ್ಐಟಿ ತನಿಖೆ ನಡೆಯುತ್ತಿರುವಾಗಲೇ ಆರೋಪಿಗಳು ನಿರ್ದೋಷಿಗಳು ಅಂತ ಹೇಳಿದರೆ ಅದು ತನಿಖಾಧಿಕಾರಿಗಳ ಮೇಲೆ ಪರಿಣಾಮ ಬೀರುತ್ತದೆ ಮತ್ತು ತನಿಖೆಯ ದಿಕ್ಕು ತಪ್ಪುತ್ತದೆ ಎಂದು ಹೇಳಿ ಜ್ಞಾನೇಂದ್ರ ಮಾತು ಮುಂದುವರಿಸುತ್ತಿದ್ದಾಗ ಎದ್ದು ನಿಂತು ಅವರ ಮಾತನ್ನು ತುಂಡರಿಸುವ ಶಿವಕುಮಾರ್, ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಇಬ್ಬರು ಸಚಿವರ ಮೇಲೆ ಆರೋಪಗಳು ಬಂದಿದ್ದವು, ಆಗ ವಿರೋಧ ಪಕ್ಷದಲ್ಲಿದ್ದ ನಾವು ವಿಧಾನಸೌಧದಲ್ಲೇ ಮಲಗಿ ಪ್ರತಿಭಟನೆ ನಡೆಸಿದ್ದೆವು, ಆಗ ತನಿಖೆ ಇನ್ನೂ ಪ್ರಾರಂಭ ಕೂಡ ಆಗಿರಲಿಲ್ಲ, ಅದರೆ ಗೃಹ ಸಚಿವರಾಗಿದ್ದ ನೀವು ಅರೋಪಿತ ಸಚಿವರು ನಿರ್ದೋಷಿಗಳಾಗಿ ಹೊರ ಬರುತ್ತಾರೆ ಅಂತ ಹೇಳಿದ್ರಿ. ನಿಮ್ಮ ಹಾಗೆಯೇ ನಾನು ಕೂಡ ನಮ್ಮ ಮಂತ್ರಿ, ಶಾಸಕ ನಿರ್ದೋಷಿಗಳಾಗಿ ಹೊರ ಬರುತ್ತಾರೆ ಅಂತ ಹೇಳುತ್ತಿದ್ದೇನೆ ಅನ್ನುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಬೆಂಗಳೂರು ನಿರ್ವಹಣೆಗೆ ಇಲಾಖೆಗಳ ನಡುವೆ ಸಮನ್ವಯತೆ ಕುರಿತು ಜು.27 ಕ್ಕೆ ಜನಪ್ರತಿನಿಧಿಗಳ ಸಭೆ: ಡಿಕೆ ಶಿವಕುಮಾರ್