Dhruva Sarja: ಅಪ್ಪನಾದ ಖುಷಿಯಲ್ಲಿ ಆಸ್ಪತ್ರೆ ಎದುರು ಅಭಿಮಾನಿಗಳ ಜತೆ ಸೆಲ್ಫಿಗೆ ಪೋಸ್​ ಕೊಟ್ಟ ಧ್ರುವ ಸರ್ಜಾ

Edited By:

Updated on: Oct 02, 2022 | 6:23 PM

Dhruva Sarja | Prerana Shankar: ಧ್ರುವ ಸರ್ಜಾ ಮತ್ತು ಪ್ರೇರಣಾ ದಂಪತಿಗೆ ಅಭಿನಂದನೆ ತಿಳಿಸಲು ಆಸ್ಪತ್ರೆ ಮುಂದೆ ಅಭಿಮಾನಿಗಳು ಜಮಾಯಿಸಿದ್ದರು. ಧ್ರುವ ಜತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಕೆಲವು ಫ್ಯಾನ್ಸ್​ ಸಂಭ್ರಮಿಸಿದ್ದಾರೆ.

ಹೆಣ್ಣು ಮಗು ಬೇಕು ಎಂದು ನಟ ಧ್ರುವ ಸರ್ಜಾ (Dhruva Sarja) ಬಯಸಿದ್ದರು. ಅವರ ಆಸೆಯಂತೆಯೇ ಮಗಳು ಜನಿಸಿದ್ದಾಳೆ. ಧ್ರುವ ಸರ್ಜಾ ಪತ್ನಿ ಪ್ರೇರಣಾ ಶಂಕರ್​ (Prerana Shankar) ಅವರು ಇಂದು (ಅ.2) ಹೆಣ್ಮಗುವಿಗೆ (Baby Girl) ಜನ್ಮ ನೀಡಿದ್ದಾರೆ. ಬನಶಂಕರಿಯ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆ ಆಗಿದೆ. ಧ್ರುವ ಮತ್ತು ಪ್ರೇರಣಾ ದಂಪತಿಗೆ ಅಭಿನಂದನೆ ತಿಳಿಸಲು ಆಸ್ಪತ್ರೆ ಮುಂದೆ ಅಭಿಮಾನಿಗಳು ಜಮಾಯಿಸಿದ್ದರು. ಅಪ್ಪನಾದ ಖುಷಿಯ ನಡುವೆ ಧ್ರುವ ಸರ್ಜಾ ಅವರು ಫ್ಯಾನ್ಸ್​ ಜತೆ ಸೆಲ್ಫಿಗೆ ಪೋಸ್​ ನೀಡಿದ್ದಾರೆ. ಅಭಿಮಾನಿಗಳು, ಆಪ್ತರು, ಕುಟುಂಬದವರು ಹಾಗೂ ಅನೇಕ ಸೆಲೆಬ್ರಿಟಿಗಳು ಧ್ರುವ-ಪ್ರೇರಣಾಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ.

 

 

Published on: Oct 02, 2022 06:23 PM
Loading...
Unable to load recommendations.
Follow Us
TV9 Web

TV9 Kannada

Read More