ಧ್ರುವ ಸರ್ಜಾ-ಪ್ರೇರಣಾಗೆ ಹೆಣ್ಣು ಮಗು; ರಾಯನ್​ ಜತೆ ಬಂದು ಪ್ರತಿಕ್ರಿಯೆ ನೀಡಿದ ಮೇಘನಾ ರಾಜ್​

ಸರ್ಜಾ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಧ್ರುವ-ಪ್ರೇರಣಾ ದಂಪತಿಯ ಮಗುವನ್ನು ನೋಡಿದ ಬಳಿಕ ಮೇಘನಾ ರಾಜ್​ ಅವರು ಸಂತಸ ಹಂಚಿಕೊಂಡಿದ್ದಾರೆ.

TV9kannada Web Team

| Edited By: Madan Kumar

Oct 02, 2022 | 5:28 PM

ನಟ ಧ್ರುವ ಸರ್ಜಾ ಅವರ ಪತ್ನಿ ಪ್ರೇರಣಾ ಶಂಕರ್​ (Prerana Shankar) ಇಂದು (ಅ.2) ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಗುವಿನ ಆಗಮನದ ಖುಷಿಯಿಂದ ಕುಟುಂಬದವರ ಮೊಗದಲ್ಲಿ ನಗು ಅರಳಿದೆ. ಧ್ರುವ ಸರ್ಜಾ (Dhruva Sarja) ಅವರ ಅತ್ತಿಗೆ ಮೇಘನಾ ರಾಜ್​ ಕೂಡ ಸಂತಸ ವ್ಯಕ್ತಪಡಿಸಿದ್ದಾರೆ. ಪುತ್ರ ರಾಯನ್​ ರಾಜ್​ ಜೊತೆ ಖಾಸಗಿ ಆಸ್ಪತ್ರೆಗೆ ಬಂದ ಮೇಘನಾ ರಾಜ್​ (Meghana Raj) ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ‘ತಾಯಿ-ಮಗು ಆರೋಗ್ಯವಾಗಿದ್ದಾರೆ’ ಎಂದು ಅವರು ಹೇಳಿದ್ದಾರೆ.

 

Follow us on

Click on your DTH Provider to Add TV9 Kannada