ಧ್ರುವನಾರಾಯಣರ ಅಂತಿಮ ದರ್ಶನಕ್ಕೆ ನಂಜನಗೂಡು ಮತ್ತು ಚಾಮರಾಜನಗರದಲ್ಲಿ ವ್ಯವಸ್ಥೆ, ಜನ ಮೈಸೂರಿಗೆ ಬರದಿರುವಂತೆ ಪುತ್ರನ ಮನವಿ
ಏತನ್ಮಧ್ಯೆ, ಅಗಲಿದ ನಾಯಕನ ಪುತ್ರ ಟಿವಿ9 ಪ್ರತಿನಿಧಿಯೊಂದಿಗೆ ಮಾತಾಡಿ ತಮ್ಮ ತಂದೆಯ ಅಂತಿಮ ದರ್ಶನ ಪಡೆಯಲು ಚಾಮರಾಜನಗರ ಮತ್ತು ನಂಜನಗೂಡಿನ ಜನ ಮೈಸೂರಿಗೆ ಬರದಂತೆ ವಿನಂತಿಸಿಕೊಂಡಿದ್ದಾರೆ.
ಮೈಸೂರು: ಮಾಜಿ ಸಂಸದ ಆರ್ ಧ್ರುವನಾರಾಯಣ (R Dhruvanarayana) ಅವರ ಆಕಸ್ಮಿಕ ಮರಣದಿಂದ ಹಳೆ ಮೈಸೂರು ಭಾಗವಿಡೀ ಸ್ತಬ್ಧಗೊಂಡಿದೆ. ಜನ ತಮ್ಮ ಕುಟುಂಬದ ಸದಸ್ಯರೊಬ್ಬರನ್ನು ಕಳೆದುಕೊಂಡ ಹಾಗೆ ರೋದಿಸುತ್ತಿದ್ದಾರೆ. ಏತನ್ಮಧ್ಯೆ, ಅಗಲಿದ ನಾಯಕನ ಪುತ್ರ ಟಿವಿ9 ಪ್ರತಿನಿಧಿಯೊಂದಿಗೆ ಮಾತಾಡಿ ತಮ್ಮ ತಂದೆಯ ಅಂತಿಮ ದರ್ಶನ ಪಡೆಯಲು ಚಾಮರಾಜನಗರ (Chamarajanagar) ಮತ್ತು ನಂಜನಗೂಡಿನ (Nanjangud) ಜನ ಮೈಸೂರಿಗೆ ಬರದಂತೆ ವಿನಂತಿಸಿಕೊಂಡಿದ್ದಾರೆ. ಧ್ರುವನಾರಾಯಣ ಅವರ ಅಂತಿಮ ದರ್ಶನ ಪಡೆಯಲು ನಂಜನಗೂಡು ಮತ್ತು ಚಾಮರಾಜನಗರ ಎರಡೂ ಕಡೆಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಅವರು ಹೇಳಿದರು. ತಂದೆಯ ಅಂತ್ಯಸಂಸ್ಕಾರ ಇವತ್ತೇ ನಡೆಯುವ ಸಾಧ್ಯತೆ ಜಾಸ್ತಿಯಿದೆ ಎಂದು ಅವರು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ