ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದ ಕಾಮಗಾರಿಗಳ ತನಿಖೆ ಮಾಡಿಸಲಾಗುತ್ತಿದೆ, ಅದು ಪೂರ್ಣಗೊಂಡ ಬಳಿಕ ಬಿಲ್ ಗಳನ್ನು ರಿಲೀಸ್ ಮಾಡುತ್ತೇವೆ: ಸಿದ್ದರಾಮಯ್ಯ

ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದ ಕಾಮಗಾರಿಗಳ ತನಿಖೆ ಮಾಡಿಸಲಾಗುತ್ತಿದೆ, ಅದು ಪೂರ್ಣಗೊಂಡ ಬಳಿಕ ಬಿಲ್ ಗಳನ್ನು ರಿಲೀಸ್ ಮಾಡುತ್ತೇವೆ: ಸಿದ್ದರಾಮಯ್ಯ

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 11, 2023 | 2:58 PM

ತಮ್ಮ ಸರಕಾರ ಬಿಲ್ ಗಳನ್ನು ರಿಲೀಸ್ ಮಾಡಲ್ಲ ಅಂತ ಎಲ್ಲೂ ಹೇಳಿಲ್ಲ ಅದರೆ, ಕಾಮಗಾರಿಗಳಲ್ಲಿ ಹಲವಾರು ಅಕ್ರಮಗಳು ನಡೆದಿವೆ ಮತ್ತು ಅವೆಲ್ಲವನ್ನು ತನಿಖೆ ಮಾಡಲು 4 ತಂಡಗಳನ್ನು ರಚಿಸಲಾಗಿದೆ. ಅದು ಮುಗಿದ ಬಳಿಕ ಬಿಲ್ ಗಳನ್ನು ರಿಲೀಸ್ ಮಾಡಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.

ಬೆಳಗಾವಿ: ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತಾಡಿದ ಸಿಎಂ ಸಿದ್ದರಾಮಯ್ಯ (CM Siddaramaiah) ಗುತ್ತಿಗೆದಾರರ ಬಿಲ್ ಗಳ ರಿಲೀಸ್ ಗೆ ಸಂಬಂಧಿಸಿದಂತೆ ಬಿಜೆಪಿ ನಾಯಕರು ಮಾಡುತ್ತಿರುವ ಅರೋಪಗಳಿಗೆ ತಿರುಗೇಟು ನೀಡಿದರು. ಬಾಕಿಯುಳಿದಿರುವ ಗುತ್ತಿಗೆದಾರರ ಬಿಲ್ ಗಳು (bills of contractors) ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಕಾಮಗಾರಿಗಳಿಗೆ (works) ಸಂಬಂಧಿಸಿದಂಥವು. 2-3 ವರ್ಷಗಳ ಹಿಂದೆ ನಡೆದ ಕಾಮಗಾರಿಗಳಿಗೆ ಬಿಜೆಪಿ ಸರ್ಕಾರ ಯಾಕೆ ಬಿಲ್ ಗಳನ್ನು ಚುಕ್ತಾ ಮಾಡದೆ ತಡೆಹಿಡಿದಿದ್ದು ಎಂದು ಪ್ರಶ್ನಿಸಿದ ಸಿದ್ದರಾಮಯ್ಯ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಕೇವಲ ಮೂರು ತಿಂಗಳಾಗಿದೆ ಎಂದರು. ತಮ್ಮ ಸರಕಾರ ಬಿಲ್ ಗಳನ್ನು ರಿಲೀಸ್ ಮಾಡಲ್ಲ ಅಂತ ಎಲ್ಲೂ ಹೇಳಿಲ್ಲ ಅದರೆ, ಕಾಮಗಾರಿಗಳಲ್ಲಿ ಹಲವಾರು ಅಕ್ರಮಗಳು ನಡೆದಿವೆ ಮತ್ತು ಅವೆಲ್ಲವನ್ನು ತನಿಖೆ ಮಾಡಲು 4 ತಂಡಗಳನ್ನು ರಚಿಸಲಾಗಿದೆ. ಅವು ನೀಡುವ ವರದಿಗಳು ಸರ್ಕಾರದ ಕೈ ಸೇರಿದ ಬಳಿಕ ಯಾವ್ಯಾವ ಕಾಮಗಾರಿ ಕಾಮಗಾರಿ ಸಮರ್ಪಕವಾಗಿ ನಡೆದಿದೆಯೋ ಅವುಗಳ ಬಿಲ್ ಗಳನ್ನು ತಡಮಾಡದೆ ಬಿಡುಗಡೆ ಮಾಡಲಾಗುವುದ, ಅಕ್ರಮ ನಡೆದಿದ್ದು ಕಂಡುಬಂದರೆ ಕ್ರಮ ಜರುಗಿಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು. ಮುಖ್ಯಮಂತ್ರಿಗಳು ಮಾತಾಡುವಾಗ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪಕ್ಕದಲ್ಲೇ ಮುಗುಳ್ನಗುತ್ತಾ ನಿಂತಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ