ಭೀರದೇವರ ಜಾತ್ರೆಯ ಸಂಭ್ರಮ: ಭಂಡಾರದ ಒಡೆಯನಿಗೆ ಭಂಡಾರ ಅರ್ಪಿಸಿದ ಭಕ್ತರು

Updated on: Oct 23, 2025 | 9:32 PM

ಉತ್ತರ ಕರ್ನಾಟಕದಲ್ಲಿ ಜಾತ್ರೆ ಅಂದ್ರೆನೇ ಬಹಳ‌ ವಿಶೇಷವಾಗಿರುತ್ತೆ. ಅದರಲ್ಲೂ  ಬಂಡಾರ ಜಾತ್ರೆ ಎಂದೇ ಭೀರದೇವರ ಜಾತ್ರೆ ಇಡೀ ರಾಜ್ಯದಲ್ಲೇ ಅತ್ಯಂತ ವಿಶಿಷ್ಟ. ಹೌದು.. ವಿಜಯಪುರ ತಾಲೂಕಿನ ನಾಗಠಾಣ ಗ್ರಾಮದಲ್ಲಿ ದೀಪಾವಳಿ ಬಂತಂದ್ರೆ, ಬಂಡಾರದೋಕುಳಿ ಶುರುವಾಗುತ್ತೆ. ಏಕೆಂದರೆ, ಭೀರದೇವರ ಹಾಗೂ ಪರಮಾನಂದ ದೇವರ ಜಾತ್ರೆಯಲ್ಲಿ ಬಂಡಾರದ್ದೇ ಕಾರುಬಾರು. ಪಲ್ಲಕ್ಕಿಯಲ್ಲಿ ಕೂತ ಭಗವಂತ, ಊರೊಳಗೆ ಬರ್ತಿದ್ದಂತೆ ಕಣ್ಣಾಯಿಸಿದಷ್ಟು ದೂರಕ್ಕೂ ಬಂಡಾರ ಚಿಮ್ಮೋದಕ್ಕೆ ಶುರುವಾಗುತ್ತೆ. ಭಕ್ತರು ಸಹ ಈ ಭಂಡಾರದಲ್ಲಿ ಮಿಂದೆದ್ದರು.

ವಿಜಯಪುರ, (ಅಕ್ಟೋಬರ್ 23): ಉತ್ತರ ಕರ್ನಾಟಕದಲ್ಲಿ ಜಾತ್ರೆ ಅಂದ್ರೆನೇ ಬಹಳ‌ ವಿಶೇಷವಾಗಿರುತ್ತೆ. ಅದರಲ್ಲೂ  ಬಂಡಾರ ಜಾತ್ರೆ ಎಂದೇ ಭೀರದೇವರ ಜಾತ್ರೆ ಇಡೀ ರಾಜ್ಯದಲ್ಲೇ ಅತ್ಯಂತ ವಿಶಿಷ್ಟ. ಹೌದು.. ವಿಜಯಪುರ ತಾಲೂಕಿನ ನಾಗಠಾಣ ಗ್ರಾಮದಲ್ಲಿ ದೀಪಾವಳಿ ಬಂತಂದ್ರೆ, ಬಂಡಾರದೋಕುಳಿ ಶುರುವಾಗುತ್ತೆ. ಏಕೆಂದರೆ, ಭೀರದೇವರ ಹಾಗೂ ಪರಮಾನಂದ ದೇವರ ಜಾತ್ರೆಯಲ್ಲಿ ಬಂಡಾರದ್ದೇ ಕಾರುಬಾರು. ಪಲ್ಲಕ್ಕಿಯಲ್ಲಿ ಕೂತ ಭಗವಂತ, ಊರೊಳಗೆ ಬರ್ತಿದ್ದಂತೆ ಕಣ್ಣಾಯಿಸಿದಷ್ಟು ದೂರಕ್ಕೂ ಬಂಡಾರ ಚಿಮ್ಮೋದಕ್ಕೆ ಶುರುವಾಗುತ್ತೆ. ಭಕ್ತರು ಸಹ ಈ ಭಂಡಾರದಲ್ಲಿ ಮಿಂದೆದ್ದರು.