ಕನ್ನಡ ಚಿತ್ರರಂಗದ ಹೊಸ ಅಲೆಯ ನಿರ್ದೇಶಕರಲ್ಲಿ ಒಬ್ಬರೆನಿಸಿಕೊಂಡಿರುವ ಮಂಸೋರೆಯ (Mansore) ಹೊಸ ಸಿನಿಮಾ 19.20.21 ಕಳೆದ ವಾರವಷ್ಟೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಸಿನಿಮಾದ ಬಗ್ಗೆ ಅತ್ಯುತ್ತಮ ವಿಮರ್ಶೆಗಳು ವ್ಯಕ್ತವಾಗಿದ್ದರೂ ಸಹ ಸಿನಿಮಾ ನಿರೀಕ್ಷಿತ ಮಟ್ಟಿಗಿನ ಜನರನ್ನು ತಲುಪಿಲ್ಲ. ಸಿನಿಮಾ ಬಿಡುಗಡೆ ಆದ ಒಂದು ವಾರಕ್ಕೆ ಪಿವಿಆರ್ (PVR) ಸಹ ಶೋಗಳನ್ನು ಕಡಿತಗೊಳಿಸಿದ್ದು, ನಿರ್ದೇಶಕ ಮಂಸೋರೆ ಆತಂಕಿತರಾಗಿದ್ದಾರೆ. ಹೊಸ ಮಾದರಿಯ ಸಿನಿಮಾವನ್ನು ಜನ ಕೈಹಿಡಿಯಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ