ಧನ್ಯಾ ರಾಮ್ಕುಮಾರ್ ದೊಡ್ಡ ಮಟ್ಟದಲ್ಲಿ ಹೆಸ್ರು ಮಾಡ್ತಾರೆ ಎಂದು ಭವಿಷ್ಯ ನುಡಿದ ರಘು ದೀಕ್ಷಿತ್
ಈ ಸಿನಿಮಾ ಬಗ್ಗೆ ಹಾಗೂ ಧನ್ಯಾ ಬಗ್ಗೆ ಈ ಸಿನಿಮಾದ ಮ್ಯೂಸಿಕ್ ಡೈರೆಕ್ಟರ್ ರಘು ದೀಕ್ಷಿತ್ ಮಾತನಾಡಿದ್ದಾರೆ. ಅವರು ಧನ್ಯಾ ಅವರು ಭವಿಷ್ಯದಲ್ಲಿ ದೊಡ್ಡ ಹೀರೋಯಿನ್ ಆಗುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.
ರಾಜ್ಕುಮಾರ್ ಮೊಮ್ಮಗಳು ಧನ್ಯಾ ರಾಮ್ಕುಮಾರ್ ಮತ್ತು ಸೂರಜ್ ಗೌಡ ಜೋಡಿಯಾಗಿ ನಟಿಸಿರುವ ‘ನಿನ್ನ ಸನಿಹಕೆ’ ಚಿತ್ರ ಟ್ರೇಲರ್ ಮೂಲಕವೇ ಭರವಸೆ ಮೂಡಿಸಿದೆ. ಹೊಸ ತಲೆಮಾರಿನ ಪ್ರೇಕ್ಷಕರನ್ನು ಗಮನದಲ್ಲಿ ಇಟ್ಟುಕೊಂಡು ಈ ಸಿನಿಮಾ ತಯಾರಾದಂತಿದೆ. ನಾಯಕನಾಗಿ ನಟಿಸುವುದರ ಜೊತೆ ನಿರ್ದೇಶಕನಾಗಿಯೂ ಸೂರಜ್ ಗೌಡ ಕೆಲಸ ಮಾಡಿದ್ದಾರೆ. ಲಿವ್-ಇನ್-ರಿಲೇಷನ್ಶಿಪ್ ಕುರಿತ ಕಥೆ ಈ ಚಿತ್ರದಲ್ಲಿದೆ. ಅ.8ರಂದು ರಾಜ್ಯಾದ್ಯಂತ ‘ನಿನ್ನ ಸನಿಹಕೆ’ ಬಿಡುಗಡೆ ಆಗಲಿದ್ದು, ಜನರ ಪ್ರತಿಕ್ರಿಯೆ ಪಡೆಯಲು ಚಿತ್ರತಂಡ ಕಾಯುತ್ತಿದೆ. ಅಕ್ಷಯ್ ರಾಜಶೇಖರ್, ರಂಗನಾಥ್ ಕೂಡ್ಲಿ ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ.
ಈ ಸಿನಿಮಾ ಬಗ್ಗೆ ಹಾಗೂ ಧನ್ಯಾ ಬಗ್ಗೆ ಈ ಸಿನಿಮಾದ ಮ್ಯೂಸಿಕ್ ಡೈರೆಕ್ಟರ್ ರಘು ದೀಕ್ಷಿತ್ ಮಾತನಾಡಿದ್ದಾರೆ. ಅವರು ಧನ್ಯಾ ಅವರು ಭವಿಷ್ಯದಲ್ಲಿ ದೊಡ್ಡ ಹೀರೋಯಿನ್ ಆಗುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.
ಇದನ್ನೂ ಓದಿ: ‘ನಿನ್ನ ಸನಿಹಕೆ’ ಚಿತ್ರ ನೋಡಲಿರುವ ರಜನಿಕಾಂತ್; ಧನ್ಯಾ ರಾಮ್ಕುಮಾರ್-ಸೂರಜ್ಗೆ ತಲೈವಾ ಬೆಂಬಲ
Loading...
Unable to load recommendations.
Follow Us