AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸದನದಲ್ಲಿ ಮುಕ್ತವಾಗಿ ಸಿದ್ದರಾಮಯ್ಯರ ಗುಣಗಾನ ಮಾಡುತ್ತಾ ಕಾಲೆಳೆದ ಬಸನಗೌಡ ಯತ್ನಾಳ್

ಸದನದಲ್ಲಿ ಮುಕ್ತವಾಗಿ ಸಿದ್ದರಾಮಯ್ಯರ ಗುಣಗಾನ ಮಾಡುತ್ತಾ ಕಾಲೆಳೆದ ಬಸನಗೌಡ ಯತ್ನಾಳ್

ಅರುಣ್​ ಕುಮಾರ್​ ಬೆಳ್ಳಿ
|

Updated on:Jul 17, 2024 | 12:28 PM

Share

ಜೆ ಹೆಚ್ ಪಟೇಲ್ ಮುಖ್ಯಮಂತ್ರಿಯಾಗಿದ್ದಾಗ ಮಲ್ಲಿಕಾರ್ಜುನ ಖರ್ಗೆ, ನಿಮ್ಮ ಸಂಪುಟದಲ್ಲಿ ಮತ್ತು ಕಚೇರಿಯಲ್ಲಿ ಕೇವಲ ಲಿಂಗಾಯತರಿದ್ದಾರೆ ಅಂತ ಅರೋಪಿಸಿದ್ದರಂತೆ. ಅದಕ್ಕೆ ಅವರು ತಮ್ಮ ಅಧಿಕಾರಿಗಳು ಮತ್ತು ಸಂಪುಟದಲ್ಲಿದ್ದ ಸಚಿವರ ಜಾತಿಗಳನ್ನು ಪಟ್ಟಿ ಮಾಡಿ ಕೊಟ್ಟು, ಲಿಂಗಾಯತರನ್ನು ಕರ್ನಾಟಕದಲ್ಲಿ ಮಂತ್ರಿ ಮಾಡದೆ ಉತ್ತರ ಪ್ರದೇಶದಲ್ಲಿ ಮಾಡಲಾಗುತ್ತದೆಯೇ ಎಂದಿದ್ದರಂತೆ!

ಬೆಂಗಳೂರು: ನಿನ್ನೆ ಸದನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ನಡುವೆ ಮಾತಿನ ಕಮಕಿ ನಡೆದಿತ್ತು. ಅದರೆ ಇವತ್ತು ಸನ್ನಿವೇಶ ಉಲ್ಟಾ ಆಗಿತ್ತು ಮತ್ತು ಯತ್ನಾಳ್ ಅವರು ಸಿದ್ದರಾಮಯ್ಯರ ಕೊಂಡಾಡುತ್ತಲೇ ಅವರ ಈ ಅವಧಿಯ ಕಾರ್ಯವೈಖರಿಯನ್ನು ಟೀಕಿಸಿದರು. ಸಿದ್ದರಾಮಯ್ಯರ ಎರಡನೇ ಅವಧಿಯಲ್ಲಿ ಹಲವಾರು ಆರೋಪ ಕೇಳಿ ಬರುತ್ತಿವೆ, ಅದರೆ ಅವರ ಮೊದಲ ಅವಧಿಯಲ್ಲಿ ಯಾವುದೇ ಅರೋಪಗಳಿರಲಿಲ್ಲ, ಬಹಳ ಸ್ವಚ್ಛ ಆಡಳಿತ ನೀಡಿದ್ದರು, ಎಲ್ಲರಿಗೂ ಸ್ವಜನ ಪ್ರೀತಿ ಇದ್ದೇ ಇರುತ್ತದೆ ಎಂದು ಹೇಳಿದ ಅವರು ಹಿಂದೆ ಮುಖ್ಯಮಂತ್ರಿಯಾಗಿದ್ದ ಜೆಹೆಚ್ ಪಟೇಲ್ ಅವರ ಕಾರ್ಯವೈಖರಿ ಮತ್ತ್ತು ಆಡಿದ ಮಾತುಗಳನ್ನು ಸದನದ ಗಮನಕ್ಕೆ ತಂದರು. ಸಿದ್ದರಾಮಯ್ಯ ನಾಡಿನ ಹಿರಿಯ ರಾಜಕಾರಣಿ ಮತ್ತು ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ 136ಸೀಟು ಸಿಗುವಲ್ಲಿ ಅವರ ದೊಡ್ಡ ಪಾತ್ರವಿದೆ. ಬಿಜೆಪಿ ಆಧಿಕಾರದಲ್ಲಿದ್ದಾಗ ಮಾಡಿದ ತಪ್ಪುಗಳಿಗೆ ಶಿಕ್ಷೆಅನುಭವಿಸುತ್ತಿದೆ ಎಂದು ಯತ್ನಾಳ್ ಹೇಳಿದರು. ಸಿದ್ದರಾಮಯ್ಯ ತಮ್ಮ ಮಂತ್ರಿಗಳು ತಪ್ಪು ಮಾಡಿದಾಗ ಅವರಿಗೆ ತಕ್ಕ ಶಿಕ್ಷೆ ವಿಧಿಸಲಿ, ಅದನ್ನು ಬಿಟ್ಟು ನಾನು ಹೇಳಿದ್ದನ್ನು ಉಲ್ಲೇಖಿಸಿ ಟೀಕಿಸುವುದು ಅವರ ಹಿರಿತನಕ್ಕೆ ಸರಿಯೆನಿಸದು ಎಂದು ಯತ್ನಾಳ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    ಆಂಜನೇಯ ಅವಿವೇಕಿ, ಸಿದ್ದರಾಮಯ್ಯನವರನ್ನೇ ಪೂಜಿಸಲಿ: ಬಸನಗೌಡ ಪಾಟೀಲ್ ಯತ್ನಾಳ್ ಕಿಡಿ

Published on: Jul 16, 2024 09:10 PM