SIT ತನಿಖೆ ವೇಳೆ ಯೂಟ್ಯೂರ್ ಎಂಟ್ರಿ: ರೊಚ್ಚಿಗೆದ್ದ ಸ್ಥಳೀಯರು, ಮುಂದೇನಾಯ್ತು?
ಧರ್ಮಸ್ಥಳದ ಬುರುಡೆ ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಂಡಿದೆ. ಇಂದು ಸಹ ಎಸ್ಐಟಿ ವಿಚಾರಣೆಗೆ ಗಿರೀಶ್ ಮಟ್ಟಣ್ಣನವರ್ ಆಗಮಿಸಿದ್ದು, ಕಚೇರಿ ಒಳಗೆ ಹೋಗೋ ಮುನ್ನ ಥಮ್ಸ್ ಅಪ್ ಮಾಡಿ, ಜಸ್ಟೀಸ್ ಫಾರ್ ಸೌಜನ್ಯ ಎಂದಿದ್ದು ಹೊಸ ಕುತೂಹಲಕ್ಕೆ ಕಾರಣವಾಗಿದೆ. ಇನ್ನು ಎಸ್ಐಟಿ ಅಧಿಕಾರಿಗಳು ವಿಠಲಗೌಡ ಅವರನ್ನು ಬಂಗ್ಲೆಗುಡ್ಡ ಬಳಿ ಕರೆದುಕೊಂಡು ಹೋಗಿ ಸ್ಥಳ ಮಹಜರು ಮಾಡಿದರು. ಇದೇ ವೇಳೆ ಸ್ಥಳಕ್ಕೆ 'ಕುಡ್ಲ ರಾಂಪೇಜ್' ಪೇಜಿನ ಯುಟ್ಯೂಬರ್ ಆಗಮಿಸಿದ್ದು, ಇದಕ್ಕೆ ಸ್ಥಳೀಯರು ಆಕ್ರೋಶಗೊಂಡಿದ್ದು, ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಕೆಲ ಕಾಲ ಹೈಡ್ರಾಮಾವೇ ನಡೆಯಿತು.
ಮಂಗಳೂರು, (ಸೆಪ್ಟೆಂಬರ್ 10): ಧರ್ಮಸ್ಥಳದ ಬುರುಡೆ ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಂಡಿದೆ. ಇಂದು ಸಹ ಎಸ್ಐಟಿ ವಿಚಾರಣೆಗೆ ಗಿರೀಶ್ ಮಟ್ಟಣ್ಣನವರ್ ಆಗಮಿಸಿದ್ದು, ಕಚೇರಿ ಒಳಗೆ ಹೋಗೋ ಮುನ್ನ ಥಮ್ಸ್ ಅಪ್ ಮಾಡಿ, ಜಸ್ಟೀಸ್ ಫಾರ್ ಸೌಜನ್ಯ ಎಂದಿದ್ದು ಹೊಸ ಕುತೂಹಲಕ್ಕೆ ಕಾರಣವಾಗಿದೆ. ಇನ್ನು ಎಸ್ಐಟಿ ಅಧಿಕಾರಿಗಳು ವಿಠಲಗೌಡ ಅವರನ್ನು ಬಂಗ್ಲೆಗುಡ್ಡ ಬಳಿ ಕರೆದುಕೊಂಡು ಹೋಗಿ ಸ್ಥಳ ಮಹಜರು ಮಾಡಿದರು. ಇದೇ ವೇಳೆ ಸ್ಥಳಕ್ಕೆ ‘ಕುಡ್ಲ ರಾಂಪೇಜ್’ ಪೇಜಿನ ಯುಟ್ಯೂಬರ್ ಆಗಮಿಸಿದ್ದು, ಇದಕ್ಕೆ ಸ್ಥಳೀಯರು ಆಕ್ರೋಶಗೊಂಡಿದ್ದು, ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಕೆಲ ಕಾಲ ಹೈಡ್ರಾಮಾವೇ ನಡೆಯಿತು.
