ಕುಡಿದು ಬಂದು ಯುವಕರಿಂದ ಡ್ಯಾನ್ಸ್: ಪ್ರಶ್ನಿಸಿದ್ದಕ್ಕೆ ಮಾಜಿ ಸೈನಿಕನ ಮನೆಗೆ ಕಲ್ಲೆಸೆತ

Updated By: ಗಂಗಾಧರ​ ಬ. ಸಾಬೋಜಿ

Updated on: Sep 19, 2025 | 12:11 PM

ಧಾರವಾಡದ ನಗರಕರ್ ಕಾಲನಿಯಲ್ಲಿ ಮಧ್ಯರಾತ್ರಿ ಕುಡಿದು ಬಂದು ಡ್ಯಾನ್ಸ್​​ ಮಾಡುತ್ತಿದ್ದ ಯುವಕರನ್ನು ಪ್ರಶ್ನಿಸಿದ್ದಕ್ಕಾಗಿ ಮಾಜಿ ಸೈನಿಕ ಕೆ. ಮಡಿವಾಳಯ್ಯ ಪೂಜಾರ್ ಅವರ ಮನೆಗೆ ಕಲ್ಲು ತೂರಾಟ ಮಾಡಿದ್ದಾರೆ. ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪೂಜಾರ್ ಅವರು ಜನರಿಗೆ ತೊಂದರೆ ಆಗುತ್ತಿದೆ ಎಂದು ಯುವಕರನ್ನು ತರಾಟೆಗೆ ತೆಗೆದುಕೊಂಡಿದ್ದರು. ಪೊಲೀಸರು ಈ ಘಟನೆಯ ಕುರಿತು ತನಿಖೆ ನಡೆಸುತ್ತಿದ್ದಾರೆ.

ಧಾರವಾಡ, ಸೆಪ್ಟೆಂಬರ್​ 19: ಯುವಕರ ಗುಂಪೊಂದು ಮಧ್ಯರಾತ್ರಿ ಕುಡಿದು ಬಂದು ರಸ್ತೆಯಲ್ಲಿ ಡ್ಯಾನ್ಸ್ ಮಾಡಿದ್ದಾರೆ. ಇದನ್ನು ಪ್ರಶ್ನೆ ಮಾಡಿದಕ್ಕೆ ಮಾಜಿ ಸೈನಿಕನ ಕ್ಯಾ. ಮಡಿವಾಳಯ್ಯ ಪೂಜಾರ್ ಮನೆಗೆ ಕಲ್ಲೆಸೆದಿರುವಂತಹ ಘಟನೆ ನಗರದ ನಗರಕರ್ ಕಾಲನಿಯಲ್ಲಿ ಎರಡು ದಿನಗಳ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಜನರಿಗೆ ತೊಂದರೆಯಾಗುತ್ತೆ ಎಂದು ಮಡಿವಾಳಯ್ಯ ಪೂಜಾರ್ ಯುವಕರಿಗೆ ಬೈಯ್ದಿದ್ದಾರೆ. ಇದಕ್ಕೆ ಕಲ್ಲೆಸೆದಿದ್ದು, ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ ಆಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.