ಸಿದ್ದರಾಮಯ್ಯ ಇನ್ನೊಮ್ಮೆ ವಿಶ್ವಗುರು ಪ್ರಧಾನಿ ನರೇಂದ್ರ ಮೋದಿಯವರನ್ನು ನರಹಂತಕ ಅಂತ ಹೇಳಿದರೆ ನಾಲಿಗೆ ಸೀಳಿಬಿಡ್ತೀನಿ! ಕೆಎಸ್ ಈಶ್ವರಪ್ಪ
ವಿಜಯ ಸಂಕಲ್ಪ ಯಾತ್ರೆಯ ಭಾಗವಾಗಿ ಮಡಿಕೇರಿಯಲ್ಲಿ ಬಿಜೆಪಿ ಸಮಾವೇಶವನ್ನು ಉದ್ದೇಶಿಸಿ ಮಾತಾಡಿದ ಈಶ್ವರಪ್ಪ ಪುನಃ ತನ್ನ ಬದ್ಧ ರಾಜಕೀಯ ವೈರಿ ವಿರುದ್ಧ ವಾಗ್ದಾಳಿ ನಡೆಸಿದರು.
ಬೆಂಗಳೂರು: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಮತ್ತು ಬಿಜೆಪಿಯ ಹಿರಿಯ ನಾಯಕ ಮತ್ತು ಶಾಸಕ ಕೆಎಸ್ ಈಶ್ವರಪ್ಪ (KS Eshwarappa) ನಡುವೆ ದಶಕಗಳಿಂದ ಮಾತಿನ ಜಗಳ ನಡೆದುಕೊಂಡು ಬಂದಿದೆ ಮಾರಾಯ್ರೇ. ಅದು ಸದನದಲ್ಲೂ ನಡೆಯುತ್ತದೆ ಮತ್ತು ಹೊರಗೂ ನಡೆಯತ್ತದೆ. ವಿಜಯ ಸಂಕಲ್ಪ ಯಾತ್ರೆಯ ಭಾಗವಾಗಿ ಮಡಿಕೇರಿಯಲ್ಲಿ ಬಿಜೆಪಿ ಸಮಾವೇಶವನ್ನು ಉದ್ದೇಶಿಸಿ ಮಾತಾಡಿದ ಈಶ್ವರಪ್ಪ ಪುನಃ ತನ್ನ ಬದ್ಧ ರಾಜಕೀಯ ವೈರಿ ವಿರುದ್ಧ ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯ ಸಭೆಯೊಂದರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು (PM Narendra Modi) ನರಹಂತಕ ಅಂತ ಹೇಳಿದ್ದು ಈಶ್ವರಪ್ಪರನ್ನು ವ್ಯಗ್ರರನ್ನಾಗಿಸಿದೆ. ‘ಸಿದ್ದರಾಮಯ್ಯ ಆ ಪದವನ್ನು ಪುನರಾವರ್ತಿಸಿದರೆ ನಾಲಿಗೆ ಸೀಳಿಬಿಡ್ತೀನಿ, ಹುಷಾರ್!’ ಎಂದು ಈಶ್ವರಪ್ಪ ಗುಡುಗಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos