ಬೆಂಗಳೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್ ಧ್ರುವನಾರಾಯಣ ಅವರ ಸಾವಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ತೀವ್ರ ಶೋಕ ಮತ್ತು ಸಂತಾಪ ವ್ಯಕ್ತಪಡಿಸಿದ್ದಾರೆ. ನಗರಲದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಕಣ್ಣೀರು ಸುರಿಸುತ್ತಾ ಮಾತಾಡಿದ ಅವರು, ಭಗವಂತ ಇಷ್ಟು ಕ್ರೂರಿಯಾದಾನು ಅಂತ ಎಣಿಸಿಲಿಲ್ಲ. ಅವರ ಹಠಾತ್ ಸಾವಿನ ಆಘಾತ ಮತ್ತು ದುಃಖ ನಮಗೇನೆ ತಡೆದುಕೊಳ್ಳಲಾಗುತ್ತಿಲ್ಲ, ಅನಾರೋಗ್ಯದಲ್ಲಿರುವ ಅವರ ಪತ್ನಿ, ನನ್ನ ಸಹೋದರಿ ಹೇಗೆ ತಡೆದುಕೊಂಡಾಳು? ಎಂದ ಶಿವಕುಮಾರ್ ಮಧ್ಯಾಹ್ನದ ನಂತರ ಮೈಸೂರಿಗೆ ಹೋಗುವುದಾಗಿ ತಿಳಿಸಿದರು. ಪ್ರಜಾಧ್ವನಿ ಯಾತ್ರೆಯನ್ನು ಇವತ್ತು ಸ್ಥಗಿತಗೊಳಿಸಲಾಗಿದೆ ಎಂದು ಅವರು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ