ಧರ್ಮಸ್ಥಳ ಪ್ರಕರಣ: ಬಂಗ್ಲೆಗುಡ್ಡದಲ್ಲಿ ಮಹಜರಿಗೆ ಅರಣ್ಯ ಇಲಾಖೆಯಿಂದ ಎಸ್ಐಟಿಗೆ ಗ್ರೀನ್​​ ಸಿಗ್ನಲ್!

Updated on: Sep 17, 2025 | 9:04 AM

ಧರ್ಮಸ್ಥಳದ ಬಂಗ್ಲೆಗುಡ್ಡೆಯಿಂದ ಬುರುಡೆ ತಂದಿರುವುದಾಗಿ ಹೇಳಿರುವ ವಿಠಲ್ ಗೌಡ, ಅಲ್ಲಿ ಹಲವು ಅಸ್ಥಿಪಂಜರಗಳಿವೆ ಎಂದಿದ್ದ. ಈ ವಿಚಾರವಾಗಿ ಇದೀಗ ಎಸ್​​ಐಟಿಗೆ ಸ್ಥಳ ಮಹಜರು ನಡೆಸಲು ಅರಣ್ಯ ಇಲಾಖೆಯಿಂದ ಅನುಮತಿ ಸಿಕ್ಕಿದೆ. ಇಂದು ಬಂಗ್ಲೆಗುಡ್ಡದಲ್ಲಿ ಸ್ಥಳ ಮಹಜರು ನಡೆಯಲಿದೆ. ವಿಠಲ್ ಗೌಡನನ್ನು ಬಂಗ್ಲೆಗುಡ್ಡೆಗೆ ಕರೆದುಕೊಂಡು ಹೋಗಿ ಈಗಾಗಲೇ ಮಹಜರು ನಡೆಸಲಾಗಿತ್ತು.

ಮಂಗಳೂರು, ಸೆಪ್ಟೆಂಬರ್ 17: ಧರ್ಮಸ್ಥಳದ ಬಂಗ್ಲೆಗುಡ್ಡದಲ್ಲಿ ಶವಗಳನ್ನು ಹೂಳಲಾಗಿದೆ ಎಂಬ ಆರೋಪ ಸಂಬಂಧ ಸ್ಥಳ ಮಹಜರು ನಡೆಸಲು ಎಸ್​​ಐಟಿಗೆ ಅರಣ್ಯ ಇಲಾಖೆ ಹಸಿರುನಿಶಾನೆ ತೋರಿದೆ. ಅದರಂತೆ, ಬಂಗ್ಲೆಗುಡ್ಡೆಯಲ್ಲಿ ವಿಠಲ್ ಗೌಡ ಬುರುಡೆ ತಂದ ಹಾಗು ಅಡಗಿಸಿಟ್ಟಿದ್ದ ಸ್ಥಳದ ಸುತ್ತ ಎಸ್​ಐಟಿ ಮಹಜರು ನಡೆಸಲಿದೆ. ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮಾ ನೇತೃತ್ವದಲ್ಲಿ ಮಹಜರು ಪ್ರಕ್ರಿಯೆ ನಡೆಯಲಿದ್ದು ಅರಣ್ಯ ಇಲಾಖೆ, ಲೋಕೋಪಯೋಗಿ ಇಲಾಖೆ, SOCO ಟೀಮ್ , ಕಂದಾಯ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಹಾಜರಿರುವಂತೆ ಸೂಚನೆ ನೀಡಲಾಗಿದೆ. ಆದರೆ, ಬಂಗ್ಲೆಗುಡ್ಡೆಯಲ್ಲಿ ಭೂಮಿ ಅಗೆದು ಸ್ಥಳ ಪರಿಶೋಧನೆ ಮಾಡಲಾಗುವುದಿಲ್ಲ. ಬದಲಿಗೆ ಸ್ಥಳ ಮಹಜರು ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Sep 17, 2025 09:03 AM