‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್

|

Updated on: Dec 28, 2024 | 1:17 PM

‘ಡೆವಿಲ್’ ಸಿನಿಮಾ ಬಗ್ಗೆ ನಿರೀಕ್ಷೆ ಇದೆ. ಈ ಚಿತ್ರದ ಶೂಟಿಂಗ್​ಗೆ ಯಾವಾಗ ಮರಳುತ್ತಾರೆ ಎನ್ನುವ ಪ್ರಶ್ನೆ ಅಭಿಮಾನಿಗಳಿಗೆ ಮೂಡಿದೆ. ಈ ಪ್ರಶ್ನೆಗೆ ದಿನಕರ್ ತೂಗುದೀಪ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಅವರು ಈ ಬಗ್ಗೆ ಅಪ್​ಡೇಟ್ ಕೊಟ್ಟಿದ್ದಾರೆ. ‘ಅವರು ಗುಣಮುಖರಾದ ತಕ್ಷಣ ಸಿನಿಮಾ ಶೂಟಿಂಗ್ ಆರಂಭ ಆಗಲಿದೆ’ ಎಂದಿದ್ದಾರೆ ಅವರು.

‘ಡೆವಿಲ್’ ಸಿನಿಮಾ ಶೂಟಿಂಗ್ ಬಗ್ಗೆ ದರ್ಶನ್ ಫ್ಯಾನ್ಸ್ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆದರೆ, ದರ್ಶನ್ ಬಂಧನದ ಬಳಿಕ ಈ ಸಿನಿಮಾದ ಶೂಟಿಂಗ್ ಅರ್ಧಕ್ಕೆ ನಿಂತಿದೆ. ಸಂಕ್ರಾಂತಿ ಬಳಿಕ ಶೂಟಿಂಗ್ ಆರಂಭ ಆಗಲಿದೆ ಎನ್ನುವ ಮಾತಿತ್ತು. ಈ ಬಗ್ಗೆ ದಿನಕರ್ ಮಾತನಾಡಿದ್ದಾರೆ. ‘ಈಗ ಮೊದಲ ಆದ್ಯತೆ ಕಾಲನ್ನು ರೆಡಿ ಮಾಡೋದು. ಅವರು ಗುಣಮುಖರಾದ ತಕ್ಷಣ ಸಿನಿಮಾ ಶೂಟಿಂಗ್ ಆರಂಭ ಆಗಲಿದೆ’ ಎಂದಿದ್ದಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.