ಗಾಯಾಳು ನೆರವಿಗೆ ಧಾವಿಸದ ಪೊಲೀಸ್ರು, ಮೂಕ ಪ್ರೇಕ್ಷಕರಂತೆ ನೋಡಿಕೊಂಡು ನಿಂತ್ರು
ಬೆಂಗಳೂರಿನ ಯಶವಂತಪುರದ ತ್ರಿವೇಣಿ ರಸ್ತೆಯಲ್ಲಿ ತಡರಾತ್ರಿ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಗಾಯಳು ರಸ್ತೆ ಮೇಲೆ ಬಿದ್ದು ಗೋಳಾಡಿದ್ದಾನೆ. ಆದ್ರೆ, ಪೊಲೀಸರು ಮಾತ್ರ ಮೂಕ ಪ್ರೇಕ್ಷಕರಂತೆ ನೋಡಿಕೊಂಡು ನಿಂತಿದ್ದಾರೆ. ಆಸ್ಪತ್ರೆಗೆ ಸಾಗಿಸದೇ ಮಾನವೀಯತೆ ಮರೆತಿದ್ದಾರೆ.
ಬೆಂಗಳೂರು, (ಜುಲೈ 16): ಅಪಘಾತವಾಗಿ ರಸ್ತೆ ಮೇಲೆ ಬಿದ್ದಿದ್ದ ಗಾಯಾಳು ನೆರವಿಗೆ ಪೊಲೀಸರು ಧಾವಿಸದೇ ಮಾನವೀಯತೆ ಮರೆತಿದ್ದಾರೆ. ಬೆಂಗಳೂರಿನ ಯಶವಂತಪುರದ ತ್ರಿವೇಣಿ ರಸ್ತೆಯಲ್ಲಿ ತಡರಾತ್ರಿ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಗಾಯಗೊಂಡು ರಸ್ತೆ ಮೇಲೆ ಗೋಳಾಡುತ್ತಿದ್ದ. ಅಲ್ಲದೇ ಗಾಯಾಳು ಕಿವಿಯಲ್ಲಿ ರಕ್ತಸ್ರಾವವಾಗುತ್ತಿದ್ದರು. ಪೊಲೀಸರು ಮಾತ್ರ ಅದನ್ನು ನೋಡುತ್ತಾ ನಿಂತುಕೊಂಡಿದ್ದಾರೆ. ಹೊಯ್ಸಳ ವಾಹನ ಇದ್ದರೂ ಸಹ ಆಸ್ಪತ್ರೆಗೆ ಸೇರಿಸಲು ಮುಂದಾಗಿಲ್ಲ. ಸ್ಥಳದಲ್ಲಿ ಜನರು ನಿಮ್ಮ ವಾಹನದಲ್ಲಿ ಕರೆದುಕೊಂಡು ಹೋಗಿ ಅಂದರೂ ಸಹ ಪೊಲೀಸರು ಮಾತ್ರ ಆಗಲ್ಲ ಎಂದು ಸುಮ್ನೆ ಮೂಕ ಪ್ರೇಕ್ಷಕರಂತೆ ನೋಡುತ್ತಾ ನಿಂತಿದ್ದಾರೆ. ಹೊಯ್ಸಳ ವಾಹನದಲ್ಲಿ ಗಾಯಾಳುನ್ನ ಆಸ್ಪತ್ರೆಗೆ ಸೇರಿಸಲು ಯುವಕನ ಮನವಿ ಮಾಡಿದ್ದಾನೆ. ಎಷ್ಟೇ ಕೇಳಿಕೊಂಡ್ರು ಆಸ್ಪತ್ರೆಗೆ ಸೇರಿಸಲು ಪೋಲಿಸರು ಮುಂದಾಗಿಲ್ಲ.
ಇದೇ ರಸ್ತೆಯಲ್ಲಿ ಹೋಗುತ್ತಿದ್ದ ಇತರೆ ವಾಹನಗಳ ಸವಾರರು ತಮ್ಮ ಗಾಡಿಗಳನ್ನು ನಿಲ್ಲಿಸಿ ಸಾರ್ ದಯವಿಟ್ಟು ನಿಮ್ಮ ಕಾರಿನಲ್ಲಿ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ ಎಂದು ಎಷ್ಟೇ ಮನವಿ ಮಾಡಿದರೂ ಅವರ ಮನಸ್ಸು ಒಂದಷ್ಟು ಮರುಕ ಪಡಲಿಲ್ಲ. ಪೊಲೀಸರಿಗೆ ಮನವಿ ಮಾಡಿದವರಿಗೆ ರೀ.. ಹೊಯ್ಸಳ ಕಾರು ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲು ಇರುವುದಲ್ಲ. ಯಾವುದಾದರೂ ಆಟೋ ಬಂದರೆ ಕಳಿಸಿಕೊಡ್ತೇವೆ ನೀವೇ ಆಸ್ಪತ್ರೆಗೆ ಸೇರಿಸಿ ಎಂದು ಹೇಳಿದರು. ಇದಕ್ಕೆ ನೀವು ಬಳಸುವ ಕಾರು ಸಾರ್ವಜನಿಕರ ಸೇವೆಗೆ ಇರುವುದಲ್ಲವೇ ಅದರಲ್ಲಿ ಕೂಡಲೇ ಆಸ್ಪತ್ರೆಗೆ ರವಾನಿಸೋಣ, ಆತನ ಕಿವಿಯಲ್ಲಿ ರಕ್ತ ಸೋರುತ್ತಿದ್ದು, ಹೀಗೆಯೇ ಬಿಟ್ಟರೆ ಪ್ರಾಣವೇ ಹೋಗಬಹುದು. ಆತನ ಪ್ರಾಣ ಹೋದರೆ ಅವರ ಕುಟುಂಬವನ್ನು ನೀವು ನೋಡಿಕೊಳ್ಳುತ್ತೀರಾ? ಎಂದು ಪ್ರಶ್ನೆ ಮಾಡಿದ್ದಾರೆ. ಇಷ್ಟಾದರೂ ಪೊಲೀಸರು ಮಾತ್ರ ಕ್ಯಾರೇ ಎನ್ನಲ್ಲಿಲ್ಲ. ಕೊನೆಗೆ ಯುವಕನೋರ್ವ ತನ್ನದೇ ಕಾರಿನಲ್ಲಿ ಗಾಯಾಳನ್ನು ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮರೆದಿದ್ದಾನೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ.