ಏರ್ಪೋಟ್ ರಸ್ತೆಯಲ್ಲಿ ಬಲಿಗಾಗಿ ಕಾಯುತ್ತಿದೆ ಟೋಲ್ ಬೂತ್: ಯಾವುದೇ ಕ್ಷಣದಲ್ಲಾದರೂ ಕುಸಿಯುವ ಭೀತಿ

Edited By:

Updated on: Jan 15, 2026 | 12:34 PM

ದೇವನಹಳ್ಳಿ ಬಳಿ NH 44 ರ ಬೆಂಗಳೂರು-ಹೈದರಾಬಾದ್ ಹೆದ್ದಾರಿಯಲ್ಲಿರುವ ಶಿಥಿಲಗೊಂಡ ಟೋಲ್ ಬೂತ್ ಅತ್ಯಂತ ಅಪಾಯಕಾರಿಯಾಗಿದೆ. ಹಿಂದಿನ ಅಪಘಾತ ಮತ್ತು ದೂರುಗಳ ಹೊರತಾಗಿಯೂ, ಅಧಿಕಾರಿಗಳು ಇದನ್ನು ತೆರವುಗೊಳಿಸಲು ನಿರ್ಲಕ್ಷಿಸಿದ್ದಾರೆ. ಗೋಡೆಗಳು ಬಿರುಕು ಬಿಟ್ಟಿದ್ದು, ಯಾವುದೇ ಕ್ಷಣದಲ್ಲಿ ಕುಸಿಯುವ ಭೀತಿಯಿದೆ. ಮೂರು ವರ್ಷಗಳ ಹಿಂದೆ ಟೋಲ್ ಸಂಗ್ರಹ ನಿಲ್ಲಿಸಿದ್ದರೂ, ಈ ಜೀವಕ್ಕೆ ಅಪಾಯ ತರುವ ರಚನೆ ಸವಾರರಿಗೆ ದೊಡ್ಡ ಆತಂಕ ಮೂಡಿಸಿದೆ. ಕೂಡಲೇ ತೆರವುಗೊಳಿಸಬೇಕಿದೆ.

ಬೆಂಗಳೂರು , ಜ.15: ಬೆಂಗಳೂರು–ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ 44 ರಲ್ಲಿನ ದೇವನಹಳ್ಳಿ ಹೊರವಲಯದ ಟೋಲ್ ಪ್ಲಾಜಾ ಬಳಿ ಈ ಹಿಂದೆ ಟ್ರಾನ್ಸ್ ಇಂಡಿಯಾ ಸಂಸ್ಥೆಯ ಸ್ಲೀಪರ್ ಕೋಚ್ ಬಸ್ ಅತಿವೇಗದಿಂದ ಬೂತ್‌ಗೆ ಡಿಕ್ಕಿ ಹೊಡೆದ ಘಟನೆಯೊಂದು ನಡೆದಿತ್ತು. ಈ ಅಪಘಾತದ ನಂತರವೂ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ. ಇದೀಗ ಏರ್ಪೋಟ್ ರಸ್ತೆಯಲ್ಲಿರುವ ಈ ಟೋಲ್ ಬೂತ್ ಮತ್ತೊಂದು ಅವಘಡಕ್ಕೆ ಸಿದ್ಧತೆ ಮಾಡಿಕೊಂಡಿರುವಂತೆ ಕಾಣುತ್ತಿದೆ. ಈ ಟೋಲ್ ಪ್ಲಾಜಾ ಬೂತ್ ಯಾವುದೆ ಸಮಯದಲ್ಲ ಕುಸಿದು ಬೀಳುವ ಸಾಧ್ಯತೆ ಇದೆ. ಸ್ವಲ್ಪ ಯಾಮಾರಿದರು ವಾಹನ ಸವಾರರ ಸ್ಥಿತಿ ಅದೋಗತಿ ಆಗುವುದು ಖಂಡಿತ. ಬೂತ್ ಗೋಡೆಗಳು ಸಂಪೂರ್ಣವಾಗಿ ಬಿರುಕು ಬಿಟ್ಟಿದೆ. ಹಲವು ಭಾರಿ ಟೋಲ್ ಬೂತ್ ತೆರವಿಗೆ ದೂರು ನೀಡಿದರು ಯಾರು ಕ್ರಮ ಕೈಗೊಂಡಿಲ್ಲ. ಮೂರು ವರ್ಷಗಳಿಂದ ಟೋಲ್ ವಸೂಲಿಯನ್ನು ನಿಲ್ಲಿಸಿರುವ ಈ ಟೂಲ್​​ನ್ನು ತೆರೆವು ಮಾಡದೆ ಅಲ್ಲಿಯೇ ಬಿಟ್ಟಿದ್ದಾರೆ. ಪ್ರತಿದಿನ ಹೈದರಾಬಾದ್ ಚಿಕ್ಕಬಳ್ಳಾಪುರ ಕಡೆಯಿಂದ ಸಾವಿರಾರು ವಾಹನಗಳು ವೇಗವಾಗಿ ಬರುವ ಕಾರಣ ಈ ಟೋಲ್​​ ಇರುವುದು ತಿಳಿಯುವುದಿಲ್ಲ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ