ಕೈ ತಪ್ಪಿದ ಧಾರವಾಡ ಟಿಕೆಟ್​; ಹೆಬ್ಬಾಳ್ಕರ್ ಅಳಿಯ ರಜತ್ ಉಳ್ಳಾಗಡ್ಡಿಮಠ ಬೇಸರ

| Updated By: ಕಿರಣ್ ಹನುಮಂತ್​ ಮಾದಾರ್

Updated on: Mar 22, 2024 | 10:56 PM

ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕಾವು ಜೋರಾಗಿದೆ. ಇದರ ಮಧ್ಯೆ ಉಭಯ ಪಕ್ಷಗಳ ಟಿಕೆಟ್​ ಆಕಾಂಕ್ಷಿಗಳು, ಟಿಕೆಟ್ ಕೈ ತಪ್ಪಿದ್ದರಿಂದ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಅದರಂತೆ ಧಾರವಾಡ​ ಕ್ಷೇತ್ರ ಕೈತಪ್ಪಿದ್ದರಿಂದ ಹೆಬ್ಬಾಳ್ಕರ್ ಅಳಿಯ ರಜತ್ ಉಳ್ಳಾಗಡ್ಡಿಮಠ ಬೇಸರದಿಂದ ಹೊರಹಾಕಿದ್ದಾರೆ.

ಹುಬ್ಬಳ್ಳಿ, ಮಾ.22: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕಾವು ಜೋರಾಗಿದೆ. ಇದರ ಮಧ್ಯೆ ಉಭಯ ಪಕ್ಷಗಳ ಟಿಕೆಟ್​ ಆಕಾಂಕ್ಷಿಗಳು, ಟಿಕೆಟ್ ಕೈ ತಪ್ಪಿದ್ದರಿಂದ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಅದರಂತೆ ಧಾರವಾಡ​ ಕ್ಷೇತ್ರ ಕೈತಪ್ಪಿದ್ದರಿಂದ ಹೆಬ್ಬಾಳ್ಕರ್ ಅಳಿಯ ರಜತ್ ಉಳ್ಳಾಗಡ್ಡಿಮಠ(Rajat Ullagaddimat) ಬೇಸರದಿಂದ ಹೊರಹಾಕಿದ್ದಾರೆ. ‘ನಾನು ಕ್ಷೇತ್ರದಲ್ಲಿ ಸಂಚರಿಸಿ ಪಕ್ಷ ಸಂಘಟನೆ ಮಾಡಿದ್ದೆ. ಧಾರವಾಡ ಕ್ಷೇತ್ರದ ಅಭ್ಯರ್ಥಿಗಾಗಿ ನಡೆಸಿದ ಸಮೀಕ್ಷೆಯಲ್ಲಿ ನನ್ನ ಹೆಸರಿತ್ತು. ಆದರೆ, ಈಗ ಬೇರೆಯವರಿಗೆ ಧಾರವಾಡ ಕ್ಷೇತ್ರದ ಟಿಕೆಟ್ ಘೋಷಣೆಯಾಗಿದೆ ಎಂದು ಸಮಾನ ಮನಸ್ಕರ ಸಭೆಯಲ್ಲಿ ಬೇಸರ ವ್ಯಕ್ತಪಡಿಸಿದರು.

2023ರ ವಿಧಾನಸಭಾ ಚುನಾವಣೆಯಲ್ಲೂ ನನಗೆ ಟಿಕೆಟ್ ಕೈತಪ್ಪಿತ್ತು. ಚುನಾವಣೆಯಲ್ಲಿ ಪರೀಕ್ಷೆ ಬರೆದ್ರೂ ಆನ್ಸರ್ ಸೀಟ್ ಕಸಿದುಕೊಂಡು ಹೋದರೂ, ವೀಕ್ ಕ್ಯಾಂಡಿಡೇಟ್​ಗೆ ಟಿಕೆಟ್ ನೀಡಿದ್ರು, ಅವರು 10 ಅಂಕ ಪಡೆಯಲಿಲ್ಲ. ಪರೋಕ್ಷವಾಗಿ ಜಗದೀಶ್ ಶೆಟ್ಟರ್ ವಿರುದ್ಧ ಅಸಮಾಧಾನ ಹೊರಹಾಕಿದರು.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ