ಕಾರ್ತಿಕ ಮಾಸದ ಕೊನೆ ಸೋಮವಾರ: ನಂದಿಗಿರಿಧಾಮ ತಪ್ಪಲಿನ ಬೋಗನಂದೀಶ್ವರ ದೇವಸ್ಥಾನಕ್ಕೆ ಹರಿದು ಬಂದ ಭಕ್ತಸಾಗರ!

Edited By:

Updated on: Nov 17, 2025 | 2:53 PM

ಇಂದು ಕಾರ್ತಿಕ ಮಾಸದ ಕೊನೆ ಸೋಮವಾರ. ಈ ಹಿನ್ನಲೆ ನಂದಿಗಿರಿಧಾಮದ ತಪ್ಪಲಿನಲ್ಲಿರುವ ವಿಶ್ವವಿಖ್ಯಾತ ಬೋಗನಂದೀಶ್ವರ ದೇವಸ್ಥಾನಕ್ಕೆ ಭಕ್ತ ಸಾಗರವೇ ಹರಿದುಬಂದಿದೆ. ರಾಜಧಾನಿ ಬೆಂಗಳೂರಿನ ಜನ ಕೂಡ ಪ್ರವಾಹದಂತೆ ಹರಿದು ಬಂದಿದ್ದು, ದೇವಸ್ಥಾನದಲ್ಲಿ ದೀಪ ಹಚ್ಚಿ ವಿಶೇಷ ಪೂಜೆ ಸಲ್ಲಿಸಿ ದೇವರ ಕೃಪೆಗೆ ಪಾತ್ರರಾದರು. ವಿಡಿಯೋ ಇಲ್ಲಿದೆ.

ಚಿಕ್ಕಬಳ್ಳಾಪುರ, ನವೆಂಬರ್ 17: ವಿಶ್ವವಿಖ್ಯಾತ ಪ್ರವಾಸಿ ತಾಣ, ನಂದಿಗಿರಿಧಾಮದ ತಪ್ಪಲಿನ ಪುರಾಣ ಪ್ರಸಿದ್ದ ಶ್ರೀ ಭೋಗನಂದೀಶ್ವರ ದೇವಸ್ಥಾನಕ್ಕೆ ಇಂದು ಕಾರ್ತಿಕ ಮಾಸದ ಕೊನೆ ಸೋಮವಾರ ಹಿನ್ನಲೆ ಭಕ್ತ ಸಾಗರವೇ ಹರಿದುಬಂದಿದೆ. ರಾಜಧಾನಿ ಬೆಂಗಳೂರಿನ ಜನ ಹಾಗೂ ಈಶ್ವರನ ಭಕ್ತರು, ದೇವಸ್ಥಾನಕ್ಕೆ ಜನಸಾಗರವಾಗಿ ಹರಿದು ಬಂದಿದ್ದು ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ನಂತರ ದೇವಸ್ಥಾನ ಆವರಣದಲ್ಲಿ ಎಣ್ಣೆ ದೀಪ ಹಚ್ಚಿ, ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಿದರು.

ಕಾರ್ತಿಕ ಮಾಸದ ಕೊನೆ ಸೋಮವಾರದಂದು, ಮಾಡುವ ಪೂಜೆಗಳಲ್ಲಿ ಹೆಚ್ಚು ಫಲ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ. ಇದರಿಂದ ಮಹಿಳಾ ಭಕ್ತರ ದಂಡು ದೇವಸ್ಥಾನದಲ್ಲಿ ಬಿಡುಬಿಟ್ಟಿದ್ದು, ಅರುಣಾಚಲೇಶ್ವರ, ಗಂಗಾಧರ ಹಾಗೂ ಗಿರಿಜಾಂಬ ಸಮೇತ ಶ್ರೀ ಬೋಗನಂದೀಶ್ವರ ಸ್ವಾಮಿಯ ದರ್ಶನ ಪಡೆದರು. ದೇವಸ್ಥಾನದಲ್ಲಿ ಇಂದು ಬೆಳಿಗ್ಗೆ ನಾಲ್ಕು ಗಂಟೆಯಿಂದ ವಿಶೇಷ ಪೂಜೆಗಳು ನಡೆಯುತ್ತಿವೆ. ವಿಶೇಷವಾಗಿ ರಾಜಧಾನಿ ಬೆಂಗಳೂರಿನ ಜನ ದೇವಸ್ಥಾನಕ್ಕೆ ಆಗಮಿಸುತ್ತಿದ್ದು, ಸುಮಾರು ಒಂದು ಲಕ್ಷ ಜನ ದೇವರ ದರ್ಶನ ಪಡೆಯುವ ಸಾದ್ಯತೆ ಇದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ