ಮಂಡ್ಯ: ಬೆಂಗಳೂರು-ಮೈಸೂರು ನಡುವೆ ಹೊಸದಾಗಿ ಸಿದ್ಧಗೊಂಡಿರುವ ಹತ್ತು ಪಥಗಳ ರಾಷ್ಟ್ರೀಯ ಹೆದ್ದಾರಿಯನ್ನು ಲೋಕಾರ್ಪಣೆ ಮಾಡಲು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ನಾಳೆ (ರವಿವಾರ) ಸಕ್ಕರೆನಾಡು ಮಂಡ್ಯಗೆ (Mandya) ಆಗಮಿಸಲಿದ್ದಾರೆ. ಹೆದ್ದಾರಿಯನ್ನು ಉದ್ಘಾಟಿಸಿದ ಬಳಿಕ ಪ್ರಧಾನಿ ಮೋದಿ ಒಂದು ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತಾಡಲಿದ್ದು ಸಿದ್ಧತೆಗಳು ಭರದಿಂದ ಸಾಗಿವೆ. ಭದ್ರತಾ ದೃಷ್ಟಿಯಿಂದ ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್ (SPG) ತಂಡವೊಂದು ಹೆಲಿಕಾಪ್ಟರ್ ಮೂಲಕ ಸಮಾವೇಶ ನಡೆಯುವ ಸ್ಥಳದ ಪರಿಶೀಲನೆ ನಡೆಸುತ್ತಿದೆ. ಕಾರ್ಯಕ್ರಮವು ಮಂಡ್ಯದ ಗೆಜ್ಜಲಗೆರೆಯಲ್ಲಿ ನಡೆಯಲಿದ್ದು ಅದರ ಸುತ್ತಮುತ್ತಲಿನ ಎತ್ತರದ ಕಟ್ಟಡ ಮತ್ತು ಗೋಪುರಗಳ ವೈಮಾನಿಕ ಪರಿಶೀಲನೆಯನ್ನು ಎಸ್ ಪಿ ಜಿ ನಡೆಸುತ್ತಿರುವುದು ವಿಡಿಯೋದಲ್ಲಿ ನೋಡಬಹುದು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ