ಅಣ್ಣನ ಕೊನೆಯ ಸಿನಿಮಾ ‘ರಾಜಮಾರ್ತಾಂಡ’ ಬಗ್ಗೆ ಧ್ರುವ ಸರ್ಜಾ ಭಾವುಕ ಮಾತು
Dhruva Sarja: ಚಿರಂಜೀವಿ ಸರ್ಜಾ ನಟನೆಯ ಕೊನೆಯ ಸಿನಿಮಾ 'ರಾಜಮಾರ್ತಾಂಡ' ಸಿನಿಮಾದ ಪ್ರಚಾರ ಕಾರ್ಯದಲ್ಲಿ ಚಿರು ಸರ್ಜಾ ಸಹೋದರ ಧ್ರುವ ಸರ್ಜಾ ಹಾಗೂ ಚಿರು ಸರ್ಜಾ ಪತ್ನಿ ಮೇಘನಾ ಭಾಗಿಯಾಗಿದ್ದರು.
ಚಿರಂಜೀವಿ ಸರ್ಜಾ (Chiranjeevi Sarja) ನಟನೆಯ ಕೊನೆಯ ಸಿನಿಮಾ ‘ರಾಜಮಾರ್ತಾಂಡ’ ಬಿಡುಗಡೆ ಆಗುತ್ತಿದೆ. ಸಿನಿಮಾದಲ್ಲಿ ಚಿರು ಸರ್ಜಾಗೆ ಅವರ ಸಹೋದರ ಧ್ರುವ ಸರ್ಜಾ ಧ್ವನಿ ನೀಡಿದ್ದಾರೆ. ಸಿನಿಮಾದ ಪ್ರಚಾರ ಕಾರ್ಯದಲ್ಲಿ ನಟಿ ಮೇಘನಾ ರಾಜ್ ಸರ್ಜಾ ಹಾಗೂ ಸಹೋದರ ಧ್ರುವ ಸರ್ಜಾ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಸಿನಿಮಾ ಕುರಿತು ಹಾಗೂ ಚಿರು ಸರ್ಜಾ ಕುರಿತು ಹಲವು ಭಾವುಕ ನೆನಪುಗಳನ್ನು ಚಿರು ಸರ್ಜಾ ಹಾಗೂ ಮೇಘನಾ ಸರ್ಜಾ ಹಂಚಿಕೊಂಡರು. ನಟ ಚಿರು ಸರ್ಜಾ ಮಾತನಾಡಿ, ಸಿನಿಮಾಕ್ಕೆ ಡಬ್ಬಿಂಗ್ ಮಾಡುವಾಗ ಅಣ್ಣನನ್ನು ನೋಡಿ ಕಣ್ತುಂಬಿಕೊಂಡೆ. ಬಹಳ ಖುಷಿಯಿಂದ ಸಿನಿಮಾದಲ್ಲಿ ನಟಿಸಿದ್ದಾನೆ. ಅವನ ನೆನಪು ಪ್ರತಿ ದಿನವೂ ನನ್ನನ್ನು ಕಾಡುತ್ತದೆ” ಎಂದರು ಧ್ರುವ ಸರ್ಜಾ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ