Chiranjeevi Sarja: ಚಿರಂಜೀವಿ ಸಮಾಧಿಗೆ ಪೂಜೆ ಸಲ್ಲಿಸಿದ ಧ್ರುವ ಸರ್ಜಾ; ಅಣ್ಣನ ಭಾವಚಿತ್ರಕ್ಕೆ ಪುಷ್ಪಾರ್ಚನೆ

Updated on: Jun 07, 2023 | 1:21 PM

Chiranjeevi Sarja Death Anniversary: ಮೂರನೇ ವರ್ಷದ ಪುಣ್ಯ ಸ್ಮರಣೆಯಲ್ಲಿ ಚಿರಂಜೀವಿ ಸರ್ಜಾ ಅವರಿಗೆ ಕುಟುಂಬದವರು ನಮನ ಸಲ್ಲಿಸಿದ್ದಾರೆ. ಅಣ್ಣನನ್ನು ನೆನೆದು ಧ್ರುವ ಸರ್ಜಾ ಭಾವುಕರಾಗಿದ್ದಾರೆ.

ನಟ ಚಿರಂಜೀವಿ ಸರ್ಜಾ (Chiranjeevi Sarja) ಇಲ್ಲದೇ ಇಂದಿಗೆ (ಜೂನ್​ 7) ಮೂರು ವರ್ಷಗಳು ಕಳೆದಿವೆ. ಅವರನ್ನು ಕಳೆದುಕೊಂಡ ನೋವು ಕುಟುಂಬದವರಿಗೆ ಮತ್ತು ಅಭಿಮಾನಿಗಳಿಗೆ ಎಂದಿಗೂ ಕಡಿಮೆ ಆಗುವಂಥದ್ದಲ್ಲ. ಇಂದು ಮೇಘನಾ ರಾಜ್ (Meghana Raj)​ ಮತ್ತು ಸರ್ಜಾ ಕುಟುಂಬದ ಸದಸ್ಯರು ಚಿರು ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಅಣ್ಣನ ಜೊತೆ ಧ್ರುವ ಸರ್ಜಾ (Dhruva Sarja) ಅವರಿಗೆ ತುಂಬ ಬಾಂಧವ್ಯ ಇತ್ತು. ಸಹೋದರನ್ನು ಕಳೆದುಕೊಂಡ ಬಳಿಕ ಧ್ರುವ ಕುಗ್ಗಿ ಹೋಗಿದ್ದರು. ಈಗ ಅಣ್ಣನ ಸಮಾಧಿಗೆ ಅವರು ಪುಷ್ಪಾರ್ಚನೆ ಮಾಡಿದ್ದಾರೆ. ಈ ವೇಳೆ ಅವರು ಭಾವುಕರಾದರು.

​ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More