ಮುಗಿಯಿತು ‘ಕೆಡಿ’ ಸಿನಿಮಾ ಶೂಟಿಂಗ್, ಸೀ ಯು ಸೂನ್ ಎಂದ ಧ್ರುವ-ಪ್ರೇಮ್

Updated on: Sep 14, 2025 | 9:09 PM

KD Kannada Movie Shooting: ಧ್ರುವ ಸರ್ಜಾ ನಟಿಸಿ, ಪ್ರೇಮ್ ನಿರ್ದೇಶನ ಮಾಡುತ್ತಿರುವ ‘ಕೆಡಿ’ ಸಿನಿಮಾದ ಚಿತ್ರೀಕರಣ ಕೊನೆಗೂ ಮುಕ್ತಾಯಗೊಂಡಿದೆ. ಸಿನಿಮಾದ ಚಿತ್ರೀಕರಣ ಇತ್ತೀಚೆಗಷ್ಟೆ ಹೈದರಾಬಾದ್​​​ನಲ್ಲಿ ಭರದಿಂದ ಸಾಗಿತ್ತು. ಸಿನಿಮಾ ಸೆಟ್​​ಗೆ ಕಿಚ್ಚ ಸುದೀಪ್ ಸಹ ಭೇಟಿ ನೀಡಿದ್ದರು. ಇದೀಗ ಪ್ರೇಮ್, ಧ್ರುವ ಸರ್ಜಾ ಅವರುಗಳು ಸಿನಿಮಾ ಶೂಟಿಂಗ್ ಮುಕ್ತಾಯ ಆದ ವಿಷಯವನ್ನು ಸಾಮಾಜಿಕ ಜಾಲತಾಣದ ಮೂಲಕ ಘೋಷಣೆ ಮಾಡಿದ್ದಾರೆ. ವಿಡಿಯೋ ನೋಡಿ...

ಧ್ರುವ ಸರ್ಜಾ (Dhruva Sarja) ನಟಿಸಿ, ಪ್ರೇಮ್ ನಿರ್ದೇಶನ ಮಾಡುತ್ತಿರುವ ‘ಕೆಡಿ’ ಸಿನಿಮಾದ ಚಿತ್ರೀಕರಣ ಕೊನೆಗೂ ಮುಕ್ತಾಯಗೊಂಡಿದೆ. ಸಿನಿಮಾದ ಚಿತ್ರೀಕರಣ ಇತ್ತೀಚೆಗಷ್ಟೆ ಹೈದರಾಬಾದ್​​​ನಲ್ಲಿ ಭರದಿಂದ ಸಾಗಿತ್ತು. ಸಿನಿಮಾ ಸೆಟ್​​ಗೆ ಕಿಚ್ಚ ಸುದೀಪ್ ಸಹ ಭೇಟಿ ನೀಡಿದ್ದರು. ಇದೀಗ ಪ್ರೇಮ್, ಧ್ರುವ ಸರ್ಜಾ ಅವರುಗಳು ಸಿನಿಮಾ ಶೂಟಿಂಗ್ ಮುಕ್ತಾಯ ಆದ ವಿಷಯವನ್ನು ಸಾಮಾಜಿಕ ಜಾಲತಾಣದ ಮೂಲಕ ಘೋಷಣೆ ಮಾಡಿದ್ದಾರೆ. ಎಲ್ಲ ಸಹಾಯಕರ ಜೊತೆಗೂಡಿ ವಿಡಿಯೋ ಮಾಡಿರುವ ಧ್ರುವ ಮತ್ತು ಪ್ರೇಮ್, ಆದಷ್ಟು ಬೇಗ ಭೇಟಿ ಆಗುತ್ತೇವೆ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More