Asia cup 2025: ಪಾಕಿಸ್ತಾನಕ್ಕೆ ಅವಮಾನ..! ರಾಷ್ಟ್ರಗೀತೆಯ ಬದಲು ರ‍್ಯಾಪ್ ಸಾಂಗ್ ಪ್ರಸಾರ; ವಿಡಿಯೋ ನೋಡಿ
Asia Cup 2025: ಏಷ್ಯಾಕಪ್ ಪಂದ್ಯದಲ್ಲಿ ಪಾಕಿಸ್ತಾನದ ರಾಷ್ಟ್ರಗೀತೆಯನ್ನು ಪ್ರಸಾರ ಮಾಡುವ ಬದಲು ಡಿಜೆ ತಪ್ಪಾಗಿ ಜಲೇಬಿ ಬೇಬಿ ರ್ಯಾಪ್ ಹಾಡನ್ನು ಪ್ರಸಾರ ಮಾಡಿದ್ದಾನೆ. ಡಿಜೆ ತನ್ನ ತಪ್ಪನ್ನು ಅರಿತು ಅದನ್ನು ಸರಿಪಡಿಸಿದರೂ, ಸೋಶಿಯಲ್ ಮೀಡಿಯಾದಲ್ಲಿ ಅದರ ವಿಡಿಯೋ ವೈರಲ್ ಆಗಿದೆ. ಪಾಕಿಸ್ತಾನ ತಂಡ ಬಹಿರಂಗವಾಗಿ ಮುಜುಗರಕ್ಕೀಡಾಗಿದೆ.
ಭಾರತ ಹಾಗೂ ಪಾಕಿಸ್ತಾನ ನಡುವಿನ ಏಷ್ಯಾಕಪ್ ಪಂದ್ಯ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಹಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ ಟೀಂ ಇಂಡಿಯಾಕ್ಕೆ 127 ರನ್ಗಳ ಗುರಿ ನೀಡಿದೆ. ಆದರೆ ಈ ಪಂದ್ಯ ಆರಂಭಕ್ಕೂ ಮುನ್ನ ಆಯೋಜಕರು ಮಾಡಿದ ಎಡವಟ್ಟಿನಿಂದ ಪಾಕಿಸ್ತಾನ ತಂಡ ಬಹಿರಂಗವಾಗಿಯೇ ಮುಜುಗರಕ್ಕೀಡಾಗಿದೆ.
ವಾಸ್ತವವಾಗಿ ಟಾಸ್ ಮುಗಿದ ಬಳಿಕ ಉಭಯ ತಂಡಗಳು ರಾಷ್ಟ್ರಗೀತೆಗಾಗಿ ಮೈದಾನಕ್ಕೆ ಬಂದವು. ಮೊದಲು ಭಾರತದ ರಾಷ್ಟ್ರಗೀತೆಯನ್ನು ಪ್ರಸಾರ ಮಾಡಲಾಯಿತು. ಆ ಬಳಿಕ ಪಾಕಿಸ್ತಾನ ರಾಷ್ಟ್ರಗೀತೆಯ ಸರದಿ ಇತ್ತು. ಆದರೆ ಇಲ್ಲಿ ರಾಷ್ಟ್ರಗೀತೆಯನ್ನು ಪ್ರಸಾರ ಮಾಡುವಲ್ಲಿ ಎಡವಟ್ಟು ಮಾಡಿದ ಡಿಜೆ, ಪಾಕಿಸ್ತಾನದ ರಾಷ್ಟ್ರಗೀತೆಯ ಬದಲು ಜಲೇಬಿ ಬೇಬಿ ರ್ಯಾಪ್ ಹಾಡನ್ನು ಪ್ರಸಾರ ಮಾಡಿದನು. ಒಂದೆರಡು ಸೆಕೆಂಡ್ ಹಾಡು ಕೂಡ ಪ್ರಸಾರವಾಯಿತು. ಆದರೆ ಆ ಬಳಿಕ ತನ್ನ ತಪ್ಪಿನಿಂದ ಎಚ್ಚೆತ್ತ ಡಿಜೆ ಪಾಕಿಸ್ತಾನದ ರಾಷ್ಟ್ರಗೀತೆಯನ್ನು ಪ್ರಸಾರ ಮಾಡಿದನು. ಆದರೆ ಅದಾಗಲೇ ಡಿಜೆ ಮಾಡಿದ ಎಡವಟ್ಟಿನ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಗಾಳಿಯಂತೆ ವೈರಲ್ ಆಗಿತ್ತು.

