ಯಾರು ಧರ್ಮ ಹಿಡಿದು ನಡೆಕೋತೀರಿ ಅವರನ್ನು ಅಂಗೈಯಲ್ಲಿ ಹಿಡಿದು ಲಿಂಗದಲ್ಲಿ ಸಂರಕ್ಷಣೆ ಮಾಡುತ್ತೇನೆ: ಮಲ್ಲಯ್ಯರ ಕಾರ್ಣಿಕ

Edited By:

Updated on: Oct 05, 2025 | 6:46 PM

ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಪಟ್ಟಣದ ಆರಾಧ್ಯ ದೈವ ರಾವುತರಾಯ ಮಲ್ಲಯ್ಯರ ಜಾತ್ರಾ ಮಹೋತ್ಸವ ಸಡಗರ ಸಂಭ್ರಮದಿಂದ ನಡೆಯಿತು. ನಿನ್ನೆಯಿಂದ ಸತತ ಐದು ದಿನಗಳ ಕಾಲ ನಡೆಯೋ ಜಾತ್ರೆಗೆ ಸುತ್ತಮುತ್ತಲ ಜಿಲ್ಲೆಗಳ ಹಾಗೂ ನೆರೆ ರಾಜ್ಯಗಳ ಜಾತ್ರಾ ಭಕ್ತರು ಆಗಮಿಸಿ ದರ್ಶನ ಮಾಡುತ್ತಾರೆ. ಜಾತ್ರೆಯ ಅಂಗವಾಗಿ ರಾವುತರಾಯ ಮಲ್ಲಯ್ಯನ ಮೂರ್ತಿಯನ್ನು ಬಂಡಿಯಲ್ಲಿಟ್ಟು ಮೆರವಣಿಗೆ ಮಾಡಲಾಯಿತು. ಭಕ್ತರ ಸಾಗರ ಅಪಾರ ಪ್ರಮಾಣದ ಭಂಡಾರವನ್ನು ಎರಚೋ ಮೂಲಕ ಭಕ್ತಿ ಪರಾಕಾಷ್ಠೆ ಮೆರದರು. ಇನ್ನು ಜಾತ್ರೆಯಲ್ಲಿ ದೇವಸ್ಥಾನದ ಪೂಜಾರಿ ನುಡಿಯೋ ಕಾರ್ಣಿಕ ಭವಿಷ್ಯ ಎಂದೂ ಸುಳ್ಳಾಗಿಲ್ಲಾ ಎಂಬ ನಂಬಿಕೆ ಭಕ್ತರಲ್ಲಿದೆ. ನಿನ್ನೆ ಬಂಡಿ ಮೆರವಣಿಗೆ ಬಳಿಕ ಕಾರ್ಣಿಕ ಭವಿಷ್ಯ ನುಡಿಯಲಾಯಿತು.

ವಿಜಯಪುರ, (ಅಕ್ಟೋಬರ್ 05): ಜಿಲ್ಲೆಯ ದೇವರಹಿಪ್ಪರಗಿ ಪಟ್ಟಣದ ಆರಾಧ್ಯ ದೈವ ರಾವುತರಾಯ ಮಲ್ಲಯ್ಯರ ಜಾತ್ರಾ ಮಹೋತ್ಸವ ಸಡಗರ ಸಂಭ್ರಮದಿಂದ ನಡೆಯಿತು. ನಿನ್ನೆಯಿಂದ ಸತತ ಐದು ದಿನಗಳ ಕಾಲ ನಡೆಯೋ ಜಾತ್ರೆಗೆ ಸುತ್ತಮುತ್ತಲ ಜಿಲ್ಲೆಗಳ ಹಾಗೂ ನೆರೆ ರಾಜ್ಯಗಳ ಜಾತ್ರಾ ಭಕ್ತರು ಆಗಮಿಸಿ ದರ್ಶನ ಮಾಡುತ್ತಾರೆ. ಜಾತ್ರೆಯ ಅಂಗವಾಗಿ ರಾವುತರಾಯ ಮಲ್ಲಯ್ಯನ ಮೂರ್ತಿಯನ್ನು ಬಂಡಿಯಲ್ಲಿಟ್ಟು ಮೆರವಣಿಗೆ ಮಾಡಲಾಯಿತು. ಭಕ್ತರ ಸಾಗರ ಅಪಾರ ಪ್ರಮಾಣದ ಭಂಡಾರವನ್ನು ಎರಚೋ ಮೂಲಕ ಭಕ್ತಿ ಪರಾಕಾಷ್ಠೆ ಮೆರದರು. ಇನ್ನು ಜಾತ್ರೆಯಲ್ಲಿ ದೇವಸ್ಥಾನದ ಪೂಜಾರಿ ನುಡಿಯೋ ಕಾರ್ಣಿಕ ಭವಿಷ್ಯ ಎಂದೂ ಸುಳ್ಳಾಗಿಲ್ಲಾ ಎಂಬ ನಂಬಿಕೆ ಭಕ್ತರಲ್ಲಿದೆ. ನಿನ್ನೆ ಬಂಡಿ ಮೆರವಣಿಗೆ ಬಳಿಕ ಕಾರ್ಣಿಕ ಭವಿಷ್ಯ ನುಡಿಯಲಾಯಿತು. ಗೋದಿ ಕಡಲಿ, ಅಗಸಿ, ಜೋಳದ ಬೆನ್ನು ಹತ್ತಿತು. ಯಾರು ಧರ್ಮ ಹಿಡಿದು ನಡೆಕೋತೀರಿ ಅವರನ್ನು ಅಂಗೈಯಲ್ಲಿ ಹಿಡಿದು ಲಿಂಗದಲ್ಲಿ ಸಂರಕ್ಷಣೆ ಮಾಡುತ್ತೇನೆ. ಹಸ್ತ ಮಳೆ, ಸ್ವಾತಿ ಮಳೆ, ಚಿತ್ತಿ ಮಳೆ ಒಂದೊಂದು ಸರುವ್ ಕೊಡತೇನಿ ಎಂದು ಹೇಳೇನಿ. ಬಿಳಿ ಕಾಳ ಕೆಂಪ ಕಾಳ ಸಮಾ ಮಾಡುದ್ರಾಗ ಬಿಳಿ ಕಾಳ ಮೇಲಾಯಿತು. ಬಿಳಿ ಕಾಳ ಬೆಳಕಾಯಿತು. ಧರ್ಮ ಸಣ್ಣಾಗೋ ಕಾಲ ಬಂತು. ನಮ್ಮಂತೆ ಯಾರು ನಡೀತೀರಿ ನಿಮ್ಮಂತೆ ನಾ ಇರ್ತೀನಿ. ನಾ ಅಂದ ಮಗನೀಗಿ ಎಳು ಪಾತಾಳದಾಗ ಹಾಕಿ ತುಳಿತೀನಿ. ಹತ್ತು ಮಂದಿ ಕೂಡಿ ನನ್ನ ತಳಕ್ಕೆ ಹಚ್ಚಿದ್ದ ಬಂಗಾರದ ಹೊಗೆ ಹರಿತೈತಿ ಎಂದು ಕಾರ್ಣಿಕ ನುಡಿದಿದ್ದಾರೆ. ಕಾರ್ಣಿಕದ ಅರ್ಥವನ್ನು ನೋಡಲಾಗಿ ಬಿಳಿ ಬಣ್ಣದ ಧವಸ ಧಾನ್ಯಗಳ ಫಸಲು ಉತ್ತಮವಾಗಿ ಬರುತ್ತವೆ. ಎಲ್ಲರೂ ಧರ್ಮ ಹಿಡಿದುಕೊಂಡು ಹೋಗಬೇಕಿದೆ. ಧರ್ಮದಿಂದ ಹೋಗುವವರ ರಕ್ಷಣೆಯಾಗುತ್ತದೆ ಎಂಬುದಾಗಿದೆ ಅರ್ಥೈಹಿಸಲಾಗಿದೆ.