ಕುಡಿದ ನಶೆಯಲ್ಲಿ ಯದ್ವಾ ತದ್ವಾ ಬೈಕ್ ಓಡಿಸಿದ ಯುವಕರು
ತ್ರಿಬರ್ ರೈಡಿಂಗ್ ಮಾತ್ರವಲ್ಲದೆ ಕುಡಿದ ಮತ್ತಿನಲ್ಲಿ ಯದ್ವಾ ತದ್ವಾ ಬೈಕ್ ಓಡಿಸಿದಂತಹ ಘಟನೆ ಬೆಂಗಳೂರಿನ ಮಾರತ್ತಹಳ್ಳಿಯ ಔಟರ್‌ರಿಂಗ್ ರೋಡ್‌ನಲ್ಲಿ ನಡೆದಿದೆ. ಯರ್ರಾ ಬಿರ್ರಿ ಗಾಡಿ ಓಡಿಸಿದ ಪರಿಣಾಮ ಬೈಕ್‌ನಲ್ಲಿದ್ದ ಮೂವರು ಯುವಕರು ಬ್ಯಾಲೆನ್ಸ್ ತಪ್ಪಿ ಬಿದ್ದಿದ್ದಾರೆ. ಈ ಸಂಪೂರ್ಣ ದೃಶ್ಯ ಕಾರಿನ ಡ್ಯಾಶ್‌ಬೋರ್ಡ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಬೆಂಗಳೂರು, ಸೆಪ್ಟೆಂಬರ್ 14: ಟ್ರಾಫಿಕ್ ನಿಯಮಗಳ (Traffic Rules) ಪ್ರಕಾರ ಕುಡಿದು ವಾಹನ ಚಲಾಯಿಸುವಂತಿಲ್ಲ. ಹೀಗಿರುವಾಗ ತ್ರಿಬಲ್ ರೈಡಿಂಗ್ ಮಾತ್ರವಲ್ಲದೆ ಕುಡಿದು ಬೈಕ್ ಚಲಾಯಿಸಿದ್ದಾರೆ. ಕುಡಿದ ಮತ್ತಿನಲ್ಲು ಯದ್ವಾ ತದ್ವಾ ಬೈಕ್ ಓಡಿಸಿದ ಪರಿಣಾಮ ಬೈಕ್‌ನಲ್ಲಿದ್ದ ಮೂವರು ಯುವಕರು ಬ್ಯಾಲೆನ್ಸ್ ತಪ್ಪಿ ಬಿದ್ದಿದ್ದಾರೆ. ಯಾಕೆ ಹೀಗೆ ಕುಡಿದು ರಸ್ತೆಯಲ್ಲಿ ಗಾಡಿ ಓಡಿಸ್ತೀರಿ ಎಂದು ಪ್ರಶ್ನಿಸಿದ ಕಾರ್ ಚಾಲಕನ ಜೊತೆಗೂ ಈ ಕಿಡಿಗೇಡಿ ಯುವಕರು ಗಲಾಟೆ ಮಾಡಿದ್ದಾರೆ. ಮಾರತ್ತಹಳ್ಳಿಯ ಔಟರ್‌ರಿಂಗ್ ರೋಡ್‌ನಲ್ಲಿ ಈ ಘಟನೆ ನಡೆದಿದ್ದು, ಈ ಸಂಪೂರ್ಣ ದೃಶ್ಯ ಕಾರಿನ ಡ್ಯಾಶ್‌ಬೋರ್ಡ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

